33ವರ್ಷಗಳ ಬಳಿಕ ಮರು ಪ್ರಸಾರವಾದ್ರು ದಾಖಲೆಗಳೆನ್ನಲ್ಲಾ ಉಡೀಸ್ ಮಾಡಿ ವಿಶ್ವದಾಖಲೆ ನಿರ್ಮಿಸಿದ ರಾಮಾಯಣ

Entertainment
Advertisements

ಲಾಕ್ ಡೌನ್ ಸಮಯದಲ್ಲಿ ಜನರು ಕಾಲ ಕಳೆಯುವುದು ತುಂಬಾ ಕಷ್ಟ, ಹಾಗಾಗಿ 80ರ ದಶಕದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯನ್ನು ಮತ್ತೆ ಮರು ಪ್ರಸಾರ ಮಾಡಬೇಕೆಂದು ಬೇಡಿಕೆ ಬಂದ ಹಿನ್ನಲೆಯಲ್ಲಿ, ಮತ್ತೆ ಡಿಡಿ ವಾಹಿನಿಯಲ್ಲಿ ರಾಮಾಯಣ ಮರು ಪ್ರಸಾರವಾಗಿತ್ತು.

Advertisements

ಈಗ ೩೩ ವರ್ಷಗಳ ಬಳಿಕ ಮರು ಪ್ರಸಾರವಾದ ರಾಮಾಯಣ, ನಿರೀಕ್ಷೆಗೂ ಮೀರಿದ ಜನಪ್ರಿಯತೆ ಗಳಿಸಿದ್ದು, ಈಗ ಕಿರುತೆರೆ ಲೋಕದಲ್ಲಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದು, ವಿಶ್ವದಾಖಲೆ ನಿರ್ಮಿಸಿದೆ. ಇನ್ನು ಇದರ ಬಗ್ಗೆ ಸ್ವತಃ ಡಿಡಿ ವಾಹಿನಿಯವರೇ ಟ್ವೀಟ್ ಮಾಡುವ ಮೂಲಕ ಈ ಖುಷಿಯ ವಿಚಾರವನ್ನ ಹಂಚಿಕೊಂಡಿದ್ದಾರೆ.

ಇನ್ನು ದೂರದರ್ಶನದವರು ಮಾಹಿತಿ ನೀಡಿರುವ ಪ್ರಕಾರ ಜಗತ್ತಿನಲ್ಲಿಯೇ ಅತೀ ವೀಕ್ಷಣೆ ಮಾಡಿದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಜೊತೆಗೆ ವಿಶ್ವದಾಖಲೆಯನ್ನೇ ನಿರ್ಮಿಸಿದ್ದು, ಮರು ಪ್ರಸಾರವಾದ ರಾಮಾಯಣ ಧಾರಾವಾಹಿಯು ಜಗತ್ತಿನಾದ್ಯಂತ ವೀಕ್ಷಕರ ದಾಖಲೆಗಳನ್ನ ಅಳಿಸಿಹಾಕಿದೆ ಎಂದು ದೂರದರ್ಶನ ಹೇಳಿದೆ.

ಸರವಜನಿಕರ ಬೇಡಿಕೆಯ ಮೇಲೆ ಮಾರ್ಚ್ ೨೮ರಿಂದ ಮರು ಪ್ರಸಾರವಾದ ರಾಮಾಯಣ ಧಾರಾವಾಹಿಯು ಏಪ್ರಿಲ್ ೧೬ನೇ ತಾರೀಖಿನ ವೇಳೆಗೆ 7.7 ಕೋಟಿ ವೀವರ್ಸ್ ಪಡೆದುಕೊಂಡಿದ್ದು, ಜಗತ್ತಿನ ಅತೀ ಹೆಚ್ಚು ಜನ ವೀಕ್ಷಣೆ ಮಾಡಿದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ದೂರದರ್ಶನ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ. ಇನ್ನು ಪ್ರತೀ ದಿನ ದೂರದರ್ಶನದಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಪ್ರಸಾರವಾಗುತ್ತಿತ್ತು. ಇನ್ನು ಈಗ ಮಹಾಭಾರತ ಮತ್ತು ಶ್ರೀಕೃಷ್ಣ ಪೌರಾಣಿಕ ಧಾರಾವಾಹಿಗಳನ್ನ ಮರು ಪ್ರಸಾರ ಮಾಡುತ್ತಿದೆ ದೂರದರ್ಶನ.