ಕೊರೋನಾಗಾಗಿ ಮಾಸ್ಕ್ ಧರಿಸುವ ಬದಲು ಇದನ್ನ ಧರಿಸಿ ಎಂದ ತುಪ್ಪದ ಬೆಡಗಿ ರಾಗಿಣಿ..

Cinema News

ದಿನದಿಂದ ದಿನಕ್ಕೆ ಇಡೀ ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಈ ಕೊರೋನಾ ಸೋಂಕಿನಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇನ್ನು ಈಗಲೇ ಚಿತ್ರಮಂದಿರಗಳು ಶಟ್ ಡೌನ್ ಆಗಿವೆ. ಎಷ್ಟೋ ಸಿನಿಮಾ ಚಿತ್ರೀಕರಣವನ್ನ ಕೂಡ ನಿಲ್ಲಿಸಲಾಗಿದೆ. ನಟರು ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಕೊರೋನಾ ಸೋಂಕಿಗೆ ಭಯ ಬೇಡ, ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಿ ಎಂದು ಜಾಗೃತಿಯನ್ನ ಮೂಡಿಸುತ್ತಿದ್ದಾರೆ.

ಎಲ್ಲರೂ ತಪ್ಪದೆ ಮುಖಕ್ಕೆ ಮಾಸ್ಕ್ ಬಳಸುವಂತೆ ಸೆಲೆಬ್ರೆಟಿಗಳು ಜಾಗೃತಿ ಮೂಡಿಸುತ್ತಿದ್ದರೆ, ಇತ್ತ ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ಹೇಳ್ತಾ ಇರೋದೇ ಬೇರೆ. ಹೌದು ನೀವು ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಗಳನ್ನ ಧರಿಸಬೇಡಿ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಕಾರಣ ಇದೆ.

ಹೌದು, ಸಾರ್ವಜನಿಕರಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ನಟಿ ರಾಗಿಣಿ ಮಾಸ್ಕ್ ಬದಲು ಕೈಗೆ ಗ್ಲೌಸ್ ಗಳನ್ನ ಧರಿಸಿ ಕೊರೋನಾದಿಂದ ಬಚಾವ್ ಆಗಿ ಎಂದು ಉಚಿತವಾಗಿಯೇ ಹ್ಯಾಂಡ್ ಗ್ಲೌಸ್ ಗಳನ್ನ ಜನರಿಗೆ ಕೊಡುತ್ತಿದ್ದಾರೆ. ಶೇಕ್ ಎಂಡ್ ಕೊಟ್ಟಾಗ, ಯಾವುದಾದರೂ ವಸ್ತುಗಳನ್ನ ಮುಟ್ಟಿದಾಗ ಕೊರೋನಾ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ಮಾಸ್ಕ್ ಧರಿಸುವ ಬದಲು ಗ್ಲೌಸ್ ಗಳನ್ನ ಧರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಳ್ಳುವುದರ ಜೊತೆಗೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ .

ಸೋಷಿಯಲ್ ಮಿಡಿಯಾದಲ್ಲಿಯೂ ಕೂಡ ಜಾಗೃತಿ ಮೂಡಿಸುತ್ತಿರುವ ನಟಿ ರಾಗಿಣಿ ಸೋಂಕಿಗೆ ಒಳಗಾದವರು ಮಾಸ್ಕ ಧರಿಸುತ್ತಾರೆ, ಇನ್ನು ಸೋಂಕು ಹರಡದಂತೆ ತಡೆಯಲು ಗ್ಲೌಸ್ ಗಳನ್ನ ಖಡ್ಡಾಯವಾಗಿ ಧರಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ನಮ್ಮ ಮೊಬೈಲ್ ಫೋನ್ ಗಳಲ್ಲಿ ಕೂಡ ಬರುತ್ತಿರುವ ಕಲರ್ ಟ್ಯೂನ್ ನಲ್ಲಿ ಸಹ ನಿಮ್ಮ ಬಾಯಿ, ಮೂಗು, ಕಣ್ಣುಗಳನ್ನ ಪದೇ ಪದೇ ಮುಟ್ಟಬೇಡಿ. ಆಗಾಗ ಸ್ಯಾನಿಟೈಸರ್ ಗಳಿಂದ ನಿಮ್ಮ ಕೈಗಳನ್ನ ವಾಷ್ ಮಾಡಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.