ವಿಷ್ಣುದಾದಾ ಅಭಿಮಾನಿ ರಾಕ್ ಲೈನ್ ವೆಂಕಟೇಶ್ ಗೆ ಫೋನ್ ಮಾಡಿ ಸಿಟ್ಟಿನಿಂದ ಮಾತನಾಡಿದ ಆಡಿಯೋ ಲೀಕ್ ! ಅಷ್ಟಕ್ಕೂ ಆ ಆಡಿಯೋದಲ್ಲಿರೋದೇನು ಗೊತ್ತಾ ?

Cinema

ಸ್ನೇಹಿತರೇ, ನಟ, ನಿರ್ಮಾಪಕನಾಗಿ, ಸಿನಿಮಾ ವಿತರಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಕಳೆದ ೨೦ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ರಾಕ್ ಲೈನ್ ವೆಂಕಟೇಶ್ ರವರು. ಇನ್ನು ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಏನೇ ಸಮಸ್ಯೆ ವಿವಾದಗಳಿದ್ದರೂ ತಾವೇ ಮುಂದೆ ನಿಂತು ಬಗೆಹರಿಸುವ ಕೆಲಸ ಮಾಡುತ್ತಾರೆ. ಇನ್ನು ಸದ್ಯಕ್ಕೆ ರಾಜ್ಯದಲ್ಲಿ ಕೊರೋನಾದ ಕಾರಣದಿಂದಾಗಿ ಲಾಕ್ ಡೌನ್ ಆಗಿದ್ದು ಸರ್ಕಾರದಿಂದ ಲಸಿಕೆ ಅಭಿಯಾನ ಸಹ ನಡೆಯುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ..ಇನ್ನು ಇದೆ ಕಾರಣದಿಂದಾಗಿ ರಾಕ್ ಲೈನ್ ವೆಂಕಟೇಶ್ ಅವರು ಸ್ಯಾಂಡಲ್ವುಡ್ ನಲ್ಲಿ ಕೆಲಸ ಮಾಡುವ ಸಿನಿಮಾ ಕಾರ್ಮಿಕರು ಹಾಗೂ ಕಲಾವಿದರಿಗೆ ಉಚಿತವಾಗಿ ಲಸಿಕೆ ಹಾಕಿಸುವ ಯೋಜನೆ ಮಾಡಿದ್ದು, ಇದಕ್ಕಾಗಿ ಕನ್ನಡ ಸಿನಿಮಾ ಭವನದಲ್ಲಿ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿದ್ದರು.

ಇನ್ನು ಲಸಿಕೆ ಹಾಕಿಸುವ ಈ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಮಾರ್ ಸೇರಿದಂತೆ ರೆಬೆಲ್ ಸ್ಟಾರ್ ಅಂಬರೀಷ್ ಅವರ ಫೋಟೋಗಳಿರುವ ಪೋಸ್ಟರ್ ಗಳನ್ನ ಮಾತ್ರ ಹಾಕಿದ್ದಾರೆ, ಡಾ.ವಿಷ್ಣುವರ್ಧನ್ ಅವರ ಪೋಸ್ಟರ್ ನ್ನ ಹಾಕಿಲ್ಲ ಎಂದು ಸಾಹಸಸಿಂಹನ ಅಭಿಮಾನಿಯೊಬ್ಬರು ರಾಕ್ ಲೈನ್ ವೆಂಕಟೇಶ್ ಅವರ ಜೊತೆಗೆ ಗರಂ ಆಗಿ ಮಾತನಾಡಿರುವ ಆಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಆ ಆಡಿಯೋದಲ್ಲಿ ದಾದಾ ವಿಷ್ಣು ವರ್ಧನ್ ಅವರ ಅಭಿಮಾನಿ ರಾಕ್ ಲೈನ್ ವೆಂಕಟೇಶ್ ಅವರ ಮೇಲೆ ಗರಂ ಆಗಿದ್ದೇಕೆ, ಇದಕ್ಕೆ ಪ್ರತ್ತ್ಯುತ್ತರವಾಗಿ ರಾಕ್ ಲೈನ್ ವೆಂಕಟೇಶ್ ಅವರು ವಿಷ್ಣು ಸರ್ ಅಭಿಮಾನಿಗೆ ಕೊಟ್ಟ ಉತ್ತರ ಏನು ಎಂಬುದನ್ನ ಈ ಕೆಳಗಡೆ ಇರೋ ವಿಡಿಯೋದಲ್ಲಿ ನೋಡಿ..

ಸ್ನೇಹಿತರೇ, ಸ್ಯಾಂಡಲ್ವುಡ್ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ನಿರ್ಮಾಪಕ, ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ಅವರು ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯಕಗಳನ್ನು ಕೂಡ ಮಾಡಿದ್ದು, ಅಣ್ಣಾವ್ರು ಅಗಲಿದಾಗ, ವಿಷ್ಣುವರ್ಧನ್ ಅವರು ಹಾಗೂ ಅಂಬರೀಷ್ಅವರು ಅಗಲಿದಾಗ ತಾವೇ ನಿಂದು ನಿಂತು ಆಗಬೇಕಾದ ಕಾರ್ಯಗಳನ್ನ ಮಾಡಿದ್ದರು. ಆದರೆ ಈಗ ವಿಷ್ಣು ವರ್ಧನ್ ಅವರ ಮೈಸೂರಿನ ಅಭಿಯಾನಿಯೊಬ್ಬರು ವಿಷ್ಣು ಸರ್ ಪೋಸ್ಟರ್ ಹಾಕಿಲ್ಲವೆಂದು ರಾಕ್ ಲೈನ್ ಅವರ ಜೊತೆ ವಾದ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ಅವರು ಸಹ ಅಭಿಮಾನಿಗೆ ಉತ್ತರಗಳನಂ ನೀಡಿದ್ದಾರೆ. ಸ್ನೇಹಿತರೇ, ಈ ಆಡಿಯೋ ಕೇಳಿದ ಮೇಲೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..