ರೋಹಿಣಿ ಸಿಂಧೂರಿಯವರಿಗೆ ಸೆಡ್ಡು ಹೊಡೆದ್ರಾ ಮೈಸೂರಿನ ನೂತನ ಜಿಲ್ಲಾಧಿಕಾರಿ ! ಮೊದಲ ದಿನವೇ ಮಾಡಿದ ಕೆಲಸ ಏನ್ ಗೊತ್ತಾ?

Kannada News

ಸ್ನೇಹಿತರೇ, ನಮಗೆಲ್ಲರಿಗೂ ತಿಳಿದಿರುವಂತೆ ಮೈಸೂರಿನ ನಿಷ್ಠಾವಂತ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು ಮತ್ತು ಮೈಸೂರಿನ ನಗರ ಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್ ಅವರ ನಡುವಿನ ಮ’ನಸ್ತಾಪ ದೊಡ್ಡ ರಂ’ಪಾಟವಾಗಿ ಇಡೀ ದೇಶದಾದ್ಯಂತ ಸುದ್ದಿಯಾಗಿತ್ತು. ಇನ್ನು ಇಬ್ಬರು ಐಎಎಸ್ ಅಧಿಕಾರಿಗಳ ಜ’ಗಳದ ನಡುವೆ ಮಧ್ಯ ಪ್ರವೇಶ ಮಾಡಿದ ರಾಜ್ಯಸರ್ಕಾರ ಇಬ್ಬರು ಮಹಿಳಾ ಅಧಿಕಾರಿಗಳನ್ನ ಬೆಂಗಳೂರಿನ ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿ ಇದಕ್ಕೆಲ್ಲಾ ಫುಲ್ ಸ್ಟಾಪ್ ಇಟ್ಟಿತ್ತು. ಇನ್ನು ಪ್ರಾಮಾಣಿಕ, ನಿಷ್ಠಾವಂತ ಮಹಿಳಾ ಅಧಿಕಾರಿ ಅಂತ ಹೆಸರು ಮಾಡಿದ್ದ ರೋಹಿಣಿ ಸಿಂಧೂರಿಯವರನ್ನ ವರ್ಗಾವಣೆ ಮಾಡಿದ ಪರಿಣಾಮ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.

ರೋಹಿಣಿ ಸಿಂಧೂರಿಯವರ ಪರವಾಗಿ ಮಾತನಾಡಿದ ಬಹುತೇಕರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನ ಮೈಸೂರಿನಿಂದ ವರ್ಗಾವಣೆ ಮಾಡಿದ್ದು ಸರಿ ಎಲ್ಲಾ ಎಂಬ ಅಭಿಪ್ರಾಯ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂದಿದ್ದು ನಮಗೆಲ್ಲರಿಗೂ ಗೊತ್ತಿರೋ ವಿಷಯವೇ..ರಾಜಕಾರಣಿಗಳ ಕಾರಣದಿಂದಾಗಿ ನಿಷ್ಠಾವಂತ ಅಧಿಕಾರಿಯನ್ನ ವರ್ಗಾವಣೆ ಮಾಡಲಾಗಿದೆ ಎಂದು ಮೈಸೂರಿನ ಜನರ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದರು. ಇನ್ನು ಡಿಸಿ ರೋಹಿಣಿ ಸಿಂಧೂರಿಯವರನ್ನ ಮೈಸೂರಿನಿಂದ ವರ್ಗಾವಣೆ ಮಾಡಿದ ಬೆನ್ನಲ್ಲೇ ಆ ಸ್ಥಾನಕ್ಕೆ ಡಾ. ಬಗಾದಿ ಗೌತಮ್ ಎಂಬುವವರನ್ನ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಿಸಿತು. ಇನ್ನು ತಾವು ವರ್ಗಾವಣೆ ಆದ ಬಳಿಕ ಮೈಸೂರಿಗೆ ಭೇಟಿ ಕೊಟ್ಟು ನೂತನ ಡಿಸಿಗೆ ಶುಭಾಶಯಗಳನ್ನ ತಿಳಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡುತ್ತಾ, ಮೈಸೂರು ನನಗೆ ತಾಯಿಯ ಪ್ರೀತಿಯನ್ನ ಕೊಟ್ಟಿದ್ದು, ತವರು ಮನೆಯಿಂದಲೇ ಹೋಗುತ್ತಿದ್ದೇನೆಯೇ ಅನ್ನುವಂತಹ ಭಾವನೆ ವ್ಯಕ್ತವಾಗುತ್ತಿದೆ ಎಂದು ರೋಹಿಣಿಯವರು ಹೇಳಿದ್ದಾರೆ.

ಏನೆಲ್ಲಾ ನಡೆಯಿತು ಎಲ್ಲವು ಮೈಸೂರಿನ ಜನರಿಗೆ ಕೊಟ್ಟಿದೆ. ಮೈಸೂರಿಗಾಗಿ ಕೆಲಸ ಮಾಡುವ ವೇಳೆಯಲ್ಲೇ ವರ್ಗಾವಣೆ ಮಾಡಿರುವುದು ನನ್ನಲ್ಲಿ ತುಂಬಾ ಬೇಸರ ತಂದಿದೆ. ನನಗೆ ಇಷ್ಟೊಂದು ಪ್ರೀತಿ ಕೊಟ್ಟಿರುವ ಮೈಸೂರಿನ ಜನರಿಗೆ ಧನ್ಯವಾದಗಳು ಎಂದು ರೋಹಿಣಿ ಸಿಂಧೂರಿಯವರು ಹೇಳಿದ್ದಾರೆ. ಇನ್ನು ರೋಹಿಣಿ ಸಿಂಧೂರಿಯವರು ಮೈಸೂರಿನಿಂದ ನಿರ್ಗಮನವಾಗುತ್ತಿದ್ದಂತೆ, ನೂತನ ಜಿಲ್ಲಾಧಿಕಾರಿಯಾಗಿರುವ ಗೌತಮ್ ಅವರು ಹೊಸ ಆದೇಶವನ್ನ ಜಾರಿಗೆ ತಂದಿದ್ದು ರೋಹಿಣಿ ಸಿಂಧೂರಿಯವರಿಗೆ ಸೆಡ್ಡು ಹೊಡೆದಿದ್ದಾರೆ. ಹೌದು, ಮೈಸೂರಿನಲ್ಲಿ ಹೆಚ್ಚಾಗಿದ್ದ ಕೊರೋನಾ ನಿಯಂತ್ರಣ ಮಾಡುವುದಕ್ಕಾಗಿ ರೋಹಿಣಿ ಸಿಂಧೂರಿಯವರು ಇಂದೇ ತಿಂದಳು ೭ನೇ ತಾರೀಖಿನವರೆಗೆ ವಾರದಲ್ಲಿ ಕೇವಲ ೨ದಿನಗಳು ಮಾತ್ರ ಅಗತ್ಯ ವಸ್ತುಗಳನ್ನ ತೆಗೆದುಕೊಳ್ಳುವ ಅವಕಾಶ ನೀಡಿದ್ದರು.

ಇನ್ನು ಈಗ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿರುವ ಡಾ.ಬಗಾದಿ ಗೌತಮ್ ಅವರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯವರ ಆದೇಶವನ್ನ ರದ್ದು ಮಾಡಿ ಹೊಸ ಆದೇಶವನ್ನ ಜಾರಿಗೊಳಿಸಿದ್ದಾರೆ. ಜೂನ್ ೧೪ನೇ ತಾರೀಖಿನವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಇರೋ ಕಾರಣ ಅಲ್ಲಿವರೆಗೆ ವಾರದ ಪ್ರತೀ ದಿನ ಬೆಳಿಗ್ಗೆ ೬ರಿಂದ ೧೦ಗಂಟೆಯವರೆಗೆ ದಿನ ಬಳಕೆ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ ಹೊಸ ಆದೇಶ ಹೊರಡುಸುವ ಮೂಲಕ, ತಾವು ಮೈಸೂರಿನ ಡಿಸಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನವೇ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರಿಗೆ ಸೆಡ್ಡು ಹೊಡೆದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮೈಸೂರಿಗಾಗಿ ನೂತನ ಜಿಲಾಧಿಕಾರಿ ಯಾವ ರೀತಿಯ ಕೆಲಸಗಳನ್ನ ಮಾಡಲಿದ್ದಾರೆ ಎಂಬ ಕುತೂಹಲ ಮೈಸೂರಿನ ಜನರಲ್ಲಿ ಮೂಡಿದೆ.