ರಾಘವೇಂದ್ರ ರಾಜ್ ಕುಮಾರ್ ಮದುವೆ ವಿಡಿಯೋ..ತುಂಬಾ ಹಳೆಯ ಸೊಗಸಾದ ವಿಡಿಯೋ ನೋಡಿ.!

Cinema

ಹೌದು, ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕನ್ನಡ ಸಿನಿಮಾರಂಗದ ಅತ್ಯದ್ಭುತ ನಟ ಮತ್ತು ಹಿರಿಯ ನಟ ಆಗಿರುವ, ಹೆಮ್ಮೆಯ ಡಾಕ್ಟರ್ ನಟ ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಎರಡನೆ ಮಗ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಅವರದೇ ಆದ ಅಭಿನಯದಿಂದ ಈಗಾಗಲೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜಕುಮಾರ್ ಸಹೋದರರನ್ನು ನಟ ರಾಘವೇಂದ್ರ ರಾಜಕುಮಾರ್ ಅವರು ಹೊಂದಿದ್ದಾರೆ. ನಟ ರಾಘವೇಂದ್ರ ರಾಜಕುಮಾರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬರು ವಿನಯ್ ರಾಜಕುಮಾರ್ ಮತ್ತು ಇನ್ನೊಬ್ಬರು ಯುವರಾಜ್ ಕುಮಾರ್.

ಹೌದು ರಾಘವೇಂದ್ರ ರಾಜಕುಮಾರ್ ಅವರು 1965 ರಲ್ಲಿ ಜನಿಸುತ್ತಾರೆ, ಮತ್ತು 1974ರಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಎನ್ನುವ ಚಿತ್ರಕ್ಕೆ ಬಾಲನಟನಾಗಿ ಮಿಂಚುತ್ತಾರೆ ನಂತರ 1975ರಲ್ಲಿ ದಾರಿ ತಪ್ಪಿದ ಮಗ ಎಂಬ ಸಿನಿಮಾದಲ್ಲಿಯೂ ಕೂಡ ಬಾಲ ನಟನಾಗಿ ಮಿಂಚುತ್ತಾರೆ.. ಇದಾದ ಬಳಿಯ ಮೊಟ್ಟ ಮೊದಲ ಬಾರಿಗೆ 1988ರಲ್ಲಿ ಚಿರಂಜೀವಿ ಸುಧಾಕರ್ ಎನ್ನುವ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಈ ಸಿನಿಮಾ ಬಳಿಕ, ನಟ ರಾಘವೇಂದ್ರ ರಾಜ್ ಕುಮಾರ್ ಅವರು, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಅನುಕೂಲಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಭರ್ಜರಿ ಗಂಡು,

ಅನುರಾಗದ ಅಲೆಗಳು, ನಾವಿಬ್ಬರು ನಮಗಿಬ್ಬರು, ಸಾಗರದೀಪ,ಆಟ ಹುಡುಗಾಟ, ಇಬ್ಬರ ನಡುವೆ ಮುದ್ದಿನ ಆಟ, ಶ್ರೀಮತಿ ಕಲ್ಯಾಣ, ಗೆಲುವಿನ ಸರದಾರ, ಸೂತ್ರಧಾರ, ಶಿವರಂಜನಿ, ಸ್ವಸ್ತಿಕ್, ಟುವ್ವಿ  ಟುವ್ವಿ, ಟುವ್ವಿ, ಪಕ್ಕದ ಮನೆ ಹುಡುಗಿ, ಅಮ್ಮನ ಮನೆ, ತ್ರಯಂಬಕಂ, ರಾಜತಂತ್ರ, ಹಾಗೂ ಇತ್ತೀಚಿಗೆ ಪೊಗರು ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ. ಹೌದು ಸ್ನೇಹಿತರೆ ನಟ ರಾಘವೇಂದ್ರ ರಾಜಕುಮಾರ್ ಅವರ ಕುಟುಂಬ ಹೇಗಿದೆ ಗೊತ್ತಾ..? ಮತ್ತು ಅವರ ಕೆಲವು ವಿಸ್ಮಯ ಗಳಿಗೆಯ ದೃಶ್ಯಗಳು ಹೇಗೆ ಸೆರೆಯಾಗಿವೆ ಗೊತ್ತಾ..? ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು…