ರಕ್ಷಿತ್ ಶೆಟ್ಟಿಯನ್ನ ಮದ್ವೆಯಾಗುತ್ತಾರಾ ನಟಿ ರಮ್ಯಾ ! ಇದರ ಬಗ್ಗೆ ಸ್ವತಃ ಮೋಹಕತಾರೆ ಹೇಳಿದ್ದೇನು ಗೊತ್ತಾ ?

Cinema

ಸ್ನೇಹಿತರೇ, ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋಹಕ ತಾರೆ ರಮ್ಯಾ ಮತ್ತು ನಟ ರಕ್ಷಿತ್ ಶೆಟ್ಟಿ ಅವರ ಮದುವೆಯ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು, ಈಗಾಗಲೇ ಸಿನಿಮಾ ಮತ್ತು ರಾಜಕಾರಣದಿಂದ ದೂರ ಆಗಿಬಿಟ್ಟಿದ್ದಾರೆ ನಟಿ ರಮ್ಯಾ. ಇನ್ನು ರಮ್ಯಾ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು 18 ವರ್ಷಗಳ ಮೇಲೆ ಆಗಿದೆ. ಇನ್ನು ಅವರ ಅಭಿಮಾನಿಗಳು ನೀವು ಯಾವಾಗ ರಾಜಕಾರಣ ಹಾಗೂ ಸಿನಿಮಾರಂಗಕ್ಕೆ ಮತ್ತೆ ಹಿಂದಿರುಗುತ್ತೀರಾ ಎಂಬ ಪ್ರಶ್ನೆಗಳನ್ನ ಸಾಮಾಜಿಕ ಜಾಲತಾಣಗಳ ಮೂಲಕ ಕೇಳುತ್ತಿರುತ್ತಾರೆ.

ಇನ್ನು ಹಲವಾರು ವರ್ಷಗಳ ಕಾಲ ಚಂದನವನದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು ತಮ್ಮ ಅಭಿಮಾನಿಗಳು ಕೇಳುವ ವಿಭಿನ್ನ ರೀತಿಯ ಪ್ರಶ್ನೆಗಳಿಗೆ ರಿಪ್ಲಯ್ ಮಾಡುತ್ತಿರುತ್ತಾರೆ. ಇನ್ನು ಹೀಗೆ ಅಭಿಮಾನಿಯೊಬ್ಬ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ನನ್ನ ಜೀವನದಲ್ಲಿ ರಾಜಕಾರಣ ಮತ್ತು ಸಿನಿಮಾ ರಂಗ ಮುಗಿದ ಅಧ್ಯಾಯ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ ನಟಿ ರಮ್ಯಾ. ಇನ್ನು ಮೋಹಕ ತಾರೆಯ ಈ ಉತ್ತರ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇನ್ನು ಇದೆಲ್ಲದರ ನಡುವೆ ಬೇರೆ ಬೇರೆ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡುವ ರಮ್ಯಾ ಅವರು ತಮ್ಮ ಮದುವೆ ಬಗ್ಗೆ ಮಾತ್ರ ಏನೂ ಮಾತನಾಡುತ್ತಿಲ್ಲ.

ಆದರೆ ಈಗ ರಮ್ಯಾ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಯೊಬ್ಬರು ನೀವು ನಟ ರಕ್ಷಿತ್ ಶೆಟ್ಟಿಯನ್ನ ಮದುವೆಯಾಗಿ ಎಂದು ಸಲಹೆ ನೀಡಿದ್ದು, ಇನ್ನು ಇದಕ್ಕೆ ಪ್ರತ್ಯುತ್ತರ ನೀಡಿರುವ ರಮ್ಯಾ ಅವರು ನಟ ರಕ್ಷಿತ್ ಶೆಟ್ಟಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಮೋಜಿಯನ್ನ ಪೋಸ್ಟ್ ಮಾಡಿ ಅಷ್ಟಕ್ಕೇ ಸುಮ್ಮನಾಗಿದ್ದಾರೆ. ಇನ್ನು ಇಷ್ಟಕ್ಕೆ ಸುಮ್ಮನಾಗದ ರಮ್ಯಾ ಅವರು ನೀವು ಈಗಾಗಲೇ ಮದ್ವೆಯಾಗಿಬಿಟ್ಟಿದ್ದೀರಾ! ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ನೀವು ನನ್ನ ಜೊತೆಗೆ ಮದ್ವೆಯಾಗಿ ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾನೆ. ಇನ್ನು ಅಭಿಮಾನಿಗಳ ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವ ರಮ್ಯಾ ಅವರು ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ಇನ್ನು ಅಭಿಮಾನಿಗಳ ನಾನಾ ತರದ ಪ್ರಶ್ನೆಗಳಿಗೆ ಬೇಸರವಾಗಿರುವ ರಮ್ಯಾ ಅವರು ಮದ್ವೆಯಾದರೆ ಜೀವನದಲ್ಲಿ ಖುಷಿಯಾಗಿರಲು ಸಾಧ್ಯವಿಲ್ಲ ಎಂದು ಅಭಿಮಾನಿಯೇ ಪ್ರಶ್ನೆಗೆ ಖಡಕ್ ಆಗಿಯೇ ಉತ್ತರಿಸಿದ್ದು, ರಮ್ಯಾ ಅವರು ಮದುವೆಯೇ ಆಗುವುದಿಲ್ಲವೇನೋ ಎಂಬ ಅನುಮಾನ ಅವರ ಅಭಿಮಾನಿಗಳಲ್ಲಿ ಕಾಡಲು ಶುರುವಾಗಿದೆ.