ರತ್ನನ್ ಪ್ರಪಂಚ ಸಿನಿಮಾ ನೋಡಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹೇಳಿದ್ದೆ ಬೇರೆ.!ಅಸಲಿಗೆ ಏನಾಗಿದೆ ನೋಡಿ..

Cinema

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅಮೆಜಾನ್ ಫ್ರೈಮಿನಲ್ಲಿ ಕನ್ನಡದ ರತ್ನನ್ ಪ್ರಪಂಚ ಎಂಬ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೌದು ರತ್ನನ್ ಪ್ರಪಂಚ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರು ತುಂಬಾನೇ ಮನೋಜ್ಞವಾದ ನಟನೆ ಮಾಡಿ, ಎಲ್ಲರ ಕಣ್ಣನ್ನು ಒದ್ದೆ ಆಗುವಂತೆ ಮಾಡಿದ್ದಾರೆ. ಜೊತೆಗೆ ಕತೆಯಲ್ಲಿ ಹೋಗುತ್ತಾ ಹಡೆದ ತಾಯಿ ಹುಡುಕುತ್ತಾ ಹೊರಟ ರತ್ನಾಕರ ತಾನು ಇರುವ ತಾಯಿಯ ಪ್ರೀತಿಯ ಒಂದೊಂದೇ ವಿಚಾರ ಮಿಸ್ ಮಾಡಿಕೊಳ್ಳುತ್ತಿರುವೇ ಹಾಗೆ ನಿಜವಾದ ತಾಯಿ ಪ್ರೀತಿ ಯಾವುದು ಎಂಬುದಾಗಿ ಅರಿವು ಮಾಡಿಕೊಳ್ಳುತ್ತಾ ಹೋಗುತ್ತಾರೆ. ದ್ವಿತೀಯಾರ್ಧದಲ್ಲಿ ನಟ ಪ್ರಮೋದ್ ಅಭಿನಯ ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ ಗಮನಸೆಳೆಯುತ್ತದೆ. ಉಡಾಳ್ ಬಾಬ್ಯಾ ಹಾಗೂ ಶ್ರುತಿ ಅವರ ಪಾತ್ರ ಕಣ್ಣಲ್ಲಿ ಭಾರವಾದ ಮನಸ್ಸಿನಿಂದ ನೀರು ತರಿಸುತ್ತದೆ.

ತಾಯಿ ಪಾತ್ರದಲ್ಲಿ ಶ್ರುತಿ ಹಾಗೂ ಉಮಾಶ್ರೀ ಅವರು ಎಲ್ಲರ ಕಣ್ಣಂಚಲ್ಲಿ ನೀರು ಬರುವಂತೆ ಅಭಿನಯ ಮಾಡಿದ್ದಾರೆ. ಕೊನೆಯ 15 ನಿಮಿಷ ರತ್ನನ್ ಪ್ರಪಂಚ ವೀಕ್ಷಕರನ್ನು ಉಸಿರುಗಟ್ಟಿಸಿ ಕಣ್ಣೀರು ಹಾಕುವಂತೆ ಮಾಡಿಬಿಡುತ್ತದೆ. ಹೌದು ಈ ರತ್ನನ್ ಪ್ರಪಂಚ ಸಿನಿಮಾ ನೋಡಿದ ಸ್ಟಾರ್ಸ್ ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆ ಈಗ ಸ್ಯಾಂಡಲ್ವುಡ್ನ ಖ್ಯಾತನಟಿ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಕರೆಯಲ್ಪಡುವ ನಟಿ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಿಷ್ಟು ವಿಷಯಗಳನ್ನು ಹಂಚಿಕೊಂಡು, ರತ್ನನ್ ಪ್ರಪಂಚ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಅವರು ಹೇಳಿದ ಹಾಗೆ ಈಗ ರತ್ನನ್ ಪ್ರಪಂಚ ಸಿನಿಮಾ ನೋಡುವ ಸಮಯ, ರತ್ನನ್ ಪ್ರಪಂಚ ಸಿನಿಮಾದಿಂದ ನನಗೆ ನಟಿಯಾಗಿ ಅಭಿನಯ ಮಾಡುವ ಅವಕಾಶ ಬಂದಿತ್ತು,

ಹೌದು ಹಾಗಾಗಿ ಏನೋ ಕಳೆದುಕೊಳ್ಳುತ್ತಿದ್ದೇನೆ ಎಂಬುವ ಬೇಜಾರು ನನ್ನಲ್ಲಿದೆ ಆ ಕಾರಣಕ್ಕೆ ಈ ಸಿನಿಮಾ ನೋಡುತ್ತಿದ್ದೇನೆ ಎಂದು ಬರೆದುಕೊಂಡು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಹೇಳಿ, ಜೊತೆಗೆ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ಡಾಲಿ ಧನಂಜಯ್, ಪ್ರಮೋದ್, ಶೃತಿ, ಉಮಾಶ್ರೀ, ಎಲ್ಲಾ ಕಲಾವಿದರೂ ಸಹ ಅವರವರ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ ಎಂದು ಹೇಳಿದರು. ಹಾಗೇ ಸಿನಿಮಾದ ನಟಿ ರೆಮಾ ಕೂಡ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಅವರಷ್ಟು ನಾನು ಚೆನ್ನಾಗಿ ಮಾಡುತ್ತಿರಲಿಲ್ಲ ಎಂದು ರಮ್ಯಾ ಅವರು ಹೇಳಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೂ ರತ್ನನ್ ಪ್ರಪಂಚ ಸಿನಿಮಾ ತಪ್ಪದೇ ಎಲ್ಲರೂ ನೋಡಿ. ಹಾಗೆ ಈಗಾಗ್ಲೇ ರತ್ನನ್ ಪ್ರಪಂಚ ಸಿನಿಮಾ ನೋಡಿದ್ದರೆ ಸಿನಿಮಾ ಹೇಗಿದೆ ಎಂದು ಕಮೆಂಟ್ ಮಾಡಿ ಧನ್ಯವಾದಗಳು…