ಕೊನೆಗೂ ಬಂದೆ ಬಿಡ್ತು 100 ರೂಪಾಯಿಯಲ್ಲಿ 400ಕಿಮೀ ಓಡುವ ಸ್ಕೂಟರ್.!ಇಷ್ಟು ಕಡಿಮೆನಾ ಬೆಲೆ.?

Kannada Mahiti

ಎಲ್ಲರಿಗೂ ಗೊತ್ತಿರುವಂತೆ ಸ್ಕೂಟರ್ ಗಳು, ಬೈಕ್ಗಳು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಜೀವನದಲ್ಲಿ ಎಲ್ಲರೂ ಕೂಡ ಒಮ್ಮೆಯಾದರೂ ತಮ್ಮ ಇಷ್ಟದ ಬೈಕನ್ನು ಓಡಾಡುವುದಕ್ಕೆ ಖರೀದಿ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಇತ್ತೀಚಿಗೆ ಪೆಟ್ರೋಲ್ ಬೆಲೆ ಹೆಚ್ಚಾದ ಕಾರಣಕ್ಕೆ, ಸಾಕಷ್ಟು ಜನ ಎಲೆಕ್ಟ್ರಿಕ್ ಸ್ಕೂಟರ್ ಕಂಡುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದೀಗ ದೇಶದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗುತ್ತಿದ್ದು ಹೆಚ್ಚು ಮಾರಾಟವಾಗುತ್ತಿವೆ. ಇನ್ನೂ ಜನರು ಕಡಿಮೆ ಬೆಲೆಯ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಗಳ ಬುಕ್ಕಿನಲ್ಲಿ ಮುಂದಾಗಿದ್ದಾರೆ. ಹೌದು ದೇಶಕ್ಕೆ ಹೊಸ ಸ್ಕೂಟರ್ ಬಿಡುಗಡೆಯಾಗುತ್ತಿದ್ದು ಇಲ್ಲೊಂದು ಸ್ಕೂಟರ್ ಗೆ ಕೇವಲ 25 ಪೈಸೆ ಖರ್ಚು ಮಾಡಿದರೆ ಒಂದು ಕಿಲೋಮೀಟರ್ ಚಲಿಸುತ್ತದೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಈ ಸ್ಕೂಟರ್ ಯಾವುದು.? ಇದರ ನಿಗದಿತ ಬೆಲೆ ಏನು.? ಎಷ್ಟು ಕಿಲೋಮೀಟರ್ ವರೆಗೂ ಓಡುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಈ ಬೈಕ್ ಇತ್ತೀಚಿಗೆ ತನ್ನ ಹೊಸ ಸ್ಟೈಲಿಸ್ ಎಲೆಕ್ಟ್ರಿಕ್ ಸ್ಕೂಟರ್ ragged ಎಂದು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಹೆಚ್ಚು ಆಕರ್ಷಕ ಆಗಿದ್ದು ತುಂಬಾನೇ ಬಲವಾದ ಬ್ಯಾಟರಿ ಹೊಂದಿದೆ. ಸ್ಕೂಟರ್ ಗೆ G1 ಮತ್ತು G1+ ಎಂಬುದಾಗಿ ಎರಡು ರೂಪಾಂತರಗಳಲ್ಲಿ ಇದನ್ನ ಪರಿಚಯ ಮಾಡಿಕೊಡಲಾಗಿದೆ. ಜೊತೆಗೆ ಈ ಸ್ಕೂಟರಿನ ಚಲನವಲನ ಖರ್ಚು ತುಂಬಾನೇ ಕಡಿಮೆ ಎಂದು ಕಂಪನಿ ಪರಿಚಯ ಮಾಡಿದೆ. ಕೇವಲ 25 ಪೈಸೆಗೆ ಒಂದು ಕಿಲೋಮೀಟರ್ ನಷ್ಟು ಓಡುವ ಈ ಸ್ಕೂಟರ್, ಒಂದು ರೂಪಾಯಿಗೆ 4 ಕಿಲೋಮೀಟರ್ ಚಲನೆ ಮಾಡುವ ಸಾಮರ್ಥ್ಯ ಹೊಂದಿದೆ. ಹಾಗೇ ನೂರು ರೂಪಾಯಿಯಲ್ಲಿ ನಾಲ್ಕು ನೂರು ಕಿಲೋಮೀಟರ್ ವರೆಗೆ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ. ಹೌದು ಸ್ನೇಹಿತರೆ ಈಗಾಗಲೇ ಈ ಸ್ಕೂಟರ್ ಬುಕಿಂಗ್ ಅಪ್ಶನ್ ಅಧಿಕೃತವಾಗಿ ಪ್ರಾರಂಭವಾಗಿದ್ದು, ಆಸಕ್ತಿ ಇರುವ ಗ್ರಾಹಕರು 499ರೂ ಕೊಟ್ಟು ಬುಕ್ಕಿಂಗ್ ಮುಂಗಡ ಪಾವತಿ ಮಾಡಿದ್ದಾರೆ.

ಜೊತೆಗೆ ಈ ಸ್ಕೂಟರಿನ ಬೆಲೆ ragged G1 ಮಾದರಿಯ ಬೆಲೆ 79, 999 ಹಾಗೆ G1+ 89,999 ರೂಪಾಯಿಗೆ ಸ್ಕೂಟರ್ ದೊರಕಲಿದೆ. ಈ ಬೆಲೆಗಳು FAMEII ಸಬ್ಸಿಡಿಯನ್ನು ಒಳಗೊಂಡಿವೆ. ಹೌದು ಕಂಪನಿ 2Kwh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದ್ದು, ಇದನ್ನು ಸಹ ಬದಲಾವಣೆ ಮಾಡುವ ಆಪ್ಷನ್ ಕೊಟ್ಟಿದ್ದಾರೆ. ಕೇವಲ ನಾಲ್ಕು ಗಂಟೆಯಲ್ಲಿ ಬ್ಯಾಟರಿ ರಿಚಾರ್ಜ್ ಮಾಡಬಹುದು. ಹಾಗೆ ಸುಮಾರು 160 ಕಿಲೋಮೀಟರ್ ವ್ಯಾಪ್ತಿಯನ್ನು ಇದು ಹೊಂದಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಬೈಕ್ ಅನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಲಾಕ್ ಹಾಗೂ ಅನ್ಲಾಕ್ ಮಾಡುವ ಆಪ್ಶನ್ ಕೊಟ್ಟಿದ್ದು, ಕಂಪನಿ ಇದಕ್ಕಾಗಿಯೇ ಒಂದು ಹೊಸ ಅಪ್ಲಿಕೇಶನ್ ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸ್ಕೂಟರಿನ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..