ಇಡೀ ದೇಶದಾದ್ಯಂತ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನ ಕೈ ಗೊಳ್ಳುತ್ತಿವೆ. ಹಾಗೆಯೇ ರಾಜಸ್ಥಾನ ಸರ್ಕಾರ ಮಾರ್ಚ್ ತಿಂಗಳು ೩೧ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

ಇನ್ನು ಇದೆ ಸಂಧರ್ಭದಲ್ಲಿ ರಾಜಸ್ಥಾನದ ಅಲ್ವರ್ ಜಿಲ್ಲೆಯ ಕಲೆಕ್ಟರ್ ಆಗಿರುವ ಇಂದ್ರಜಿತ್ ಸಿಂಗ್ ರವರು ಕೊರೋನಾ ಸೋಂಕು ಹಿನ್ನಲೆಯಲ್ಲಿ ಸಾರ್ವಜನಿಕರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೌದು, ಅಲ್ವರ್ ಜಿಲ್ಲೆಯಾದ್ಯಂತ ಎಲ್ಲೇ ೫ ಜನಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಕಾಣಿಸಿಕೊಂಡಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆದೇಶ ಮಾಡಿದ್ದಾರೆ.

ಇನ್ನು ಎಲ್ಲರಿಗೂ ಕಾನೂನು ಒಂದೇ ಆಗಿದ್ದು ಅವ್ವರು ವಿಐಪಿ ಆಗಿರಲಿ, ದೊಡ್ಡ ವ್ಯಕ್ತಿಯೇ ಆಗಿರಲಿ ಅವರನ್ನ ಬಿಡುವುದಿಲ್ಲ ಎಂದು ಕಲೆಕ್ಟರ್ ಇಂದ್ರಜಿತ್ ಸಿಂಗ್ ಆದೇಶ ಮಾಡಿದ್ದಾರೆ. ಇನ್ನು ಸಾರ್ವಜನಿಕರಿಗೆ ದಿನನಿತ್ಯದ ಬಳಕೆಗೆ ಬೇಕಾದ ದಿನಸಿ, ತರಕಾರಿ, ಹಾಲು ಮತ್ತು ಮೆಡಿಕಲ್ ಶಾಪ್ ಗಳನ್ನ ಬೆಳಿಗ್ಗೆ ಮಾತ್ರ ತೆರೆಯಲಿದ್ದು, ಈ ಸಮಯದಲ್ಲಿ ಸಾರ್ವಜನಿಕರು ತಮಗೆ ಬೇಕಾದ ಸಾಮಾನುಗಳನ್ನ ಖರೀದಿ ಮಾಡಲು ಹೋಗಬಹುದು ಎಂದು ಆದೇಶ ಮಾಡಿದ್ದಾರೆ. ಜೊತೆಗೆ ಇವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಕೈನಲ್ಲಿ ಸ್ಯಾನಿಟೈಸರ್ ಗಳನ್ನ ಖಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಇನ್ನು ಇದೆಲ್ಲಾ ಬೆಳಗಿನ ಸಮಯದಲ್ಲಿ ಮಾತ್ರ ಇರಲಿದ್ದು ಇವರೂ ಕೂಡ ಮಧ್ಯಾನ್ಹ ಮತ್ತು ಸಂಜೆಯ ವೇಳೆ ಶಾಪ್ ಗಳನ್ನ ಮುಚ್ಚಬೇಕು ಎಂದು ಹೇಳಿದ್ದಾರೆ.

ಇನ್ನು ರೋಗಿಗಳು ಕೂಡ ಹೊರಹೋಗಬೇಕಾದಲ್ಲಿ ವೈದ್ಯರು ನೀಡಿರುವ ಮೆಡಿಕಲ್ ಸರ್ಟಿಫಿಕೇಟ್ ಇರಬೇಕು. ಇನ್ನು ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಮಾತ್ರ ಹೊರಬರಬೇಕೆಂದು ಆದೇಶ ನೀಡಿದ್ದು, ಸರ್ಕಾರಿ ಉದ್ಯೋಗಿಗಳು ಕೂಡ ಮನೆಯಿಂದ ಹೊರಗೆ ಬರಬಾರದು ಎಂಬ ಆದೇಶ ನೀಡಿದ್ದಾರೆ.