ತಮ್ಮ ಬಗ್ಗೆ ಸಿನಿಮಾ ಮಾಡುತ್ತಿರೋದಕ್ಕೆ ರೋಹಿಣಿಸಿಂಧೂರಿಯವರು ಹೇಳಿದ್ದೇನು ಗೊತ್ತಾ? ಸಿನಿಮಾ ಹೆಸರು ಹೀರೋಯಿನ್ ಯಾರಂತ ನೋಡಿ..

Kannada News
Advertisements

ಸ್ನೇಹಿತರೇ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಕೆಲ ದಿನಗಳಿಂದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್ ಅವರ ನಡುವೆ ಮನಸ್ತಾಪ ಏರ್ಪಟ್ಟು ಇದು ದೊಡ್ಡ ಸುದ್ದಿಯಾಗಿ ಇಡೀ ರಾಜ್ಯದಾದ್ಯಂತ ಸಖತ್ ಸುದ್ದಿ ಮಾಡಿತ್ತು. ಮೈಸೂರಿನ ಪಾಲಿಕೆಯ ಆಯುಕ್ತೆಯಾಗಿದೆ ಶಿಲ್ಪಾ ನಾಗ್ ಅವರು ರೋಹಿಣಿ ಸಿಂಧೂರಿಯವರ ಮೇಲೆ ಆರೋಪಗಳ ಮೇಲೆ ಆರೋಪಗಳನ್ನ ಮಾಡಿದ್ದು ರಾಜೀನಾಮೆ ನೀಡಲು ಮುಂದಾಗಿದ್ದರು. ಇದರ ಜೊತೆಗೆ ರಾಜಕಾರಣಿಗಳಿಂದಲೂ ರೋಹಿಣಿ ಸಿಂಧೂರಿಯವರ ಮೇಲೆ ಆರೋಪಗಳನ್ನ ಮಾಡಲಾಗಿತ್ತು. ಈ ಎಲ್ಲಾ ಕಾರಣಗಳಿಂದ ಇಬ್ಬರು ಐಎಎಸ್ ಅಧಿಕಾರಿಗಳಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದು ರೋಹಿಣಿ ಸಿಂಧೂರಿಯವರನ್ನ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು.

[widget id=”custom_html-4″]

Advertisements

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ರೋಹಿಣಿ ಸಿಂಧೂರಿಯವರ ಪರವಾಗಿ ಸಿಕ್ಕಾಪಟ್ಟೆ ಬೆಂಬಲ ವ್ಯಕ್ತವಾಗಿದ್ದು ದಕ್ಷ, ನಿಷ್ಠಾವಂತ ಅಧಿಕಾರಿ ಎನಿಸಿದ್ದ ಅಧಿಕಾರಿಯನ್ನ ವರ್ಗಾವಣೆ ಮಾಡಿದ್ದು ಸರಿಇಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನು ವರ್ಗಾವಣೆ ಬಳಿಕ ಮೈಸೂರಿಗೆ ಭೇಟಿ ಕೊಟ್ಟಿದ್ದ ಡಿಸಿ ರೋಹಿಣಿ ಸಿಂಧೂರಿಯವರು ಮೈಸೂರು ನನಗೆ ತಾಯಿ ಮನೆ ಇದ್ದಂತಿತ್ತು. ಆದರೆ ಈಗ ಮೈಸೂರಿನಿಂದ ವರ್ಗಾವಣೆ ಆಗಿರುವುದಕ್ಕೆ ತವರು ಮನೆಯಿಂದ ಹೋದಷ್ಟೇ ಭಾವುಕರಾಗಿ ಮಾತನಾಡಿ ಮೈಸೂರಿನಿಂದ ಹೊರಟಿದ್ದರು. ಇನ್ನು ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಸಿಂಧೂರಿಯವರ ಬಗೆಗಿನ ಮತ್ತೊಂದು ಸುದ್ದಿ ಬಾರಿ ಕುತೂಹಲ ಹುಟ್ಟುಹಾಕಿದೆ. ಹೌದು, ರೋಹಿಣಿ ಸಿಂಧೂರಿಯವರ ಕುರಿತಂತೆ ಅವರ ಜೀವನಾಧಾರಿತ ಸಿನಿಮಾವೊಂದು ಬರುತ್ತಿದೆ ಎಂಬುದೇ ಈಗ ದೊಡ್ಡ ಸುದ್ದಿಯಾಗಿದೆ.

[widget id=”custom_html-4″]

ಹೌದು, ಸ್ಯಾಂಡಲ್ವುಡ್ ನ ನಿರ್ದೇಶಕರೊಬ್ಬರು ರೋಹಿಣಿ ಸಿಂಧೂರಿಯವರ ಕುರಿತಂತೆ ಸಿನಿಮಾ ಮಾಡಲು ಕಥೆ ಚಿತ್ರಕತೆ ರೆಡಿಯಾಗಿದೆ ಎಂದು ಹೇಳಲಾಗಿದೆ. ಇನ್ನೂ ಈಗಾಗಲೇ ಸಿನಿಮಾದ ಹೆಸರನ್ನ ಚಲಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿದ್ದು, ಭಾರತ ಸಿಂಧೂರಿ ಎಂಬುದು ರೋಹಿಣಿ ಸಿಂಧೂರಿಯವರ ಕುರಿತ ಸಿನಿಮಾದ ಹೆಸರು ಎಂದು ಹೇಳಲಾಗಿದೆ. ಇನ್ನು ಸಿನಿಮಾದ ಕತೆ ಚಿತ್ರಕತೆಯನ್ನ ಮಂಡ್ಯದವರಾದ ಕವಿ ಎಸ್.ಕೃಷ್ಣ ಸಂದ್ರ ಎಂಬುವವರ ಮಾಡಲಿದ್ದು, ಸಿನಿಮಾ ನಿರ್ದೇಶನ ಕೂಡ ಮಾಡಲಿದ್ದಾರೆ. ಪ್ರಮುಖ ಪಾತ್ರವಾದ ರೋಹಿಣಿ ಸಿಂಧೂರಿಯವರ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಯಾವುದೇ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಕುರಿತಂತೆ ಸಿನಿಮಾ ಮಾಡಬೇಕಾದರೆ ಆ ವ್ಯಕ್ತಿಯ ಅನುಮತಿಯನ್ನ ಪಡೆಯಬೇಕಾಗುತ್ತದೆ.

[widget id=”custom_html-4″]

ಅವರ ಜೀವನದಲ್ಲಿ ನಡೆದಿರುವ ಸತ್ಯಾಂಶಗಳನ್ನ ಸಿನಿಮಾದಲ್ಲಿ ತೋರಿಸ ಬೇಕಾಗಿರುವ ಕಾರಣ ಆ ವ್ಯಕ್ತಿಯ ಬಳಿಯೇ ಚರ್ಚಿಸಿ ಮುಂದುವರಿಯಬೇಕಾಗುತ್ತದೆ. ಇನ್ನು ರೋಹಿಣಿ ಸಿಂಧೂರಿಯವರು ಐಎಎಸ್ ಅಧಿಕಾರಿಯಾಗಿದ್ದು, ಸರ್ಕಾರಿ ಅಧಿಕಾರಿಯಾಗಿರುವ ಕಾರಣ ಅವರ ಸಿನಿಮಾ ಮಾಡುವುದರ ಬಗ್ಗೆ ಅವರ ಬಳಿಯೇ ಮಾತನಾಡಬೇಕಾಗುತ್ತದೆ. ಇನ್ನು ರೋಹಿಣಿ ಸಿಂಧೂರಿಯವರ ಸಿನಿಮಾ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕಾರಣ ಮಾಧ್ಯಮದವರು ಕೂಡ ರೋಹಿಣಿಯವರಿಗೆ ಕರೆ ಮಾಡಿ ಅವರ ಸಿನಿಮಾ ವಿಚಾರದ ಕುರಿತಂತೆ ಮಾತನಾಡಿದ್ದು ಅದಕ್ಕೆ ರೋಹಿನ್ನಿ ಸಿಂಧೂರಿಯವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಇಲ್ಲಿಯವರೆಗೂ ತಮ್ಮ ಜೀವನಾಧಾರಿತ ಕುರಿತ ಸಿನಿಮಾ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ, ಅದರ ಬಗ್ಗೆ ಯಾರೂ ಏನು ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.