ಅಚ್ಚರಿ ಮೂಡಿಸಿದ ರಾಜೀವ್ ಎಲಿಮಿನೇಷನ್ ! ಬಿಗ್ ಬಾಸ್ ನಲ್ಲಿ 8 ವಾರಗಳಿದ್ದ ರಾಜೀವ್ ಗೆ ಸಿಕ್ಕ ಒಟ್ಟು ಹಣ ಎಷ್ಟು ಗೊತ್ತಾ ?

Uncategorized

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ ಕಾರ್ಯಕ್ರಮದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಯನ್ನ ನೋಡಿ ವೀಕ್ಷಕರು ಅಕ್ಷರಷಃ ಶಾಕ್ ಆಗಿದ್ದಾರೆ. ಹೌದು, ಬಿಗ್ ಬಾಸ್ ೮ರ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ರಾಜೀವ್ ಎಲಿಮನೆಟ್ ಆಗಿ ಹೊರಬಂದಿರುವುದು ಪ್ರೇಕ್ಷಕರ ಜೊತೆಗೆ ಬಿಗ್ ಬಾಸ್ ಪ್ರೇಕ್ಷಕರಿಗೂ ಅಚ್ಚರಿಗೆ ಕಾರಣವಾಗಿದೆ. ಈ ಸೀಸನ್ ನಲ್ಲಿ ಫೈನಲ್ ಗೆ ಹೋಗುವ ಟಾಪ್ ಸ್ಪರ್ಧಿಗಳಲ್ಲಿ ರಾಜೀವ್ ಇರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತಿತ್ತು. ಆದರೆ ಅದೆಲ್ಲವೂ ಈಗ ತಲೆಕೆಳಗಾಗಿದೆ.

ಇನ್ನು ಬಿಗ್ ಬಾಸ್ ಎಂಟನೇ ವಾರದಲ್ಲಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ಸ್ಪರ್ಧಿಗಳು ಮಂಜು ಪಾವಗಡ, ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ,ರಾಜೀವ್, ವೈಷ್ಣವಿ ಹಾಗೂ ರಘು. ಇನ್ನು ಅನಾರೋಗ್ಯದ ಕಾರಣ ಈ ವಾರ ಕೂಡ ಸುದೀಪ್ ಅವರು ಇಲ್ಲದ ಕಾರಣ, ಸ್ಪರ್ಧಿಗಳಿಗೆ ಚಟುವಟಿಕೆಗಳನ್ನ ಕೊಟ್ಟಿದ್ದ ಬಿಗ್ ಬಾಸ್ ಆ ಚಟುವಟಿಕೆಗಳ ಮೂಲಕ ಒಬ್ಬೊಬ್ಬರೇ ಸ್ಪರ್ಧಿಗಳು ಸೇಫ್ ಆಗುವಂತೆ ಮಾಡಲಾಗಿತ್ತು. ಇನ್ನು ಚಟುವಟಿಕೆಗಳ ಮೂಲಕ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಕೊನೆಗೆ ಸೇಫ್ ಆಗದೆ ಉಳಿದವರು ಮಾತ್ರ ಪ್ರಶಾಂತ್ ಸಂಬರ್ಗಿ ಮತ್ತು ರಾಜೀವ್ ಇಬ್ಬರೇ.

ಇನ್ನು ರಾಜೀವ್ ಮತ್ತು ಸಂಬರ್ಗಿ ಇವರಿಬ್ಬರಲ್ಲಿ ಮನೆಯಿಂದ ಹೊರಹೋಗಬೇಕಾಗಿರುವವರು ಯಾರು ಎಂಬ ಪ್ರಶ್ನೆ ಕೇಳಿದಾಗ ಸ್ಪರ್ಧಿಗಳೆಲ್ಲಾ ಹೇಳಿದ್ದು ಪ್ರಶಾಂತ್ ಸಂಬರಗಿ ಅವರ ಹೆಸರನ್ನ. ಆದರೆ ಅಲ್ಲಿ ಆಗಿದ್ದೆ ಬೇರೆ. ಹೌದು, ಬಿಗ್ ಬಾಸ್ ರಾಜೀವ್ ಅವರ ಜರ್ನಿ ವಿಡಿಯೋ ಪ್ರಸಾರ ಮಾಡುವ ಮೂಲಕ ಈ ವಾರ ಮನೆಯಿಂದ ಹೊರಹೋಗಬೇಕಾದ ಸ್ಫರ್ಧಿ ರಾಜೀವ್ ಎಂದು ಹೇಳಿದ್ರು. ಇದನ್ನ ಕೇಳಿದ ಸ್ಪರ್ಧಿಗಳಿಗೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದಂತೂ ನಿಜ. ಇನ್ನು ಸಿನಿಮಾದಲ್ಲಿ ಸಾಕಷ್ಟು ಹೆಸರು ಮಾಡದಿದ್ದರೂ ರಾಜೀವ್ ಅವು ಸಿಸಿಎಲ್ ಕ್ರಿಕೆಟ್ ಲೀಗ್ ಮೂಲಕ ಸಾಕಷ್ಟು ಹೆಸರು ಮಾಡಿದಲ್ಲದೆ, ತಮ್ಮದೇ ಆದ ಅಭಿಮಾನಿ ಬಳಗ ಕೂಡ ಸಂಪಾದನೆ ಮಾಡಿದ್ರು. ಇನ್ನು ರಾಜೀವ್ ಅವರಿಗೆ ಬಿಗ್ ಬಾಸ್ ನಿಂದ ದೊಡ್ಡ ಸಂಭಾವನೆಯೇ ಸಿಕ್ಕಿದ್ದು, ಎಂಟು ವಾರಗಳ ಕಾಲ ಬಿಗ್ ಮನೆಯಲ್ಲಿದ್ದ ರಾಜೀವ್ ವಾರಕ್ಕೆ ೫೦ ಸಾವಿರದಂತೆ ಒಟ್ಟು 4ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.