ಶ್ವೇತಾ ಚೆಂಗಪ್ಪವರ ಮನೆಯಲ್ಲಿ ರವಿಚಂದ್ರನ್.! ನಟಿಯ ಮಗನ ಜೊತೆ ಮಗುವಾದ ದೃಶ್ಯ ವೈರಲ್..

Cinema

ಕನ್ನಡ ಸಿನಿಮಾರಂಗದ ಖ್ಯಾತ ನಟ ಪ್ರೇಮಲೋಕದ ಸರದಾರ, ನಟ ರವಿಚಂದ್ರನ್ ಅವರು ಇತ್ತೀಚಿಗಷ್ಟೆ ಮಜಾ ಟಾಕೀಸ್ ರಾಣಿ ಎಂದೇ ಖ್ಯಾತಿ ಪಡೆದಿರುವ ಮತ್ತು ಕಿರುತೆರೆಯ ಲೋಕದ ಅದ್ಭುತ ಕಲಾವಿದೆ ನಟಿ ಶ್ವೇತಾ ಚಂಗಪ್ಪ ಅವರ ಮನೆಗೆ ಭೇಟಿ ನೀಡಿದ್ದರು. ಭೇಟಿ ನೀಡಿದ ಬಳಿಕ ಶ್ವೇತಾ ಅವರ ಮಗ ಜಿಯಾನ್ ಜೊತೆ ಒಂದು ತಾಸು ರವಿಚಂದ್ರನ್ ಅವರು ಸಂತೋಷದಿಂದ ಮಗುವಾಗಿ ಕಾಲ ಕಳೆದರು. ಹೌದು ಇದೀಗ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಆದ್ರೆ ಈ ಕ್ಯೂಟ್ ವಿಡಿಯೋ ಹಿಂದೆ ಒಂದು ಅಸಲಿ ಕಥೆಯೇ ಬೇರೆ ಇದೆ. ಆ ಸ್ಟೋರಿ ಏನು ಗೊತ್ತಾ ಮುಂದೆ ಓದಿ.

ಹೌದು ನಟಿ ಶ್ವೇತ ಚಂಗಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ಮತ್ತು ತಮ್ಮ ಮಗುವಿನ ವೀಡಿಯೋ ಫೋಟೋಗಳನ್ನು ಹಂಚಿಕೊಂಡು ತುಂಬಾ ಖುಷಿಯಲ್ಲಿ ಇರುತ್ತಾರೆ. ಅಂದಹಾಗೆ ರವಿಚಂದ್ರನ್ ಶ್ವೇತ ಚಂಗಪ್ಪ ಅವರ ಫ್ಯಾಮಿಲಿ ಫ್ರೆಂಡ್. ಶ್ವೇತಾ ಚೆಂಗಪ್ಪ ಮಗುವಿಗೆ ಜನನ ನೀಡಿದ ಸಂದರ್ಭದಲ್ಲಿ ರವಿಚಂದ್ರನ್ ಅವರು ಮಗುವನ್ನು ನೋಡಿಕೊಂಡು ಬಂದಿದ್ದರು. ಹಾಗೆ ಕೋರೋನ ಇದ್ದ ಕಾರಣಕ್ಕೆ ಈ ನಡುವೆ ಹೋಗಿರಲಿಲ್ಲ. ಆದರೆ ಇತ್ತೀಚಿಗಷ್ಟೇ ರವಿಮಾಮ ಜಿಯಾನ್ ಜೊತೆ ಒಂದು ತಾಸು ಸಮಯ ಕಳೆದ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಮಾತನಾಡಿದ ಶ್ವೇತಾ ಅವರು ‘ನನ್ನ ಮಗ ನನ್ನ ಮತ್ತು ನನ್ನ ತಾಯಿಯ ಜೊತೆ ಬಿಟ್ಟರೆ ನನ್ನ ಗಂಡನ ಜೊತೆ ಮಾತ್ರ ಸೇರುತ್ತಾನೆ. ಆದರೆ ರವಿಚಂದ್ರನ್ ಅವರು ಒಳ ಬರುತ್ತಿದ್ದಂತೆ ಅವರನ್ನು ಮಾಮ ಎಂದು ಕರೆದು ತುಂಬಾನೇ ಅನ್ಯೋನ್ಯತೆಯಿಂದ ಅವರ ಜೊತೆ ಆಟವಾಡಿದ.

ಈ ಮುಂಚೆ ನನ್ನ ಮಗ ರವಿಚಂದ್ರನ್ ಅವರನ್ನು ಟಿವಿಯಲ್ಲಿ ನೋಡಿಲ್ಲ. ಆದರೂ ಸಹ ಇಷ್ಟು ಆತ್ಮೀಯತೆ ಹೇಗೆ ಎಂದು ನನಗೆ ಒಂದು ಕ್ಷಣ ಅಚ್ಚರಿ ಆಯಿತು, ಜೊತೆಗೆ ಖುಷಿ ಕೂಡ ಆಯಿತು, ಮತ್ತು ರವಿ ಸಾರ್ ಮನೆಗೆ ಹೋಗುವಾಗ ಮಾಮ ಮಾಮ ಎಂದು ಅಳುತ್ತಿದ್ದ, ಎಂದು ಅವರು ಹೇಳಿದರು. ಹೌದು, ರವಿಚಂದ್ರನ್ ನಟಿ ಶ್ವೇತಾ ಚಂಗಪ್ಪ ಅವರ ಮಗನ ಜೊತೆ ಮಗುವಾಗಿ ಆಟವಾಡಿದ ವಿಡಿಯೋ ವೈರಲ್ ಆಗುತ್ತಿದೆ. ಶ್ವೇತಾ ಅವರ ಮಗುವನ್ನು ನೋಡಲಿಕ್ಕೆನೇ ರವಿಚಂದ್ರನ್ ಅವರು ಅವರ ಮನೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಿ..