ಸೀರಿಯಲ್ ನಲ್ಲಿ ಅಣ್ಣ ತಂಗಿಯಾಗಿದ್ದ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡ್ತಿದೆ.!ಈ ಫೋಟೋಗ್ಯಾಲರಿ ನೋಡಿ..

Entertainment

ಬಂಧುಗಳೇ ನಾವು ನೀವು ನೋಡಿದ ಹಾಗೆ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಕನ್ನಡ ಕಿರುತೆರೆಯ ಕಲಾವಿದರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ಕೆಲ ಸ್ಟಾರ್ ನಟರು ಸಹ ನಿಜಜೀವನದಲ್ಲಿ ವೈವಾಹಿಕ ಜೀವನ ಆರಂಭಿಸಿದರು. ಕನ್ನಡ ಕಿರುತೆರೆಯಲ್ಲಿ ಈಗಾಗ್ಲೇ ಸಾಕಷ್ಟು ಜೋಡಿಗಳು ದಾಂಪತ್ಯ ಜೀವನ ಆರಂಭಿಸಿದ್ದು ಅದೇ ಸಾಲಿಗೆ ಇದೀಗ ಮತ್ತೊಂದು ಕನ್ನಡ ಕಿರುತೆರೆಯ ಜೋಡಿ ಇಷ್ಟರಲ್ಲಿಯೇ ಮದುವೆ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಕಿರುತೆರೆಯ ಖ್ಯಾತ ನಟ ನಟಿಯರಾದ ಲಾವಣ್ಯ ಮತ್ತು ಶಶಿ ಈ ಎರಡು ಹೆಸರುಗಳು ಕನ್ನಡ ಧಾರವಾಹಿ ಪ್ರಿಯರಿಗೆ ಗೊತ್ತಿದೆ. ನೋಡಲು ತುಂಬಾ ಮುದ್ದಾಗಿದೆ ಈ ಜೋಡಿ.

ಹೌದು ಸಂಘರ್ಷ ಕನ್ನಡ ಧಾರಾವಾಹಿ ಖ್ಯಾತಿಯ ನಟಿ ಲಾವಣ್ಯ, ಮತ್ತು ಆಕಾಶ ದೀಪ ಎನ್ನುವ ಸೀರಿಯಲ್ನಲ್ಲಿ ನಟ ಶಶಿ ಅವರು ಅಭಿನಯ ಮಾಡಿದ್ದಾರೆ. ಜೋಡಿ ಅವರದೇ ಆದ ಬಾರಿ ಅಭಿನಯದ ಮೂಲಕ ಸಾಕಷ್ಟು ಹೆಸರು ಮಾಡಿದೆ. ಜೊತೆಗೆ ಅವರದೇ ಆದ ಅಭಿಮಾನಿ ಬಳಗ ಕೂಡ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಲಾವಣ್ಯ ಮತ್ತು ಶಶಿ ಅವರು ಇತ್ತೀಚೆಗೆ ಅವರವರ ಎರಡು ಮನೆಯವರ ಒಪ್ಪಿಗೆ ಪಡೆದು ಭರ್ಜರಿಯಾಗಿ ಸ್ನೇಹಿತರೊಟ್ಟಿಗೆ ಬಂಧುಗಳ ಆಶ್ರಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಕನ್ನಡ ಕಿರುತೆರೆ ಇನ್ನೊಂದು ಧಾರಾವಾಹಿಯಲ್ಲಿ ಅಣ್ಣ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿತ್ತು.

ರಾಜ-ರಾಣಿ ಎಂಬ ಧಾರಾವಾಹಿಯಲ್ಲಿ ಈ ಜೋಡಿ ಅಣ್ಣ-ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿತ್ತು. ನಟಿ ಲಾವಣ್ಯ ಅವರನ್ನ ಶಶಿ ಅವರು ಇದೇ ರಾಜಾ ರಾಣಿ ಧಾರಾವಾಹಿಯಲ್ಲಿ ನಟಿಸುವ ವೇಳೆ ತಾವು ಲಾವಣ್ಯ ಅವರನ್ನ ಪ್ರೀತಿಸುವ ವಿಷಯ ಕೇಳಿ ಬಂದಿತ್ತು. ನಂತರ ಲಾವಣ್ಯ ಅವರಿಗೆ ಶಶಿ ಅವರೇ ಮೊದಲು ಪ್ರಪೋಸ್ ಮಾಡಿ, ತಾವು ಪ್ರೀತಿಸುತ್ತಿರುವ ವಿಷಯ ಹೇಳಿದ್ದರು. ಆಗ ಎರಡು ಮನೆ ಕಡೆಯವರು ಒಪ್ಪಿಗೆ ನೀಡಿ ಇವರಿಗೆ ಮೊನ್ನೆಯಷ್ಟೇ ನಿಶ್ಚಿತಾರ್ಥ ಕಾರ್ಯವನ್ನು ಮಾಡಿದ್ದಾರೆ. ಹಾಗೆ ನಿಶ್ಚಿತಾರ್ಥದ ಫೋಟೋ ಗ್ಯಾಲರಿ ಕೂಡ ತುಂಬಾ ವೈರಲ್ ಆಗುತ್ತಿದೆ.

ಹೌದು ನಟಿ ಲಾವಣ್ಯ ಅತ್ತ ತೆಲುಗು ಕಿರುತೆರೆಯಲ್ಲೂ ಕೂಡ ಅಭಿನಯಿಸಿ ಸಕ್ಕತ್ ಪ್ರಖ್ಯಾತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಜೋಡಿಗೆ ಇದೀಗ ಸ್ನೇಹಿತರು ಮತ್ತು ಕುಟುಂಬದವರು ಶುಭಕೋರಿದ್ದು ಇಷ್ಟರಲ್ಲಿ ವೈವಾಹಿಕ ಜೀವನ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆ ಈ ಹೊಸ ಜೋಡಿಗೆ ಶುಭಕೋರಿ ಧನ್ಯವಾದಗಳು..