ನಟಿ ರಮ್ಯಾ ಹುಡುಗನನ್ನ ತಬ್ಬಿಕೊಂಡಿರೋ ಫೋಟೋ ವೈರಲ್.!ಮದ್ವೆ ಗ್ಯಾರಂಟಿನಾ.? ಹುಡುಗ ಯಾರ್ ಗೊತ್ತಾ?

Advertisements

ಸ್ನೇಹಿತರೆ, ಅಪ್ಪು ಅಭಿನಯದ ಅಭಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರಮ್ಯಾ ಅವರು ಮೋಹಕ ತಾರೆ ಅಂತಲೇ ಫೇಮಸ್. ಇವರ ನಿಜವಾದ ಹೆಸರು ದಿವ್ಯ ಸ್ಪಂದನ ಎಂದು. ಮೋಹಕ ತಾರೇ ಎಂದು ಜನಪ್ರಿಯರಾದ ಮೇಲೆ ಶಿವಣ್ಣ, ದರ್ಶನ್, ಸುದೀಪ್ ಪುನೀತ್, ಯಶ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡು ಹಲವು ವರ್ಷಗಳ ಕಾಲ ಚಂದನವನದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಆಗ ಇವರಿಗೆ ಕಾಂಪಿಟೇಷನ್ ಕೊಟ್ಟಿದ್ದ ನಟಿ ಕ್ರೇಜಿ ಕ್ವೀನ್ ರಕ್ಷಿತಾ. ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಅಲ್ಲಿಯೂ ಕೂಡ ಶಾಸಕಿ ಆದ್ರೂ ಬಳಿಕ. ರಾಜಕೀಯ ಪಕ್ಷವೊಂದರ ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ವಹಿಸಿಕೊಂಡಿದ್ದ, ನಟಿ ರಮ್ಯಾ, ಬಳಿಕ ರಾಜಕೀಯದಿಂದ ದೂರವಾಗುತ್ತ ಬಂದರು. ಇದರ ನಡುವೆ ರಮ್ಯಾ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಮತ್ತೆ ಸ್ಯಾಂಡಲ್ವುಡ್ಗೆ ಮತ್ತೆ ರೀ ಎಂಟ್ರಿ ಕೊಡುತ್ತಾರಾ ಎಂದು ಕಾಯುತ್ತಿದ್ದಾರೆ.

Advertisements

ಇನ್ನು ರಮ್ಯಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಈಗಾಗಲೇ ಅವರಿಗೆ 39 ವರ್ಷ ವಯಸ್ಸಾಗಿದ್ದು ಮದುವೆಯಾಗುತ್ತಾರೋ ಇಲ್ಲವೋ ಎಂಬ ಅನುಮಾನ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇನ್ನು ಕೆಲವರ್ಷಗಳ ಹಿಂದೆ ವಿದೇಶಿ ಸ್ನೇಹಿತನೊಬ್ಬನ ಒಟ್ಟಿಗೆ ಕಾಣಿಸಿಕೊಂಡಿದ್ದ ರಮ್ಯಾ ಅವರನ್ನು ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಅವರ ಅಭಿಮಾನಿಗಳು ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಇನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಅಷ್ಟೇನೂ ಸಕ್ರಿಯವಾಗಿಲ್ಲದ ನಟಿ ರಮ್ಯಾ ಅವರು ಆಗಾಗ ಕೆಲವೊಂದು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಅದೇ ರೀತಿ ಯುವಕನೊಬ್ಬನ ಜೊತೆ ಆತ್ಮೀಯವಾಗಿ ಇರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ರಮ್ಯಾ ಅವರು ಯುವಕನೊಬ್ಬನನ್ನು ತುಂಬಾ ಆತ್ಮೀಯದಿಂದ ಅಪ್ಪಿಕೊಂಡಿದ್ದಾರೆ.

ಫೋಟೋ ನೋಡಿ ತುಂಬಾ ತಲೆ ಕೆಡಿಸಿಕೊಂಡಿರುವ ಅವರ ಅಭಿಮಾನಿಗಳು ಹುಡುಗ ಯಾರೆಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇನ್ನು ಈ ಯುವಕನ ಬಗ್ಗೆ ಹೇಳುವುದಾದರೆ ರಮ್ಯಾ ಅವರ ಆಪ್ತ ಗೆಳೆಯರಲ್ಲಿ ಒಬ್ಬನಾಗಿದ್ದು, ಈತನ ಹೆಸರು ಕರನ್ ಜೋಶಿ ಎಂದು ಹೇಳಲಾಗಿದೆ. ರಮ್ಯಾ ಅವರು ಆ ಹುಡುಗನನ್ನ ತುಂಬಾ ಆತ್ಮೀಯವಾಗಿ ತಬ್ಬಿ ಕೊಂಡಿರುವ ಕಾರಣ ಇದೇ ಹುಡುಗನನ್ನ ರಮ್ಯಾ ಅವರು ಮದುವೆಯಾಗುತ್ತಾರಾ, ಎಂದು ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ, ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಸ್ವತಹ ರಮ್ಯಾ ಅವರೇ ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಬೇಕಾಗಿದೆ. 40ರ ಆಸುಪಾಸಿನಲ್ಲಿರುವ ರಮ್ಯಾ ಅವರು ಈಗಲಾದರೂ ಮದುವೆಯಾಗಿ ದಾಂಪತ್ಯ ಜೀವನ ಶುರು ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ..ಇನ್ನು ಮುಂದೆ ನಟಿ ರಮ್ಯಾ ಅವರು ಮದ್ವೆಯಾಗುತ್ತಾರಾ?ಸಿನಿಮಾಗೆ ಎಂಟ್ರಿ ಕೊಡುತ್ತಾರಾ? ಇಲ್ಲವೇ ರಾಜಕೀಯಕ್ಕೆ ಹಿಂತಿರುಗುತ್ತಾರಾ ಎಂಬುದನ್ನ ಕಾದು ನೋಡಬೇಕಾಗಿದೆ.