ಪ್ರೀತಿಸಿದ ಹುಡುಗನ ಜೊತೆ ಸಪ್ತಪದಿ ತುಳಿದ ನಟ ರಮೇಶ್ ಅರವಿಂದ್ ಮಗಳು..ಈ ಫೋಟೋಸ್ ನೋಡಿ..

Cinema

ನಮಸ್ತೇ ಸ್ನೇಹಿತರೇ, ಕನ್ನಡ ಚಿತ್ರರಗಂದ ಖ್ಯಾತ ನಟ, ನಿರ್ದೇಶಕ ಹಾಗೂ ವಾಗ್ಮಿಯೂ ಆಗಿರುವ ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಯ ಮಗಳಾಗಿರುವ ನಿಹಾರಿಕಾ ಅರವಿಂದ್ ಅವರು ಇಂದು 28 ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸಹದ್ಯೋಗಿಯಾಗಿರುವ ಅಕ್ಷಯ್ ಎಂಬುವವರ ಜೊತೆ ಇಂದು ಬೆಳಿಗ್ಗೆ ೧೧ರಿಂದ ೧೧.೩೦ರವರೆಗೆ ನಡೆದ ಶುಭ ಮಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಇನ್ನು ಈ ಮದುವೆ ಸಿಲಿಕಾನ್ ಸಿಟಿಯ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ವಿವಾಹದ ಕಾರ್ಯಕ್ರಮಗಳು ನೆರವೇರಿವೆ.

ಆದರೆ ಕೊ’ರೊನಾ ಸೋಂ’ಕು ಇರುವ ಕಾರಣಗಳಿಂದ ಕೇವಲ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ವಿವಾಹದ ಆಮಂತ್ರಣ ನೀಡಲಾಗಿತ್ತು ಎಂದು ಹೇಳಲಾಗಿದೆ. ಇನ್ನು ನಿಹಾರಿಕಾ ಅರವಿಂದ್ ಅವರು ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಹೇಳಬೇಕೆಂದರೆ ನಿಹಾರಿಕಾ ಅವರು ಮಾಡುತ್ತಿರುವ ಕಂಪನಿಯಲ್ಲೇ ಅಕ್ಷಯ್ ಕೂಡ ಕೆಲಸ ಮಾಡುತ್ತಿದ್ದು ಇಬ್ಬರು ಸಹದ್ಯೋಗಿಗಳಾಗಿದ್ದಾರೆ. ಇನ್ನು ಅಲ್ಲಿಯೇ ಇವರಿಬ್ಬರ ಪರಿಚಯವಾಗಿ, ಅದು ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಈಗ ಮದುವೆ ಹಂತಕ್ಕೆ ಬಂದು ನಿಂತಿದೆ. ಇವರ ಪ್ರೀತಿಗೆ ಎರಡು ಕುಟುಬದವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈಗ ಮದುವೆಯಾಗಿದೆ.

ಇನ್ನು ಈ ಮದುವೆಗೆ ಮುಂಚೆಯೇ ಹಿಂದಿನ ದಿನ ಅಂದರೆ ಭಾನುವಾರದ ರಾತ್ರಿಯೆಂದು ಸಂಗೀತ ಕಾರ್ಯಕ್ರಮವನ್ನ ಏರ್ಪಡಿಸಲಾಗಿದ್ದು ಅಲ್ಲಿ ಸ್ಯಾಂಡಲ್ವುಡ್ ನ ಕೆಲವರು ಹಾಗೂ ಸ್ನೇಹಿತರು ಭಾಗವಹಿಸಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್ ಮತ್ತು ನಿಹಾರಿಕಾ ಅರವಿಂದ್ ಅವರು ಡ್ಯಾನ್ಸ್ ಮಾಡಿದ್ದು ತುಂಬಾ ವಿಶೇಷವಾಗಿತ್ತು. ಇನ್ನು ಹೊಸವರ್ಷ ಜನವರಿ ಹದಿನಾರರಂದು ನವ ವಧು ವರರ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ಹೇಳಲಾಗಿದ್ದು ಅಂದು ಸ್ಯಾಂಡಲ್ವುಡ್ ನ ನಟ ನಟಿಯರು ಸೇರಿದಂತೆ ದಕ್ಷಿಣ ಭಾರತದ ಖ್ಯಾತ ತಾರೆಯರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.