5ವರ್ಷವಾದ ಮೇಲೂ ಕಡಿಮೆಯಾಗಿಲ್ಲ ರಾಜಕುಮಾರ ಚಿತ್ರದ ಹವಾ.!ಶ್ರೀಲಂಕಾದಲ್ಲಿ ಏನಾಗಿದೆ ಗೊತ್ತಾ.?

Cinema

ಸ್ನೇಹಿತರೇ, ಕರುನಾಡ ರತ್ನ ಅಪ್ಪು ಅವರು ನಮ್ಮನ್ನೆಲ್ಲಾ ಆಗಲಿ ಎರಡು ತಿಂಗಳಾಗಿದ್ದರು ಇನ್ನು ಅವರ ನೆನಪು ಎಳ್ಳಷ್ಟೂ ಕೂಡ ಮಾಸುತ್ತಿಲ್ಲ. ಹೌದು, ಅವರ ಸಮಾಧಿಗೆ ಪ್ರತಿದಿನ ಸಾವಿರಾರು ಜನ ಬಂದು ಅಪ್ಪು ದರ್ಶನ ಪಡೆದು ಹೋಗುತ್ತಿದ್ದಾರೆ. ಇನ್ನು ನಮಗೆಲ್ಲಾ ಗೊತ್ತಿರುವ ಹಾಗೆ ಪುನೀತ್ ರಾಜ್ ಕುಮಾರ್ ಅವರು ನಟಿಸಿದ್ದ ‘ರಾಜಕುಮಾರ’ ಸಿನಿಮಾ ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ಚಿತ್ರ.

.ಸಂದೇಶ ಸಾರಿದ ಸಿನಿಮಾ..ಈ ಸಿನಿಮಾ ನೋಡಿದ ಸಾವಿರಾರು ಜನ ವೃದ್ಧಾಶ್ರಮದಲ್ಲಿ ಬಿಟ್ಟಿದ್ದ ತಮ್ಮ ತಂದೆ ತಾಯಿಗಳನ್ನ ಮನೆಗೆ ವಾಪಾಸ್ ಕರೆತಂದರು. ಅಂತಹ ಕನ್ನಡದ ಅಪೂರ್ವ ಸಿನಿಮಾ ರಾಜಕುಮಾರ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ಇನ್ನು ರಾಜಕುಮಾರ ಸಿನಿಮಾ ಬಿಡುಗಡೆ ಕಂಡು ಐದು ವರ್ಷ ಆಗಿದ್ದರೂ, ದೇಶ ಭಾಷೆಗಳನ್ನ ಮೀರಿ ಜನರನ್ನ ತಲುಪುತ್ತಿದೆ. ಹೌದು, ಭಾಷೆ ಗಡಿಯನ್ನ ದಾಟಿರುವ ರಾಜಕುಮಾರ ಚಿತ್ರ ಪಕ್ಕದ ಶ್ರೀಲಂಕಾ ದೇಶದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪ್ರಸಾರವಾಗುವ ಮೂಲಕ ಅತೀ ದೊಡ್ಡ ಗೌರವ ನೀಡಲಾಗಿದೆ. ಹೌದು, ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.

ಇದೆ ಕಾರಣದಿಂದ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿಯೂ ಕೂಡ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಇನ್ನು ಇದರ ಒಂದು ಭಾಗವಾಗಿ ಭಾರತ ದೇಶದಲ್ಲಿರುವ ವಿಶೇಷ ತಾಣಗಳು, ತುಂಬಾ ವೈಶಿಷ್ಟ್ಯ ಹೊಂದಿರುವ ಸಿನಿಮಾಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಲಾಗುತ್ತಿದ್ದು, ಇದರ ಭಾಗವಾಗಿ ಈ ಬಾರಿ ಅಪ್ಪು ಅಭಿಯನದ ರಾಜಕುಮಾರ ಸಿನಿಮಾವನ್ನ ಭಾರತೀಯ ರಾಯಭಾರ ಕಚೇರಿಯಲ್ಲಿ ಪರಿಚಯಿಯಲಾಗುತ್ತಿದೆ. ಇನ್ನು ಇದರ ಬಗ್ಗೆ ಶ್ರೀಲಂಕದಲ್ಲಿರುವ ಭಾರತೀಯ ರಾಯಭಾರ ಕಛೇರಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಮಾಹಿತಿಯನ್ನ ಹಂಚಿಕೊಂಡಿದೆ. ಇನ್ನು ಆ ಪೋಸ್ಟ್ ನಲ್ಲಿ ವೃದ್ಧಾಶ್ರಮಗಳ ಕುರಿತು ಕಟ್ಟಿಕೊಡುವ ಚಿತ್ರವಾಗಿರುವ ರಾಜಕುಮಾರ ದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಪ್ರಿಯಾ ಆನಂದ್ ನಟಿಸಿದ್ದಾರೆ ಎಂದು ಶ್ರೀಲಂಕಾದ ಭಾಷೆಯಾದ ಸಿಂಹಳೀ ಹಾಗೂ ತಮಿಳು ಭಾಷೆಯಲ್ಲೂ ಕೂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ.

ಇನ್ನು ರಾಜಕುಮಾರ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಈ ಟ್ವೀಟ್ ಗೆ ರೀ ಟ್ವೀಟ್ ಮಾಡಿದ್ದು, ಕುಟುಂಬಗಳ ಮೌಲ್ಯ ಸಾರುವ ಸಂದೇಶ ಹೊಂದಿರುವ ಚಿತ್ರ ಇದಾಗಿದ್ದು, ಆಜಾದಿ ಕಾ ಅಮೃತ್ ಮಹೋತ್ಸವ’ನ ವಿಶೇಷ ಮಾಲಿಕೆಯಲ್ಲಿ ರಾಜಕುಮಾರ ಚಿತ್ರವನ್ನ ಪರಿಚಯಿಸುತ್ತಿರುವುದಕ್ಕೆ ಧನ್ಯವಾದಗಳು ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಫಿಲ್ಮ್​ಫೇರ್, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳನ್ನ ತನ್ನ ಮುಡುಗೇರಿಸಿಕೊಂಡಿರುವ ಅತ್ತ್ಯತ್ತಮ ಚಿತ್ರ ರಾಜಕುಮಾರ ಈಗ ದೇಶ ಭಾಷೆ ಎಂಬ ಭೇದವಿಲ್ಲದೆ ಗಡಿಗಳನ್ನ ದಾಟಿ ಜನರಿಗೆ ಪರಿಚಯವಾಗುತ್ತಿರುವುದು ಕನ್ನಡಿಗರಿಗೆ, ಅಪ್ಪು ಅಭಿಮಾನಿಗಳಿಗೆ ದೊಡ್ಡ ಸಂತಸವನ್ನೇ ತಂದಿದೆ..