ಮನೆಯಲ್ಲಿರೋ ಚಿನ್ನಾಭರಣ, ಹಣ ದೋಚಿಕೊಂಡು ಹೋಗೋದನ್ನ ನೀವು ಕೇಳಿರ್ತೀರಾ. ಮನೆ ಮುಂದೆ ನಿಲ್ಲಿಸಿದ್ದ ವೆಹಿಕಲ್ಸ್ನ ಕದ್ದು ಎಸ್ಕೇಪ್ ಆಗೋ ಸ್ಟೋರಿಯನ್ನೂ ನೀವು ನೋಡಿರ್ತೀರಾ. ಆದ್ರೆ, ಇಲ್ಲೊಬ್ಬ ಕಳ್ಳ ಕದ್ದಿರೋದು ಅಂತಿಂಥ ವಸ್ತುವನ್ನಲ್ಲ. ದೈತ್ಯಾಕಾರದ ರೋಡ್ ರೋಲರ್ನನ್ನ. ಹೌದು, ಈ ವಿಷಯ ವಿಚಿತ್ರವೆನಿಸಿದ್ರೂ, ನೀವು ನಂಬಲೇಬೇಕು. ಈ ಎರಡು ಫೋಟೋ ನೋಡಿ. ಮೊದಲು ಹೀಗಿದ್ದ ರೋಡ್ರೋಲರ್ ಅನ್ನ ಈಗ ಯಾವ ಗತಿಗೆ ಬಂದಿದೆ ನೋಡಿ. ಅಲ್ಲಲ್ಲಾ.. ಯಾವ ಗತಿಗೆ ತಂದಿಟ್ಟಿದ್ದಾರೆ ನೋಡಿ. ಕಳ್ಳತನ ಮಾಡಬೇಕು ಅಂದ್ರೆ ಕಳ್ಳರು ಯಾವುದನ್ನೂ ಬಿಡಲ್ಲ ಅನ್ನೋದಕ್ಕೆ ಈ ಸ್ಟೋರಿನೇ ನೈಜ ಉದಾಹರಣೆ. ಕಳ್ಳರ ಕೈಚಳಕಕ್ಕೆ ರಸ್ತೆ ಇದ್ದ ರೋಡ್ ರೋಲರ್ ಪಾಟ್ಸ್ ಪಾಟ್ಸ್ ಕಿತ್ತು ಬಿದ್ದಿದೆ.
[widget id=”custom_html-4″]

ಲಾಕ್ಡೌನ್ ಅಂತಾ ನಿಲ್ಲಿಸಿದ್ದ ಈ ರೋಡ್ರೋಲರ್ನ ಕಳ್ಳರು ಎಸ್ಕೇಪ್ ಮಾಡಿ, ಈಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಅದರಲ್ಲೊಬ್ಬನ ಹೆಸರು ಪವನ್. ಈ ಡಿಫರೆಂಟ್ ಕಳ್ಳತನದ ಸ್ಟೋರಿಯನ್ನ ಡೀಟೇಲಾಗಿ ಹೇಳ್ತೀವಿ ಕೇಳಿ. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಸೆಲ್ವರಾಜ್ ಎಂಬುವವರು 12 ವರ್ಷದ ಹಿಂದೆ ಐದೂವರೆ ಲಕ್ಷ ಕೊಟ್ಟು ರೋಡ್ರೋಲರ್ ಖರೀದಿಸಿದ್ರು. ಲಾಕ್ಡೌನ್ ಆಗಿದ್ರಿಂದ ಕಳೆದ ವರ್ಷ ಮೇನಲ್ಲಿ ರೋಡ್ ರೋಲರನ್ನು ಬೆಂಗಳೂರಿನ ನಾಗರಭಾವಿ ಮೈದಾನದಲ್ಲಿ ನಿಲ್ಲಿಸಿದ್ರು. ಆದ್ರೆ, ಇದೇ ಜೂನ್ 16ರಂದು ವಾಪಸ್ ಬಂದು ನೋಡುವಷ್ಟರಲ್ಲಿ ರೋಡ್ರೋಲರ್ ಮಂಗಮಾಯ ಆಗಿಬಿಟ್ಟಿದೆ. ಈ ಬಗ್ಗೆ ಸೆಲ್ವರಾಜ್ ಚಂದ್ರಲೇಔಟ್ ಪೊಲೀಸರಿಗೆ ದೂರು ಸಹ ಕೊಟ್ಟಿದ್ದಾರೆ. ಆಗ ಪೊಲೀಸರು ಸಿಸಿಟಿವಿ ಕ್ಯಾಮೆರಾ ಚೆಕ್ ಮಾಡಿದಾಗ, ಆರೋಪಿ ಪವನ್ ಮತ್ತು ಭರತ್ ಸಿಕ್ಕಿ ಬಿದ್ದಿದ್ದಾರೆ.
[widget id=”custom_html-4″]

ಆರೋಪಿಗಳು ರೋಡ್ರೋಲರ್ನ್ನು ನಾಗರಭಾವಿಯಿಂದ ಮಾಗಡಿ ರಸ್ತೆಯ ಸೀಗೆಹಳ್ಳಿವರೆಗೂ ಚಲಾಯಿಸಿಕೊಂಡು ಬಂದಿದ್ದಾರೆ. ಅಲ್ಲಿಗೆ ತಂದು ನಿಲ್ಲಿಸಿ ಅದನ್ನು ಪೀಸ್ ಪೀಸ್ ಮಾಡಿ ಕೆಜಿಗೆ 28 ರೂಪಾಯಿಯಿಂತೆ ಏಳು ಟನ್ ಕಬ್ಬಿಣ ಮಾರೋಕೆ ಮುಂದಾಗಿದ್ದಾರೆ. ಅಲ್ಲದೇ, ಎರಡು ಲಕ್ಷಕ್ಕೆ ಡೀಲ್ ಮುಗಿಸಿದ್ದಾರೆ. ಸದ್ಯ ಪವನ್ನ್ನು ಬಂ’ಧಿಸಿದ ಪೊಲೀಸರು ಭರತ್ಗಾಗಿ ಗಾಳ ಹಾಕಿದ್ದಾರೆ. ಅಲ್ಲಾ.. ಅಷ್ಟು ದೊಡ್ಡ ರೋಡ್ ರೋಲರ್ನ್ನೇ ಇವ್ರು ಕದ್ದು, ಅದನ್ನು ಪಾರ್ಟ್ ಟು ಪಾರ್ಟ್ ಮಾರೋಕೆ ಹೋಗಿದ್ರು ಅಂದ್ರೆ ಎಂಥಾ ಕಿಲಾಡಿಗಳು ಇರಬೇಕಲ್ಲಾ. ಇಂಥಾ ಕಳ್ಳತನಾನ ನೀವೆಲ್ಲಾದ್ರೂ ಕೇಳಿದ್ದೀರಾ? ಅದಕ್ಕೆ ಹೇಳಿದ್ದು ಇದು ಡಿಫರೆಂಟ್ ಕಳ್ಳತನ ಅಂತಾ.