ಕಲೆಕ್ಟರ್ ಸೈನ್ ಗೋಸ್ಕರ ಓಡಾಡಿ ಸುಸ್ತಾದ ಅಪ್ಪ..ತಂದೆಯ ಕಷ್ಟ ನೋಡಿ ಮಗಳು ಏನಾದಳು ಗೊತ್ತಾ ?

Inspire

ಕೆಲವರು ಜೀವನದಲ್ಲಿ ಗುರಿಯನ್ನ ಎತ್ತುಕೊಂಡು ಸಾಧನೆಯನ್ನ ಮಾಡಿದ್ರೆ, ಮತ್ತೆ ಅನೇಕರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆದ ಅವಮಾನವನ್ನ ಗುರಿಯಾಗಿಟ್ಟುಕೊಂಡು ಸಾಧನೆ ಮಾಡಿ ಸಮಾಜದಲ್ಲಿ ದೊಡ್ಡ ಎತ್ತರದ ಸ್ಥಾನಕ್ಕೆ ಬೆಳೆಯುತ್ತಾರೆ. ಅದಕ್ಕೆ ಹೇಳೋದು ಸಾಧಿಸುವ ಛಲ ಒಂದಿದ್ದರೆ ಜೀವನದಲ್ಲಿ ಏನು ಬೇಕಾದ್ರು ಸಾಧನೆ ಮಾಡಬಹುದು. ಇದೆ ರೀತಿ ತನ್ನ ತಂದೆಗಾದ ಅವಮಾನವನ್ನ ಗುರಿಯಾಗಿಟ್ಟುಕೊಂಡು ಮಹಿಳೆಯೊಬ್ಬಳು ಸಾಧನೆ ಮಾಡಿ ಎತ್ತರಕ್ಕೆ ಬೆಳೆದ ರೋಚಕ ನಿಜಜೀವನದ ಕತೆ ಇದು. ಈ ಮಹಿಳೆಯ ಹೆಸರು ರೋಹಿಣಿ ಭಾಜೀ ಎಂದು, ಮಹಾರಾಷ್ಟ್ರದಲ್ಲಿ ಜನಿಸಿದವರು. ಓದು ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾದರಸದಂತೆ ಆಕ್ಟಿವ್ ಆಗಿದ್ದರು. ಹೀಗೊಂದು ದಿನ ಅವರ ತಂದೆ ಧಣಿದು ಬಂದಿರುವುದನ್ನ ಗಮನಿಸುತ್ತಾಳೆ. ಕಾರಣವನ್ನು ಕೇಳುತ್ತಾಳೆ. ಅಂದು ಅವರ ತಂದೆ ಹೇಳಿದ ಆ ಒಂದು ಮಾತು ರೋಹಿಣಿ ಭಾಜೀ ಅವರನ್ನ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕರೆದುಕೊಂಡುಹೋಯಿತು.

ಅಸಲಿಗೆ ಅವರ ತಂದೆ ಅಂದು ಹೇಳಿದ್ದೇನು..ಈ ಮಾತಿನಿಂದ ರೋಹಿಣಿ ಭಾಜೀ ಅವರು ಹಾಗಿದ್ದೆನು ಎಂಬುದನ್ನ ನೋಡೋಣ ಬನ್ನಿ..ರೋಹಿಣಿ ಭಾಜೀ ಅವರ ತಂದೆ ವ್ಯವಸಾಯ ಮಾಡಿಕೊಡನು ಜೀವನ ಸಾಗಿಸುತ್ತಿದ್ದವರು. ಸ್ವಲ್ಪ ಭೂಮಿಯನ್ನು ಸಹ ಅವರು ಹೊಂದಿದ್ದರು. ಇನ್ನು ಜಮೀನಿನ ಆಧಾರದಲ್ಲಿ ನೀಡುವ ಸರ್ಕಾರದ ಯೋಜನೆಯನ್ನ ಪಡೆದುಕೊಳ್ಳುವ ಸಲುವಾಗಿ ಅವರು ಪ್ರತೀದಿನ ಜಿಲ್ಲಾಧಿಕಾರಿಗಳ ಕಚೇರಿಗೆ ಓಡಾಡುತ್ತಿದ್ದರು. ನಿಮಗೆಲ್ಲಾ ಗೊತ್ತಿರುವ ಹಾಗೆ ಸರ್ಕಾರೀ ಕಚೇರಿಗಳಿಗೆ ತಮ್ಮಲ್ಲಿ ಚಪ್ಪಲಿ ಸವೆಸಿದರು ಕೂಡ ದಕ್ಕುವುದು ಕಷ್ಟ. ಇನ್ನು ಅದರಲ್ಲೂ ಜಿಲ್ಲಾಧಿಕಾರಿಗಳ ಸಹಿಯ ಅವಶ್ಯಕತೆ ಇದ್ದರೆ, ಕೇಳುವ ಹಾಗೆ ಇಲ್ಲ ಸಾಮಾನ್ಯ ಜನರ ಪರಿಸ್ಥಿತಿ ಏನೂ ಅಂತ. ಇನ್ನು ಇದೆ ಪರಿಸ್ಥಿತಿಗೆ ರೋಹಿಣಿ ಭಾಜೀ ಅವರ ತಂದೆ ಕೂಡ ಒಳಗಾಗಿದ್ದು ತಾನು ಪಡುತ್ತಿರುವ ಕಷ್ಟವನ್ನ ಮಗಳ ಬಳಿ ಹೇಳಿಕೊಂಡಿದ್ದರು. ಆ ದಿನದಿಂದಲೇ ಮನಸ್ಸಿನಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡ ರೋಹಿಣಿ ಭಾಜೀ ಅವರು ತಾನೂ ಐಎಎಸ್ ಅಧಿಕಾರಿ ಆಗಿ, ನನ್ನ ತಂದೆ ಪಟ್ಟಂತಹ ಕಷ್ಟ ಬೇರೆ ಸಾಮಾನ್ಯ ಜನರಿಗೆ ಆಗಬಾರದೆಂದು ಕಲೆಕ್ಟರ್ ಆಗುವ ನಿರ್ಧಾರ ತೆಗೆದುಕೊಂಡ್ರು..

ಚಿಕ್ಕವಯಸ್ಸಿನಲ್ಲೇ ತೆಗೆದುಕೊಂಡ ನಿರ್ಧಾರಕ್ಕೆ ಬದ್ದರಾದ ರೋಹಿಣಿ ಭಾಜೀ ಅವರು ಇಂಜಿನಿಯರಿಂಗ್ ಪದವಿ ಮಾಡಿ, ಬಳಿಕ UPSC ಪರೀಕ್ಷೆ ಬರೆಯುತ್ತಾರೆ. ಐಎಎಸ್ ಗಾಗಿ ಯಾವುದೇ ತರಭೇತಿಯನ್ನ ಪಡೆದುಕೊಳ್ಳದೇ ಕಷ್ಟಪಟ್ಟು ಛಲದಿಂದ ವಿದ್ಯಾಭ್ಯಾಸ ಮಾಡುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ರಾಂಕಿಂಗ್ ಪಡೆಯುವ ಮೂಲಕ ಉತ್ತೀರ್ಣರಾಗುತ್ತಾರೆ. ವಿಶೇಷ ಎಂದರೆ ತಮಿಳುನಾಡಿನ ೧೭೦ ಜನ ಪುರುಷರು ಐಎಎಸ್ ಮಧ್ಯೆ ಒಬ್ಬ ಮಹಿಳೆಯಾಗಿ ರೋಹಿಣಿ ಭಾಜೀ ಅವರು ಆಯ್ಕೆಯಾಗುತ್ತಾರೆ. ಇನ್ನು ರೋಹಿಣಿ ಭಾಜೀ ಅವರು ಐಎಎಸ್ ಅಧಿಕಾರಿಯಾದ ಬಳಿಕ ತಾನು ಅಂದುಕೊಂಡಂತೆ ಸಾಮಾನ್ಯ ಜನರು ಹಾಗೂ ಬಡವರು ಸುಖಾ ಸುಮ್ಮನೆ ಕಚೇರಿಗಳಿಗೆ ತಿರುಗಾಡದಂತೆ ಹಲವು ದಿಟ್ಟ ಕ್ರಮಗಳನ್ನ ತೆಗೆದುಕೊಂಡು ಮಾದರಿ ಅಧಿಕಾರಿಯಾಗಿ ನಿಲ್ಲುತ್ತಾರೆ. ತನ್ನ ತಂದೆ ಅನುಭವಿಸಿದ ಕಷ್ಟವನ್ನ ನೋಡಿ ಮಹಿಳೆಯೊಬ್ಬಳು ಹೇಗೆ ತನ್ನ ಅಂದುಕೊಂಡ ಗುರಿಯನ್ನ ಮುಟ್ಟಿದರು ಆಲ್ವಾ..ಒಟ್ಟಿನಲ್ಲಿ ರೋಹಿಣಿ ಭಾಜೀ ಅವರ ಸಾಧನೆ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆಂಬ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಲಿದೆ..