ರವಿಚಂದ್ರನ್ ಸ್ವಂತ ತಮ್ಮ ಬಾಲಾಜಿ ಈಗ ಏನ್ಮಾಡ್ತಿದ್ದಾರೆ ಗೊತ್ತಾ.?ಬಾಲಾಜಿ ಅವರ ಪತ್ನಿ ಇವರೇ ನೋಡಿ..

Cinema

ಸ್ನೇಹಿತರೆ ಕನ್ನಡ ಸಿನಿಮಾರಂಗದ ಖ್ಯಾತ ನಟ ರವಿಚಂದ್ರನ್ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಟ ರವಿಚಂದ್ರನ್ ಸಿನಿಮಾರಂಗದಲ್ಲಿ ಅವರದೇ ಆದ ಛಾಪು ಮೂಡಿಸಿ, ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿ ಅವರದೇ ಆದ ದೊಡ್ಡದಾದ ಅಭಿಮಾನಿ ಬಳಗ ಹೊಂದಿದ್ದಾರೆ. ರವಿಮಾಮ ಎಂದರೆ ಈಗಲೂ ಕೂಡ ಸಾಕಷ್ಟು ಹಳ್ಳಿ ಹುಡುಗರಿಗೆ ತುಂಬಾ ಅಚ್ಚುಮೆಚ್ಚು. ರವಿಚಂದ್ರನ್ ಅವರ ಅಭಿನಯ ಇಷ್ಟ, ಅವರ ಮಾತಿನ ಶೈಲಿ ಇಷ್ಟ, ಹೌದು ಹೀಗೆ ಎಲ್ಲರಿಗೂ ಕೂಡ ತುಂಬಾನೇ ಇಷ್ಟ ಆಗಿರುವ ರವಿಚಂದ್ರನ್ ಸಿನಿಮಾರಂಗದಲ್ಲಿ ಒಂದಾನೊಂದು ಕಾಲದಲ್ಲಿ ಸಖತ್ತಾಗಿ ಮಿಂಚಿದ್ದರು. ಹಾಗೂ ಇದೀಗ ಪೋಷಕ ಪಾತ್ರಗಳಲ್ಲಿ ರವಿಚಂದ್ರನ್ ಅವರು ತುಂಬಾ ಬಿಜಿಯಾಗಿದ್ದಾರೆ.

ರವಿಚಂದ್ರನ್ ಅವರ ಸ್ವಂತ ತಮ್ಮ ಬಾಲಾಜಿ ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. ಕನ್ನಡ ಸಿನಿಮಾರಂಗದಲ್ಲಿ ನಟ ಬಾಲಾಜಿ ಆರಂಭದ ದಿನಗಳಲ್ಲಿ ನೆಲೆಯೂರಲು ತುಂಬಾ ಕಷ್ಟ ಪಟ್ಟರೂ, ಆದರೂ ಆಗಲಿಲ್ಲ. ನಟ ರವಿಚಂದ್ರನ್ ಅವರೇ ತಮ್ಮ ಬಾಲಾಜಿ ಅವರಿಗೆ ಅಹಂ ಪ್ರೇಮಾಸ್ಮಿ ಸಿನಿಮಾ ನಿರ್ದೇಶನ ಮಾಡಿದರು. ಆದರೆ ಈ ಚಿತ್ರ ಕೂಡ ಯಶಸ್ಸು ಕಾಣಲಿಲ್ಲ. ಸಿನಿಮಾರಂಗದಿಂದ ತುಂಬಾನೇ ದೂರವುಳಿದರು ಬಾಲಾಜಿ ಎನ್ನಬಹುದು. ನಟ ಬಾಲಾಜಿಯವರು ಮಾಡಿರುವುದು ಒಟ್ಟು ಕೇವಲ 3 ಸಿನಿಮಾ. ಒಂದು ಅಹಂ ಪ್ರೇಮಾಸ್ಮಿ, ಮಳೆ ಹುಡುಗಿ ಪೂಜಾಗಾಂಧಿ ಜೊತೆ ಇನಿ ಎಂಬ ಸಿನಿಮಾ ಮಾಡಿದರು, ನಂತರ ರಾಜಕುಮಾರಿ ಎಂಬ ಸಿನೆಮಾ ಮಾಡಿದರು, ಆದರೆ ಯಾವ ಸಿನೆಮಾ ಕೂಡ ಹಿಟ್ ಆಗಲೇ ಇಲ್ಲ.

ಹೌದು ಬಾಲಾಜಿಯವರು ಕುಟುಂಬ ಹೇಗಿದೆ ಗೊತ್ತಾ.? ಅವರ ಪತ್ನಿ ಮಗಳು ಯಾರು.?ನಟ ಬಾಲಾಜಿಯವರ ಕುಟುಂಬ ಹೇಗಿದೆ ಎಂಬುದನ್ನ ತಿಳಿಯಲಿ ವಿಡಿಯೋ ನೋಡಿ..ಇನ್ನು ಬಾಲಾಜಿಯವರು ಮೂರು ಸಿನಿಮಾಗಳ ತರುವಾಯ ಮತ್ತೆ ಕನ್ನಡ ಸಿನಿಮಾರಂಗದಲ್ಲಿ ನೆಲೆಯೂರಲು ಆಗಲೇ ಇಲ್ಲ. ಹೌದು ರವಿಚಂದ್ರನ್ ಅವರು ಇದೀಗ ಅವರ ಮಗನಾದ ಮನೋರಂಜನ್ ಅವರಿಗೆ ರಣಧೀರ ಎನ್ನುವ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಅದು ಕೂಡ ಬರುತ್ತಿಲ್ಲ ಒಟ್ಟಿನಲ್ಲಿ ನೋಡುವುದಾದರೆ ರವಿಚಂದ್ರನ್ ಅವರನ್ನು ಬಿಟ್ಟರೆ, ಅವರ ಮಕ್ಕಳಾಗಲಿ ಅವರ ತಮ್ಮ ಆಗಲಿ ಈ ಕನ್ನಡ ಸಿನಿಮಾರಂಗದಲ್ಲಿ ಉಳಿದುಕೊಳ್ಳಲು ಅಥವಾ ಗುರುತಿಸಿಕೊಳ್ಳಲು ಆಗುತ್ತಿಲ್ಲ. ನಟ ಬಾಲಾಜಿ ಅವರು ಕನ್ನಡ ಚಿತ್ರರಂಗದಿಂದ ದೂರ ಉಳಿದು ಬೇರೆ ಕೆಲಸ ಶುರುಮಾಡಿದ್ದಾರೆ. ಮಾಹಿತಿಗಳ ಪ್ರಕಾರ ತಂದೆ ವೀರಾಸ್ವಾಮಿಯವರು ಹುಟ್ಟುಹಾಕಿದ್ದ ಈಶ್ವರಿ ಪ್ರೊಡಕ್ಷನ್ ಕೆಲಸಗಳನ್ನ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.