ಇಂದಿನ ಪಂದ್ಯಕ್ಕೂ ಮುನ್ನ ಆರ್ ಸಿಬಿಯಿಂದ ಇಬ್ಬರೂ ಸ್ಟಾರ್ ಆಟಗಾರರು ಔಟ್.!ಕಾರಣವೇನು ಗೊತ್ತಾ.?

Sports

ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಕೊನೆಯ ಹಂತಕ್ಕೆ ಬಂದು ನಿಂತಿದೆ. ಹೌದು ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಿದ್ದು, ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದೆ.ಹಾಗೂ ಸೋತ ದೆಹಲಿ ನಾಡಿದ್ದು ಇಂದು ನಡೆಯುವ ಬೆಂಗಳೂರು ಹಾಗೂ ಕಲ್ಕತ್ತಾ ಪಂದ್ಯದಲ್ಲಿ ಗೆಲ್ಲುವ ತಂಡದ ಜೊತೆ ಸೆಣಸಾಟ ನಡೆಸಲಿದೆ. ಇಂದು ಶಾರ್ಜಾ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.

ಇಂದಿನ ಪಂದ್ಯದಲ್ಲಿ ಗೆದ್ದವರು ಸೆಮಿಸ್ ಗೆ ಎಂಟ್ರಿ ನೀಡುತ್ತಾರೆ. ಸೋತವರು ಸೀದಾ ಮನೆಗೆ ಹೋಗುತ್ತಾರೆ. ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತುಂಬಾನೇ ಬಲಿಷ್ಠವಾಗಿದ್ದು, ಈ ಹದಿನಾಲ್ಕನೆ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿದೆ. ಜೊತೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಬಲಿಷ್ಠವಾಗಿದ್ದು ಬೆಂಗಳೂರು ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಇತ್ತ ಬೆಂಗಳೂರು ತಂಡ ಕೂಡ ತುಂಬಾನೇ ಫಾರ್ಮಲ್ಲಿ ಇದ್ದು ಕೊಲ್ಕತ್ತಾ ತಂಡವನ್ನ ಸೋಲಿಸೋ ಸಾಮರ್ಥ್ಯವನ್ನು ಹೊಂದಿದೆ.

ಇದರ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಈಗ ಒಂದು ಕಹಿ ಸುದ್ದಿ ಹೊರಬಿದ್ದಿದ್ದು ಇಂದಿನ ಪಂದ್ಯ ಆರಂಭಕ್ಕೂ ಮುನ್ನ ಆರ್ಸಿಬಿ ತಂಡದ ಇಬ್ಬರು ಆಟಗಾರರು ಐಪಿಎಲ್ ಟೂರ್ನಿಯಿಂದ ಹೊರ ಹೋಗಲಿದ್ದಾರೆ ಎಂದು ತಿಳಿದುಬಂದಿದೆ. ಶ್ರೀಲಂಕಾ ಆಟಗಾರರಾದ ಹಸರಂಗ ಹಾಗೂ ಚಮೀರ ಅವರು t20 ವರ್ಲ್ಡ್ ಕಪ್ ಶ್ರೀಲಂಕಾ ಕ್ಯಾಂಪ್ ಜೊತೆ ಸೇರಲಿದ್ದಾರೆ ಎನ್ನಲಾಗಿ ತಿಳಿದುಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಯನ್ನು ತಿಳಿಸಿ, ಹಾಗೂ ಹಿಂದಿನ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಜಯ ಬಾರಿಸಲಿ ಎಂದು ಆಶಿಸುವ ಮೂಲಕ ಪೋಸ್ಟ್ ಶೇರ್ ಮಾಡಿ..