ಶಾಲೆಗೆ ಪ್ರತೀ ದಿನ 24ಕಿಮೀ ಸೈಕಲ್ ತುಳಿದು ಹೋಗುತ್ತಿದ್ದ 10ನೇ ಕ್ಲಾಸ್ ಬಾಲಕಿ ಟಾಪರ್ !

News
Advertisements

ಓದಿನ ವಿಷಯಕ್ಕೆ ಬಂದಾಗ ‘ಹಲ್ಲಿದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲಿಲ್ಲ’ ಎಂಬ ಗಾದೆ ಮಾತನ್ನ ಸಾಕಷ್ಟು ಬಾರಿ ಕೇಳಿರುತ್ತೇವೆ. ಇದರರ್ಥ ಹಣದ ಜೊತೆಗೆ ಎಲ್ಲಾ ರೀತಿಯ ಸೌಲಭ್ಯ ಇದ್ದರೂ ಓದುವುದಕ್ಕೆ ಆಗೋದಿಲ್ಲ, ಆದರೆ ಓದುವ ಮನಸ್ಸಿರುವವರಿಗೆ ಯಾವುದೇ ರೀತಿಯ ಸೌಲಭ್ಯ ಇಲ್ಲದಿರುವ ಎಷ್ಟೋ ನಿದರ್ಶನಗಳನ್ನ ನಾವು ನೋಡಿರುತ್ತ್ತೆವೆ. ಆದರೆ ಛಲ ಒಂದಿದ್ದಾರೆ ಏನೇ ಅಡೆ ತಡೆ ತೊಂದರೆಗಳು ನಮ್ಮ ಎದುರಿಗೆ ಬಂದರೂ ಅವುಗಳನ್ನೆಲ್ಲಾ ದಾಟಿ ಸಾಧನೆ ಮಾಡಬಹುದು ಎಂಬುದಕ್ಕೆ ಬಾಲಕಿಯೊಬ್ಬಳು ಸಾಕ್ಷಿಯಾಗಿದ್ದಾಳೆ.

Advertisements

ಹೌದು, ಮಧ್ಯಪ್ರದೇಶದ ರೋಶನಿ ಭದೋರಿಯಾ ಎನ್ನುವ ಬಾಲಕಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರತೀ ದಿನ 24 ಕಿಮೀ ಇರುವ ಶಾಲೆಗೆ ಸೈಕಲ್ ತುಳಿದುಕೊಂಡೇ ಹೋಗುತ್ತಿದ್ದಳು. ಕಾರಣ ಆ ಶಾಳೆಗೆ ಹೋಗಲು ಯಾವುದೇ ರೀತಿಯ ಬಸ್ಸಿನ ವ್ಯವಸ್ಥೆ ಇರಲಿಲ್ಲ. ಆದರೂ ಇದೆಲ್ಲಾ ತೊಂದರೆಯ ಮಧ್ಯೆಯೂ ೧೦ನೇ ತರಗತಿಯ ಪರೀಕ್ಷೆಯ್ತಲ್ಲಿ ಶೇ 98.75ರಷ್ಟು ಮಾರ್ಕ್ಸ್ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಮಧ್ಯಪ್ರದೇಶದ ಭಿಂಡ್‌ ಜಿಲ್ಲೆಯ ಅಂಜೋಲ್ ಎಂಬ ಕುಗ್ರಾಮದ ನಿವಾಸಿಯಾಗಿರುವ ಈ ಬಾಲಕಿ ಹತ್ತನೇ ತರಗತಿಯಲ್ಲಿ ೮ನೇ ರ್ಯಾನ್ಕ್ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಓದುವುದಕ್ಕೆ ಮನಸ್ಸು ಛಲವೊಂದಿದ್ದರೆ ಸಾಕು ಯಾವುದೇ ಅಡೆತಡೆಗಳು ಎದುರಾದರು ಅವನ್ನೆಲ್ಲಾ ಜಯಿಸಿ ನಮ್ಮ ಗುರಿ ತಲುಪಬಹುದು ಎಂಬುದನ್ನ ಸಾಧಿಸಿ ತೋರಿಸಿದ್ದು ಎಷ್ಟೋ ಜನಕ್ಕೆ ಸ್ಫೂರ್ತಿಯಾಗಿದ್ದಾಳೆ.