ಲಾರಿ ಚಾಲಕನ ಮಾರುವೇಷದಲ್ಲಿ ಹೋದ ರವಿ ಡಿ ಚನ್ನಣ್ಣನವರ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ಯಾರನ್ನ ಗೊತ್ತಾ.?

News
Advertisements

ಕರ್ನಾಟಕದ ದಕ್ಷ, ಖಡಕ್ ಅಧಿಕಾರಿಗಳಲ್ಲಿ ಐಪಿಎಸ್ ಆಫೀಸರ್, ಎಸ್ ಪಿ ರವಿ ಡಿ ಚನ್ನಣ್ಣನವರ್ ಕೂಡ ಒಬ್ಬರು. ಕರುನಾಡ ಸಿಂಗಂ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಚನ್ನಣ್ಣನವರ್ ಅವರು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.

Advertisements

ಸಿನಿಮಾ ನಟರಿಗೂ ಏನೂ ಕಡಿಮೆ ಇಲ್ಲ ಅನ್ನುವಂತೆ ಅಭಿಮಾನಿ ಬಳಗ ಹೊಂದಿದ್ದಾರೆ ಎಸ್ ಪಿ ರವಿ ಅವರು. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಬಡತನದಲ್ಲಿಯೇ ಓದಿ ಬೆಳೆದು ಐಪಿಎಸ್ ಉದ್ದೆಗೆ ಏರಿರುವ ರವಿ. ಡಿ. ಚನ್ನಣ್ಣನವರ್‌ ಐಪಿಎಸ್ ಮಾಡಬೇಕೆನ್ನುವ ಎಷ್ಟೋ ಯುವಜನರಿಗೆ ಮಾದರಿಯಾಗಿದ್ದಾರೆ.

ಇನ್ನು ರವಿ ಡಿ ಚನ್ನಣ್ಣನವರ್ ಅವರಿಗೆ ಕರುನಾಡ ಸಿಂಗಂ ಎಂದು ಸುಮ್ಮನೆ ಹೆಸರು ಬಂದಿಲ್ಲ. ಅವರ ಕೆಲಸಗಳನ್ನ ನೋಡಿಯೇ ಅಭಿಮಾನಿಗಳು ಈ ಬಿರುದು ಕೊಟ್ಟಿರೋದು. ಹೌದು, ಸಿನಿಮಾ ಶೈಲಿಯಲ್ಲಿ ಮಾರುವೇಷದಲ್ಲಿ ಹೋಗಿ ಭ್ರಷ್ಟ ಅಧಿಕಾರಿಗಳನ್ನ ಸಾಕ್ಷಿ ಸಮೇತ ಹಿಡಿಯುವ ಮೂಲಕ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಹೌದು, ಗೆಳೆಯರೇ ಇದು ಯಾವುದೋ ಸಿನಿಮಾ ಕತೆ ಅಂತ ಅಂದುಕೊಳ್ಳಬೇಡಿ. ಖಡಕ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರ ಕಾರ್ಯ ವೈಖರಿಗೆ ಮತ್ತೊಂದು ನೈಜ ಸಾಕ್ಷಿ ಅಷ್ಟೆ. ಲಾರಿ ಚಾಲಕನ ವೇಷದಲ್ಲಿ ಮುಖಕ್ಕೆ ಮಾಸ್ಕ ಹಾಕಿಕೊಂಡು ಸಾಕ್ಷಿ ಸಮೇತ ಭ್ರಷ್ಟ RTO ಅಧಿಕಾರಿಗಳನ್ನ ಕರ್ನಾಟಕ ಗಡಿ ಭಾಗದ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಹಿಡಿದಿದ್ದಾರೆ.

ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್‌.?

ಎರಡು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದ್ದು, ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ತಮಿಳುನಾಡು ಕಡೆಯಿಂದ ಕರ್ನಾಟಕದ ಕಡೆ ಬರುತ್ತಿದ್ದ ವಾಹನಗಳನಂ ನಿಲ್ಲಿಸಿ ಇಬ್ಬರು RTO ಅಧಿಕಾರಿಗಳು ಹಾಗೂ ಒಬ್ಬ ಹೋಂ ಗಾರ್ಡ್ ಸಿಬ್ಬಂದಿ ಸೇರಿ ಚಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದರು.

ಇನ್ನು ಚಾಲಕರ ಬಳಿ ತಾತ್ಕಾಲಿಕ ಪರ್ಮಿಟ್ ಕೊಡುವ ನೆಪದಲ್ಲಿ ೫೦೦ರೂಗಳವೆರೆಗೆ ಹಣವನ್ನ ಪೀಕುತ್ತಿದ್ದರು. ಇನ್ನು ಈ ಮಾಹಿತಿ ಆಧರಿಸಿಯೇ ರವಿ ಡಿ ಚನ್ನಣ್ಣನವರು ಮಾರುವೇಷದಲ್ಲಿ ಲಾರಿಯಲ್ಲಿ ಡ್ರೈವರ್ ನಂತೆ ಹೋಗಿ ರೆಡ್ ಹ್ಯಾಂಡ್ ಆಗಿ ಬಡ ಚಾಲಕರ ಬಳಿ ಹಣ ಪೀಕುತ್ತಿದ್ದ ಭ್ರಷ್ಟ ಅಧಿಕಾರಿಗಳನ್ನ ಹಿಡಿದುಹಾಕಿದ್ದಾರೆ. ಇನ್ನು ರವಿ ಸರ್ ಅವರ ಈ ಕಾರ್ಯಕ್ಕೆ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.