ಅದ್ದೂರಿಯಾಗಿ ನೆರವೇರಿತು S ನಾರಾಯಣ್ ಮಗನ ಮದುವೆ.!ಹುಡುಗಿ ಯಾರು?ಯಾರೆಲ್ಲಾ ಬಂದಿದ್ರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ರಂಗ ಸೇರಿದಂತೆ ಕನ್ನಡ ಕಿರುತೆರೆಯಲ್ಲೂ ಕೂಡ ನಟ ನಟಿಯರ ಮದುವೆಗಳು ಒಬ್ಬರಾದದ ಮೇಲೆ ಒಬ್ಬರದ್ದು ನಡಿಯುತ್ತಿದೆ. ಈಗ ಸ್ಯಾಂಡಲ್ವುಡ್ ನ ಕಲಾಸಾಮ್ರಾಟ್ ಎನಿಸಿಕೊಂಡಿರುವ ಖ್ಯಾತ ನಟ ನಿರ್ದೇಶಕರೂ ಆಗಿರುವ ಎಸ್. ನಾರಾಯಣ ಅವರ ಮಗನ ಮದುವೆ ಅದ್ದೂರಿಯಾಗಿ ನಡೆದಿದೆ. ನಮಗೆಲ್ಲಾ ಗೊತ್ತಿರುವ ಹಾಗೆ ನಾಯಕ ನಟ ಸೇರಿದಂತೆ, ಹಾಸ್ಯ ನಟ, ಪೋಷಕ ನಟ ಹಾಗೂ ನಿರ್ದೇಶನದಲ್ಲಿಯೂ ಮಿಂಚಿದವರು. ಕನ್ನಡದ ಮೇರು ನಟರ ಸಿನಿಮಾಗಳಿಗೆ ನಿರ್ದೇಶನ ಮಾಡಿದವರು. ಈಗ ಕನ್ನಡ ಕಿರುತೆರೆಯಲ್ಲೂ ಕೂಡ ಅಭಿನಯ ಮಾಡುತ್ತಿದ್ದಾರೆ. ಇನ್ನು ಎಸ್.ನಾರಾಯಣ್ ಅವರಿಗೆ ಪಂಕಜ್, ಪವನ್ ಹಾಗೂ ವಿದ್ಯಾ ಸೇರಿದಂತೆ ಮೂರು ಜನ ಮಕ್ಕಳಿದ್ದಾರೆ.

ಇನ್ನು ಪಂಕಜ್ ಕೂಡ ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಆದರೆ ಅದ್ಯಾಕೋ ಅವರ ಯಾವ ಸಿನಿಮಾಗಳು ಕೂಡ ಅಂತಹ ಯಶಸ್ಸು ಕಾಣಲಿಲ್ಲ. ಇನ್ನು ಇತ್ತೀಚಿಗೆ ಪಂಕಜ್ ಯಾವುದೇ ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಈಗ ಎಸ್.ನಾರಾಯಣ್ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, ದೊಡ್ಡ ಮಗ ಪಂಕಜ್ ಅವರ ಮದುವೆಯನ್ನ ಅದ್ದೂರಿಯಾಗಿ ನೆರವೇರಿಸಿದ್ದು, ಸಿನಿಮಾ ರಂಗದ ಗಣ್ಯರು ಸೇರಿದಂತೆ ಆಪ್ತರು ಬಂದು ನವ ವಧುವರರಿಗೆ ಶುಭ ಕೋರಿದ್ದಾರೆ. ಇನ್ನು ಪಂಕಜ್ ಅವರ ಜೀವನ ಸಂಗಾತಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ರಕ್ಷಿತಾ ಸುರೇಂದ್ರ ಎಂದು.

ಇನ್ನು ಇವರ ಮದುವೆ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದಿದ್ದು, ನೆನ್ನೆ ಭಾನುವಾರ ಬೆಳಿಗ್ಗೆ ಎಂಟು ಗಂಟೆಯಿಂದ ಹತ್ತು ಗಂಟೆಯವರೆಗಿನ ಶುಭ ಮಹೂರ್ತದಲ್ಲಿ ಪಂಕಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಪಂಕಜ್ ರಕ್ಷಿತಾ ಸುರೇಂದ್ರ ಅವರ ಮದುವೆಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಕಿರುತೆರೆಯ ಶ್ವೇತಾ ಚಂಗಪ್ಪ ಸೇರಿದಂತೆ ಸಿನಿಮಾ ರಂಗದ ಆಪ್ತರು ಬಂದು ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ

. ಒಟ್ಟಿನಲ್ಲಿ ತಮ್ಮ ಎರಡನೆಯ ಮಗ ಪವನ್ ನಾರಾಯಣ್ ಅವರ ಮದುವೆಯನ್ನ ಮೊದಲೇ ಮಾಡಿ ಮುಗಿಸಿದ್ದ ನಟ ಎಸ್. ನಾರಾಯಣ್ ಅವರು ಈಗ ತಮ್ಮ ಮೊದಲನೇ ಮಗ ನಟ ಪಂಕಜ್ ಅವರ ಮದುವೆಯನ್ನ ನೆರವೇರಿಸಿದ್ದು, ಮದುವೆಯ ಫೋಟೋಗಳು ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನೂತನ ದಂಪತಿಗೆ ಶುಭ ಕೋರಿದ್ದಾರೆ. ನೀವು ಕೂಡ ಕಾಮೆಂಟ್ ಮೂಲಕ ನೂತನ ವಧು ವರರಿಗೆ ಶುಭ ಹಾರೈಸಿ..