ಖಡಕ್ ಮಹಿಳಾ ಡಿಸಿ ರೋಹಿಣಿ ಸಿಂಧೂರಿಯವರ ಸಂಬಳ ಹಾಗೂ ಅವರ ಇಲ್ಲಿವರೆಗಿನ ಒಟ್ಟು ಆಸ್ತಿ ಎಷ್ಟು ಗೊತ್ತಾ ?

Kannada Mahiti

ಸ್ನೇಹಿತರೇ, ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಇಬ್ಬರು ಐಎಎಸ್ ಮಹಿಳಾ ಅಧಿಕಾರಿಗಳಾದ ಡಿಸಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆಯ ಆಯುಕ್ತೆ ಆಗಿದ್ದ ಮತ್ತೊಬ್ಬ ಮಹಿಳಾ ಅಧಿಕಾರಿ ಶಶಿಕಲಾ ಶಿಲ್ಪಾ ನಾಗ್ ಅವರ ನಡುವಿನ ಜಗಳ ಇಡೀ ದೇಶದಾದ್ಯಂತ ಚರ್ಚೆ ಮಾಡಿದ್ದು, ಮಧ್ಯ ಪ್ರವೇಶ ಮಾಡಿರುವ ರಾಜ್ಯ ಸರ್ಕಾರ ಈಗಾಗಲೇ ಈ ಇಬ್ಬರೂ ಮಹಿಳಾ ಅಧಿಕಾರಿಗಳನ್ನ ಬೆಂಗಳೂರಿನ ಬೇರೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿ ಆದೇಶ ಮಾಡಿದೆ. ಇನ್ನು ಪ್ರಾಮಾಣಿಕ ಡಿಸಿ ಎಂದು ಹೆಸರು ಮಾಡಿರುವ ರೋಹಿಣಿ ಸಿಂಧೂರಿ ಅವರನ್ನ ವರ್ಗವನೇ ಮಾಡಿದಕ್ಕೆ ಸಾಮಾಜಿಕ ಜಾಲತಾಣಗಳ್ಲಲಿ ಭಿನ್ನ ಭಿನ್ನ ಬಂದಿವೆ. ಇನ್ನು ಇದೆಲ್ಲದರ ನಡುವೆ IAS ಮಹಿಳಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿಣಿ ಸಿಂಧೂರಿಯವರು ಪಡೆಯುತ್ತಿರುವ ಸಂಬಳ ಆಸ್ತಿ ಎಷ್ಟಿದೆ ಎನ್ನುವುದರ ಬಗ್ಗೆ ಜನರಲ್ಲಿ ತುಂಬಾ ಕುತೂಹಲ ಇದೆ..

ಇನ್ನು ದಕ್ಷ, ಪ್ರಾಮಾಣಿಕ ಮಹಿಳಾ ಅಧಿಕಾರಿಯಾಗಿ ಹೆಸರು ಮಾಡಿರುವ ಡಿಸಿ ರೋಹಿಣಿ ಸಿಂಧೂರಿಯವರು ಇದಕ್ಕೂ ಮೊದಲು ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಡಿಸಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ಬಳಿಕ ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಎಲ್ಲಿಯೂ ಕೂಡ ಯಾವುದೇ ರಾಜಕಾರಣಿಗಳ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ, ದಿಟ್ಟ ಖಡಕ್ ಅಧಿಕಾರಿ ಎಂದು ಹೆಸರು ಮಾಡಿದ್ದರು. ಇನ್ನು ಹಾಸನದಲ್ಲಿ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿಯೂ ಕೂಡ ರಾಜಕಾರಣಿಗಳ ನಡುವೆ ಜಟಾಪಟಿ ಏರ್ಪಟ್ಟಿದ್ದು, ಕೆಲ ದಿನಗಳ ಬಳಿಕ ರೋಹಿಣಿ ಸಿಂಧೂರಿಯವರನ್ನ ವರ್ಗಾವಣೆ ಮಾಡಲಾಗಿತ್ತು. ಇನ್ನು ಮೈಸೂರಿಗೆ ವರ್ಗಾವಣೆ ಆದ ಬಳಿಕ ಅಲ್ಲಿಯೂ ಕೂಡ ಶಾಸಕರು ಹಾಗೂ ಸಂಸದರ ನಡುವೆ ಹಲವು ಕಾರಣಗಳಿಗಾಗಿ ಡಿಸಿ ರೋಹಿಣಿ ಸಿಂಧೂರಿಯವರೊಂದಿಗೆ ಜಟಾಪಟಿ ಆಗಿದ್ದು ವಿಷಯವೇ.

ಇನ್ನು ಡಿಸಿ ಮಹಿಳಾ ಅಧಿಕಾರಿಯಾಗಿ ಹಾಸನ, ಮಂಡ್ಯ, ಮೈಸೂರಿನಲ್ಲಿ ಕೆಲಸ ಮಾಡಿರುವ ರೋಹಿಣಿ ಸಿಂಧೂರಿಯವರು ಪಡೆಯುತ್ತಿರುವ ಸಂಬಳದ ಬಗ್ಗೆ ಹೇಳಬೇಕಾದ್ರೆ, ಒಬ್ಬ ಐಎಎಸ್ ಅಧಿಕಾರಿಗೆ ಕೊಡುವ ಸಂಬಳದಂತೆ, ಬೇಸಿಕ್ ಆಗಿ 56 ಸಾವಿರದಿಂದ ಪ್ರಾರಂಭವಾಗಿ 2 ಲಕ್ಷ 50ಸಾವಿರದವರೆಗೆ ಇರುತ್ತೆ ಎಂಬ ಮಾಹಿತಿ ಇದೆ. ಇನ್ನು ಐಎಎಸ್ ಮಹಿಳಾ ಅಧಿಕಾರಿ ರೋಹಿಣಿ ಸಿಂಧೂರಿಯವರು ಈಗಾಗಲೇ ೧೦ ವರ್ಷಗಳ ಕಾಲ ಡಿಸಿಯಾಗಿ ಕೆಲಸ ಮಾಡಿದ್ದು, ಇವರಿಗೆ ಒಂದು ತಿಂಗಳಿಗೆ ಸರ್ಕಾರದಿಂದ ಸಿಗೋ ಇತರೆ ಸೌಲಭ್ಯಗಳನ್ನ ಬಿಟ್ಟು 1 ಲಕ್ಷದಿಂದ 1.5 ಲಕ್ಷದವರೆಗೆ ಸಂಬಳ ಸಿಗಲಿದೆ ಎಂಬ ಮಾಹಿತಿ ಇದೆ. ಇನ್ನು ಇವರ ಒಟ್ಟು ಆಸ್ತಿಯ ಬಗ್ಗೆ ಹೇಳಬೇಕಾದ್ರೆ, ಏಳರಿಂದ ಹತ್ತು ಕೋಟಿಯ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಸ್ನೇಹಿತರೇ, ದಕ್ಷ ಅಧಿಕಾರಿ ಎನಿಸಿಕೊಂಡಿರುವ ಡಿಸಿ ರೋಹಿಣಿ ಸಿಂಧೂರಿಯವರನ್ನ ವರ್ಗಾವಣೆ ಮಾಡಿದ್ದು ಸರಿಯೋ? ತಪ್ಪೋ? ಎಂಬುದರ ಕಾಮೆಂಟ್ ಮಾಡಿ ತಿಳಿಸಿ..