ತಾನು ಮದ್ವೆಯಾಗುವ ಪ್ರೇಯಸಿಯ ಫೋಟೋವನ್ನ ಬಹಿರಂಗ ಮಾಡಿದ ಬಲ್ಲಾಳದೇವ?

Cinema
Advertisements

ಅದ್ಭುತ ದ್ರಶ್ಯಕಾವ್ಯ ತೆಲುಗಿನ ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ್ದರು ನಟ ರಾಣಾ ದಗ್ಗು ಬಾಟಿ. ಆಗಾಗ ರಾಣಾ ದಗ್ಗುಬಾಟಿಯ ಮದ್ವೆ ವಿಚಾರದ ಬಗ್ಗೆ ಸುದ್ದಿಗಳು ಬರುತ್ತಿದ್ದವು. ಈಗ ಕೊನೆಗೂ ಬಲ್ಲಾಳದೇವ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೂ ಮುಂಚೆ ಹಲವು ನಟಿಯರ ಜೊತೆ ರಾಣಾ ಹೆಸರು ಕೇಳಿಬಂದಿತ್ತು.

Advertisements

ಈಗ ನಟ ರಾಣಾ ದಗ್ಗುಬಾಟಿ ‘ಕೊನೆಗೂ ಅವಳು ಓಕೆ ಅಂದಳು’ಅಂತ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಚಿತ್ರರಂಗದ ಹಿನ್ನಲೆ ಇಲ್ಲದ ಮಿಹಿಕಾ ಬಜಾಜ್ ಎಂಬ ಯುವತಿಯೊಂದಿಗೆ ರಾಣಾ ಅವರಿಗೆ ಲವ್ ಆಗಿದೆ ಎಂದು ಹೇಳಲಾಗಿದ್ದು, ಜೊತೆಗೆ ತನ್ನ ನೆಚ್ಚಿನ ಪ್ರೀತಿಯ ಹುಡುಗಿಯ ಫೋಟೋವನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಇನ್ನು ಬಲ್ಲಾಳದೇವನ ಪ್ರೇಮ ಪಾಶಕ್ಕೆ ಸಿಲುಕಿರುವಾ ಮೈಹಿಕಾ ಬಜಾಜ್ ಅವರ ಬಗ್ಗೆ ಹೇಳುವುದಾದರೆ ಇವರಿಗೆ ಯಾವುದೇ ಸಿನಿಮಾ ಹಿನ್ನಲೆ ಇಲ್ಲ. ವೃತ್ತಿಯಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಮೈಹಿಕಾ ಹೈದರಾಬಾದ್ ನಲ್ಲಿ ಡ್ಯು ಡ್ರಾಪ್ ಡಿಸೈನ್ ಎಂಬ ಸ್ಟುಡಿಯೋವನ್ನ ಹೊಂದಿದ್ದು, ಇವರ ಫ್ಯಾಶನ್ ಡಿಸೈನ್ ಗೆ ಬಾರಿ ಬೇಡಿಕೆ ಇದೆ ಎಂದು ಹೇಳಲಾಗಿದೆ.

ಇನ್ನು ನಟ ರಾಣಾ ದಗ್ಗುಬಾಟಿ ತನ್ನ ಪ್ರೇಯತಮೆಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೂಡಲೇ ಯಂಗ್ ಟೈಗರ್ ಜೂ.ಏನ್ ಟಿಆರ್, ನಟಿಯರಾದ ಸಮಂತಾ, ಕಾಜಲ್ ಆಗರ ವಾಲ್ ಸೇರಿದಂತೆ ಹಲವಾರು ನಟ ನಟಿಯರು ಶುಭಾಶಯಗಳನ್ನ ಕೋರಿ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.