ಕಿರಿಕ್ ಪಾರ್ಟಿ ಚಿತ್ರ ತಂಡವನ್ನು ಬಂಧಿಸಿ ತರುವಂತೆ ಕೋರ್ಟ್ ನಿಂದ ಆದೇಶ ! ಸಂಕಷ್ಟದಲ್ಲಿ ನಟ ರಕ್ಷಿತ್ ಶೆಟ್ಟಿ..

Cinema

ಸ್ನೇಹಿತರೇ,2016ರಲ್ಲಿ ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ಚಿತ್ರ ಸ್ಯಾಂಡಲ್ವುಡ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಕಾಲೇಜು ಹುಡುಗ ಹುಡುಗಿಯರ ಕುರಿತಾದ ಈ ಚಿತ್ರ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷೆಬ್ ಶೆಟ್ಟಿ ಅವರನ್ನ ಸ್ಟಾರ್ ಗಳನ್ನಾಗಿ ಮಾಡಿತ್ತು ಈ ಚಿತ್ರ. ಇನ್ನು ನಟಿ ರಶ್ಮಿಕಾ ಮಂದಣ್ಣ ಇಂದು ಏನೇ ಆಗಿದ್ದರು ಅದಕ್ಕೆಲ್ಲಾ ಕಾರಣ ಇದೆ ಕಿರಿಕ್ ಪಾರ್ಟಿ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಹಲವಾರು ದಾಖಲೆಗಳಿಗೆ ನಾಂದಿ ಹಾಡಿದ ಈ ಚಿತ್ರ, ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಇಷ್ಟೆಲ್ಲಾ ಸೌಂಡ್ ಮಾಡಿದ್ದ ಕಿರಿಕ್ ಪಾರ್ಟಿ ಚಿತ್ರದ ತಂಡಕ್ಕೆ ಈಗ ಸಂಕಷ್ಟ ಒಂದು ಎದುರಾಗಿದೆ. ಈ ಚಿತ್ರ ತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಚಿತ್ರದ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷೆಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಮತ್ತು ಪರಮ್ವಾ ಸ್ಟುಡಿಯೋ ಆ’ರೋಪಿಗಳಾಗಿದ್ದಾರೆ.

ಐದು ವರ್ಷಗಳ ಹಿಂದೆ ತೆರೆ ಕಂಡ ‘ಕಿರಿಕ್ ಪಾರ್ಟಿ’ ಕನ್ನಡ ಸಿನಿಮಾ ಬಹಳ ಸದ್ದು ಮಾಡಿತ್ತು. ನೂರಕ್ಕೂ ಹೆಚ್ಚು ದಿನ ಥೇಯಿಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡು ಭಾರೀ ಯಶಸ್ಸು ಕಂಡಿತ್ತು. ರಕ್ಷಿತ್ ಶೆಟ್ಟಿ, ರಶ್ಮಿಕಾ, ರಿಷಬ್ ಶೆಟ್ಟಿ ಮೊದಲಾದವರಿಗೆ ಬ್ರೇಕ್ ಕೊಟ್ಟ ಚಿತ್ರವಿದು. ಆದರೆ ಅದೇ ಸಮಯಕ್ಕೆ ಈ ಚಿತ್ರ ತಂಡದ ವಿರುಧ್ಧ ಕೇಸ್ ಒಂದು ದಾಖಲಾಗಿತ್ತು. ಈ ಕೇಸ್ ವಿಚಾರಣೆ ಇನ್ನೂ ಮುಗಿದಿಲ್ಲ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಅನುಮತಿ ಇಲ್ಲದೇ ತಮ್ಮ ಕಂಪನಿಯ ಹಾಡೊಂದನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಆರೋಪಿಸಿ ಲಹರಿ ಆಡಿಯೋ ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು. 2016 ರಲ್ಲಿ ಕಾಪಿ ರೈಟ್ ಆಕ್ಟ್ 63a, 63b ಅನ್ವಯ ಕಿರಿಕ್ ಪಾರ್ಟಿ ಚಿತ್ರ ತಂಡದ ಮೇಲೆ ದೂರು ದಾಖಲಾಗಿತ್ತು.

ನಟ ರವಿಚಂದ್ರನ್ ಅಭಿನಯದ ಶಾಂತಿ ಕ್ರಾಂತಿ ಚಿತ್ರದ ಹಾಡನ್ನು ಕಾಪಿ ರೈಟ್ ಉಲ್ಲಂಘಿಸಿ ಅಕ್ರಮವಾಗಿ ಕಿರಿಕ್ ಪಾರ್ಟಿ ಚಿತದಲ್ಲಿ ಬಳಸಲಾಗಿದೆ ಎಂದು ಆರೋಪಿಸಿ ಲಹರಿ ಮ್ಯೂಸಿಕ್ ಸಂಸ್ಥೆ ದೂರು ನೀಡಿತ್ತು. ಈ ವಿಷಯವಾಗಿ ಆರೋಪಿಗಳಾದ ರಕ್ಷಿತ್ ಶೆಟ್ಟಿ, ಋಷೆಬ್ ಶೆಟ್ಟಿ, ಅಜನೀಶ್ ಲೋಕನಾಥ್, ಪರಂವ ಸ್ಟುಡಿಯೋ ಗೆ 8 ಬಾರಿ ಬಂಧನ ರಹಿತ ವಾರೆಂಟ್ ಜಾರಿ ಮಾಡಿದ್ದರೂ ಇದುವರೆಗೆ ಇವರು ಒಮ್ಮೆಯೂ ನ್ಯಾಯಾಲಯದ ವಿಚಾರಣೆಗೆ. ಹಾಜರಾಗಿಲ್ಲ. ಆದ್ದರಿಂದ ಈ ಬಾರಿ ಮೇ 27 ರ ಒಳಗೆ ಈ ಆರೋಪಿಗಳನ್ನು ಬಂಧಿಸಿ ತರುವಂತೆ ಪೊಲೀಸರಿಗೆ ನ್ಯಾಯಾಲಯ ಆಜ್ಞಾಪಿಸಿದೆ. ಇವರ ವಿರುದ್ಧ ದ ಆರೋಪ ಸಾಬೀತಾದರೆ ಚಿತ್ರ ತಂಡಕ್ಕೆ ಭಾರೀ ಮುಖಭಂಗವಾಗುವುದಲ್ಲದೆ ಶಿ’ಕ್ಷೆ ಅಥವಾ ದಂಡವೂ ಸಿಗಲಿದೆ.