100 ಸಿನಿಮಾ ಸೆಂಚುರಿ ಬಾರಿಸೋದು ಪಕ್ಕಾ ಗುರು.!ಸಿಕ್ಕಾಪಟ್ಟೆ ಟ್ವಿಸ್ಟ್.!ಪ್ರೇಕ್ಷಕರಿಗೆ ರಸದೌತಣ..

Cinema

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಚಿತ್ರಗಳು ಚಿತ್ರಮಂದಿರಗಳಲ್ಲಿ 100 ದಿನಗಳನ್ನು ಆಚರಿಸುವುದು ಖಂಡಿತವಾಗಿಯೂ ಕನಸಿನ ಮಾತಾಗಿ ಬಿಟ್ಟಿದೆ. ಆದರೆ ಇಂದು ಬಿಡುಗಡೆಯಾಗಿರುವ ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ 100 ಚಿತ್ರ ಮಾತ್ರ ಖಂಡಿತವಾಗಿಯೂ ಈ ಅನುಮಾನ’ಗಳನ್ನು ತೊಡೆದುಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ. 100 ಚಿತ್ರದ ಕಥೆ ಖಂಡಿತವಾಗಿಯೂ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಹಿಡಿಸುವುದರಲ್ಲಿ ಎರಡು ಮಾತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾ ಗಳ ಬಳಕೆ ಮತ್ತು ಅದರ ದು’ಷ್ಪರಿಣಾಮಗಳ ಕುರಿತ 100 ಚಿತ್ರದಲ್ಲಿ ಸಾಕಷ್ಟು ವಿವರವಾಗಿ ಹೇಳಲಾಗಿದ್ದು ಖಂಡಿತವಾಗಿಯೂ ಇಂದಿನ ಪರಿಸ್ಥಿತಿ ಸಾಕಷ್ಟು ಹತ್ತಿರವಾಗಿದೆ.

ಇನ್ನು ಚಿತ್ರದ ಪ್ರತಿಯೊಂದು ಕ್ಷಣಗಳು ಕೂಡ ಪ್ರೇಕ್ಷಕರಿಗೆ ರೋಮಾಂಚನಗೊಳಿಸುತ್ತವೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಬೆಸ್ಟ್ ಥ್ರಿ’ಲ್ಲರ್ ಚಿತ್ರ 100 ಎಂದರೆ ಖಂಡಿತವಾಗಿ ತಪ್ಪಾಗಲಾರದು. ಕೇವಲ ಕಮರ್ಷಿಯಲ್ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿದ್ದ ಕನ್ನಡ ಪ್ರೇಕ್ಷಕರಿಗೆ 100 ಚಿತ್ರ ಕಂಡಿತವಾಗಿಯೂ ಹೊಸ ಸಿನಿಮಾ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ರಮೇಶ್ ಅರವಿಂದ್ ರವರು ಖ’ಡಕ್ ಖಾಕಿ ಪಾತ್ರದಲ್ಲಿ ಮಿಂಚಿದ್ದಾರೆ. ಕೇವಲ ಪಾತ್ರದ ಮೂಲಕ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಕೂಡ ಚಿತ್ರದ ನಿಜವಾದ ಹೀರೋ ಆಗಿ ರಮೇಶ್ ಅರವಿಂದ್ ಅವರು ಕಾಣಿಸಿಕೊಂಡಿದ್ದಾರೆ.

ಇಂತಹ ಉತ್ತಮ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈ ಚಿತ್ರ ಖಂಡಿತವಾಗಿ ಚಿತ್ರರಂಗದಲ್ಲಿ ಒಂದು ಹೊಸ ಬಗೆಯ ಚಿತ್ರದ ಮೇಕಿಂಗ್ ಗೆ ಬುನಾದಿ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ. ಚಿತ್ರದ ಕಥಾನಕಗಳು ಇಂದಿನ ಯುಗದ ಸತ್ಯಕ್ಕೆ ಸಾಕಷ್ಟು ಹತ್ತಿರವಾಗಿದ್ದು ಒಪ್ಪಿಕೊಳ್ಳಲು ಕಷ್ಟವಾದರೂ ಕೂಡ ಅದೇ ನಿಜವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಮುನ್ನ ಎ’ಚ್ಚರವಾಗಿರಿ. 100 ಚಿತ್ರದಲ್ಲಿ ಇದರ ಕುರಿತಂತೆ ನಿಮಗೆ ಸವಿವರವಾಗಿ ಹೇಳಿದ್ದಾರೆ ತಪ್ಪದೆ ಚಿತ್ರವನ್ನು ಕೂಡ ಚಿತ್ರಮಂದಿರಗಳಲ್ಲಿ ವೀಕ್ಷಿಸಿ. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಬೆಸ್ಟ್ ಕನ್ನಡ ಚಿತ್ರ 100 ಎಂದರೆ ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ.