ಸಿಸಿಎಲ್ ಸಿಕ್ಸರ್ ಗಳ ಸರದಾರ ರಾಜೀವ್ ಅವರ ಪತ್ನಿ ಯಾರು ಗೊತ್ತಾ ? ಏನ್ ಕೆಲಸ ಮಾಡ್ತಾರೆ ನೋಡಿ..

Entertainment

ನಮಸ್ತೇ ಸ್ನೇಹಿತರೇ, ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕಿರುತೆರೆ, ಬೆಳ್ಳಿತೆರೆ, ಗಾಯಕ, ಬೈಕರ್, ಕ್ರಿಕೆಟ್ ಸೇರಿದಂತೆ ಹಲವು ವಿಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅದರಲ್ಲಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರವಾಗಿ ಆಡುತ್ತಿದ್ದ ನಟ ರಾಜೀವ್ ಕೂಡ ಈ ಸಲದ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿರುವುದು ನಿಮಗೆಲ್ಲಾ ಗೊತ್ತಿರುವ ವಿಷಯವೇ..ಸ್ಯಾಂಡಲ್ವುಡ್ ನ ಕೆಲ ಚಿತ್ರಗಳಲ್ಲಿ ಕೂಡ ರಾಜೀವ್ ನಟಿಸಿದ್ದರೂ ಕೂಡ ಸಿನಿಮಾಗಳನ್ನು ಅಷ್ಟೊಂದು ಹೆಸರು ಮಾಡದ ರಾಜೀವ್ ಅವರು ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಸಿಕ್ಸರ್ ಗಳ ಸರದಾರ ಎಂದೇ ಹೆಸರು ಮಾಡಿದ್ದಾರೆ.

ಇನ್ನು ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನ ಕರ್ನಾಟಕ ಬುಲ್ಡೋಜರ್ಸ್ ಪರವಾಗಿ ಕ್ರಿಕೆಟ್ ಆಡುತ್ತಿದ್ದ ರಾಜೀವ್ ಅವರು ನಟ ಕಿಚ್ಚ ಸುದೀಪ್ ಅವರ ಜೊತೆ ತುಂಬಾ ಆಪ್ತರಾಗಿದ್ದಾರೆ. ಇನ್ನು ಕ್ರಿಕೆಟ್ ನಿಂದಲೇ ಇಷ್ಟೆಲ್ಲಾ ಹೆಸರು ಮಾಡಿರುವ ರಾಜೀವ್ ಅವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ..ಬಹುತೇಕರಿಗೆ ರಾಜೀವ್ ಅವರು ಮದುವೆ ಆಗಿರುವ ವಿಚಾರಣೆ ಗೊತ್ತಿಲ್ಲ. ರಾಜೀವ್ ಅವರು ರೇಶ್ಮಾ ಎಂಬುವವರ ಜೊತೆ ೨೦೨೦ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ರಾಜೀವ್ ಅವರ ಪತ್ನಿ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದಾರಂತೆ.

ರೇಷ್ಮಾ ಅವರು ಸ್ವಂತ ಸ್ಟುಡಿಯೋವೊಂದನ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಫ್ಯಾಶನ್ ಡಿಸೈನರ್ ಕೂಡ ಆಗಿರುವ ರೇಶ್ಮಾ ಅವರು ರಾಜೀವ್ ಅವರ ಡ್ರೆಸ್ ಡಿಸೈನ್ ಗಳನ್ನ ಅವರೇ ನೋಡಿಕೊಳ್ಳುತ್ತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ನಟಿ ಶುಭಾ ಪೂಂಜಾ ಅವರ ಜೊತೆ ಮಾತನಾಡುತ್ತಿರುವಾಗ ರಾಜೀವ್ ಅವರು ನನ್ನ ಪತ್ನಿಯ ಬಳಿ ಮೇಕಪ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಇನ್ನು ಹಲವು ಉದ್ಯಮಗಳಲ್ಲಿ ಭಾಗಿಯಾಗಿರುವ ರಾಜೀವ್ ಅವರು ಕ್ರಿಕೆಟ್ ನಲ್ಲಿ ತಮ್ಮನ್ನ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸ್ನೇಹಿತರೇ, ನಿಮ್ಮ ಪ್ರಕಾರ ರಾಜೀವ್ ಅವರು ಬಿಗ್ ಬಾಸ್ ಮನೆಯಲ್ಲಿ ಎಷ್ಟು ವಾರಗಳ ಕಾಲ ಉಳಿಯಲಿದ್ದಾರೆ ನಿಮ್ಮ ಅಭಿಪ್ರಾಯ ತಿಳಿಸಿ..