ಖ್ಯಾತ ನಟ ರಂಗಾಯಣ ರಘು ಅವರ ಪತ್ನಿ ಕೂಡ ತುಂಬಾನೇ ಫೇಮಸ್ ! ಅವರು ಮಾಡುತ್ತಿರೋ ಕೆಲಸ ಏನ್ ಗೊತ್ತಾ ?

Cinema
Advertisements

ಸ್ಯಾಂಡಲ್ವುಡ್ ನ ಪ್ರತಿಭಾನ್ವಿತ ನಟರಲ್ಲಿ ರಂಗಾಯಣ ರಘು ಕೂಡ ಒಬ್ಬರು. ಖಳನಟ, ಕಾಮಿಡಿ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿದವರು. ತಮ್ಮ ವಿಭಿನ್ನ ಹಾಸ್ಯ ನಟನೆ, ಖಳ ನಟನ ಪಾತ್ರಗಳ ಮೂಲಕ ಕನ್ನಡಿಗರನ್ನ ಮನರಂಜಿಸಿದ ನಟ. ಮೈಸೂರಿನ ರಂಗಾಯಣ ಸಂಸ್ಥೆಯಲ್ಲಿದ್ದ ರಘು ಅವರಿಗೆ ರಂಗಾಯಣ ರಘು ಎಂಬ ಹೆಸರು ಬಂದಿದೆ. 17 ಏಪ್ರಿಲ್ 1965ರಲ್ಲಿ ತುಮಕೂರಿನ ಪಾವಗಡದಲ್ಲಿ ಜನಿಸಿದ ರಂಗಾಯಣ ರಘು ಅವರ ಮೂಲ ನಾಮಧೇಯ ಕೊಟ್ಟೂರು ಚಿಕ್ಕರಂಗಪ್ಪ ರಂಗನಾಥ್ ಎಂದು. ಸ್ಟೇಜ್ ಆರ್ಟಿಸ್ಟ್ ಆಗಿ ನಟನೆ ಮಾಡುತ್ತಿದ್ದ ರಂಗಾಯಣ ರಘು ಅವರು ಇದೂವರೆಗೂ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ರಂಗಾಯಣ ರಘು ಅವರ ತಂದೆ ಚಿಕ್ಕ ರಂಗಪ್ಪ ಹಾಗೂ ತಾಯಿ ಹೆಸರು ವೀರಮ್ಮ ಎಂದು..

[widget id=”custom_html-4″]

Advertisements

ಇನ್ನು ತಮ್ಮ ಚಿಕಕೆವಯಸ್ಸಿನಲ್ಲೇ ತಂದೆ ತಾಯಿಯನ್ನ ಕಳೆದುಕೊಂಡು ಒಂಟಿಯಾದ ರಂಗಾಯಣ ರಘು ಅವರು ತಮ್ಮ ಹುಟ್ಟೂರಿನಲ್ಲೇ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿದ್ದು, ಬಳಿಕ ಬೆಂಗಳೂರಿಗೆ ಬಂದ ಮೇಲೆ ತಮ್ಮ ವಿದ್ಯಾಭ್ಯಾಸದ ನಡುವೆಯೇ ಡ್ರಾಮಾಗಳಲ್ಲೂ ಕೂಡ ಆಸಕ್ತಿ ಬೆಳೆಸಿಕೊಂಡಿದ್ದರು. ಇನ್ನು ೧೦ನೇ ತರಗತಿಯವರೆಗೂ ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಮಾಡಿದ ರಂಗಾಯಣ ರಘು ಅವರು ಬಳಿಕ ಊರಿಗೆ ಹೊರಟು ಕುರಿ ಸಾಕಾಣಿಕೆ ಮಾಡಿಕೊಂಡಿದ್ದರು. ಮತ್ತೆ ಬೆಂಗಳೂರಿಗೆ ಬಂದ ರಘು ಅವರು ಕಾಲೇಜು ಸೇರಿಕೊಳ್ಳುತ್ತಾರೆ. ಇನ್ನು ತಿಂಗಳಿಗೆ ೮೦೦ರೂ ಸಂಬಳಕ್ಕಾಗಿ ಮೈಸೂರಿನ ಪ್ರತಿಷ್ಠಿತ ರಂಗ ಸಂಸ್ಥೆಯಾದ ರಂಗಾಯಣಕ್ಕೆ ೧೯೮೮ರಲ್ಲಿ ಸೇರಿಕೊಳ್ಳುತ್ತಾರೆ. ಇನ್ನು ಸಂಗೀತ ಬ್ರಹ್ಮ ಹಂಸಲೇಖ ಅವರ ನಿರ್ದೇಶನದಲ್ಲಿ ೧೯೯೫ರಲ್ಲಿ ಮೂಡಿಬಂದ ಸುಗ್ಗಿ ಚಿತ್ರದ ಸಣ್ಣ ಪಾತ್ರವೊಂದರ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಅದರೇ ದುರಾದ್ರಷ್ಟವಷಾತ್ ಈ ಸಿನಿಮಾ ಬಿಡುಗಡೆಯಾಗಲು ಇಲ್ಲ.

[widget id=”custom_html-4″]

ಬಳಿಕ ಕಿಚ್ಚ ಸುದೀಪ್ ಅವರ ನಟನೆಯ ೨೦೦೨ರಲ್ಲಿ ಬಿಡುಗಡೆಗೊಂಡ ಧಮ್ ಸಿನಿಮಾದಲ್ಲಿ ನಟಿಸಿದ್ದು, ಬಳಿಕ ಹಲವಾರು ಸಿನಿಮಗಳಲಿ ನಟಿಸುವ ಅವಕಾಶ ಇವರನ್ನ ಹುಡುಕಿಕೊಂಡು ಬರುತ್ತದೆ. ಇನ್ನು ರಂಗಾಯಣ ರಘು ಅವರ ಸಿನಿಮಾ ಜೀವನದಲ್ಲಿ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಎಂದರೆ ದುನಿಯಾ ಸಿನಿಮಾ. ಈ ಚಿತ್ರದಲ್ಲಿನ ರಂಗಾಯಣ ರಘು ಅವರ ನಟನೆಯನ್ನ ಪ್ರೇಕ್ಷಕರು ತುಂಬಾ ಇಷ್ಟಪಟ್ಟುಕೊಳ್ಳುತ್ತಾರೆ. ಬಳಿಕ ವಿಲನ್ ಪಾತ್ರಗಳನ್ನ ಬಿಟ್ಟು ಕಾಮಿಡಿ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ಹೆಚ್ಚು ಮನರಂಜಿಸಿದ ರಂಗಾಯಣ ರಘು ಅವರು ತಮ್ಮ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನ ಕೂಡ ಪಡೆದುಕೊಳ್ಳುತ್ತಾರೆ. ಇನ್ನು ಇವರ ವೈಯುಕ್ತಿಕ ವಿಚಾರಕ್ಕೆ ಬಂದರೆ, ರಂಗಾಯಣ ಅವರ ಪತ್ನಿಯ ಹೆಸರು ಮಂಗಳ ಎಂದು. ಇವರೂ ಕೂಡ ರಂಗ ಕಲಾವಿದೆ. ಇನ್ನು ರಂಗಾಯಣ ರಘು ದಂಪತಿಯೆದ್ದು ಸಂಚಾರಿ ಥಿಯೇಟರ್ ಕೂಡ ಇದೆ. ಇನ್ನು ಪತ್ನಿ ಮಂಗಳ ಅವರೂ ಕೂಡ ನಾಟಕಗಳ ನಿರ್ದೇಶನ ಮಾಡಿ ತಾವು ನಟಿಸುವುದರ ಜೊತೆಗೆ ಆಯೋಜನೆ ಕೂಡ ಮಾಡುತ್ತಾರೆ. ಕನ್ನಡದ ಬಹುಮುಖ ಪ್ರತಿಭೆ ನಟ ರಂಗಾಯಣ ರಘು ಅವರ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟ ಎಂಬುದರ ಬಗ್ಗೆ ಕಾಮೆಂಟ್ ಮಾಡಿ ತಿಳಿಸಿ..