ಮದ್ವೆ ಬಗ್ಗೆ ಯಾರೂ ಊಹಿಸದಂತ ಶಾಕಿಂಗ್ ಸುದ್ದಿ ಕೊಟ್ಟ ಸೌತ್ ಬ್ಯೂಟಿ..

Cinema

ತಮ್ಮ ನೈಜ ಸೌಂದರ್ಯ, ನಟನೆ ಡ್ಯಾನ್ಸ್ ನಿಂದ್ಲೇ ಫೇಮಸ್ ಆದವರು ದಕ್ಷಿಣ ಭಾರತದ ನಟಿ ಸಾಯಿಪಲ್ಲವಿ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಖತ್ ಫೇಮಸ್. ಇನ್ನು ತಮ್ಮ ಮದುವೆ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ನಟಿ ಸಾಯಿ ಪಲ್ಲವಿ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇನ್ನು ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ನಟ, ನಟಿಯರು ಯಾರನ್ನ, ಯಾವಾಗ ಮದುವೆಯಾಗುತ್ತಾರೆ ಎಂಬ ಕುತೂಹಲ ಹೆಚ್ಚಿರುತ್ತದೆ. ತೆಲುಗಿನ ಪ್ರೇಮಂ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ ಛಾಪು ಮೂಡಿಸಿದ ನಟಿ ತಮ್ಮ ಮದುವೆ ಬಗೆ ಕೆಲವೊಂದು ಸಂಗತಿಗಳನ್ನ ಅಭಿಮಾನಿಗಳೊಂದಿಗೆ ಟ್ವಿಟ್ಟರ್ ಖಾತೆಯಲ್ಲಿ ಚಾಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ತಂದೆ ತಾಯಿಗಳ ಜೊತೆ ಇರಲು, ಅವರನ್ನ ನೋಡಿಕೊಳ್ಳಲು ಮದುವೆ ಅಡಚಣೆಯಾಗುತ್ತದೆ ಎಂದು ದಕ್ಷಿಣ ಭಾರತದ ಈ ಚೆಲುವೆಯ ಭಾವಿಸಿದ್ದಾರಂತೆ. ಹಾಗಾಗಿ ನಾನು ಎಂದಿಗೂ ಮದ್ವೆ ಆಗುವುದಿಲ್ಲ ಎಂದು ಹೇಳಿದ್ದರಂತೆ.ಅಭಿಮಾನಿಯೊಬ್ಬ ಅರೇಂಜ್ಡ್ ಮ್ಯಾರೇಜ್ ಹಾಗೂ ಲವ್ ಮ್ಯಾರೇಜ್ ಜೊತೆಗೆ ಮದುವೆಯ ಪ್ಲಾನ್ ಗಳ ನಟಿಯ ಅಭಿಪ್ರಾಯ ಕೇಳಿದಾಗ ಸಾಯಿ ಪಲ್ಲವಿ ಈ ರೀತಿಯಾಗಿ ಉತ್ತರ ನೀಡಿದ್ದಾರೆ.

ದಕ್ಷಿಣ ಭಾರತದ ಮಾಧುರಿ ಧೀಕ್ಷಿತ್ ಎಂದೇ ಫೇಮಸ್ ಆಗಿರುವ ಈ ನಟಿ ಎರಡು ಫಿಲಂ ಫೇರ್ ಅವಾರ್ಡ್ ಗಳನ್ನ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಮೇಕಪ್ ಇಲ್ಲದೆ ನಟಿಸುವ ನಟಿ ಸಾಯಿ ಪಲ್ಲವಿ. ಸಿನಿಮಾ, ಡಾಕ್ಟರ್ ನಡುವೆ ಆಪ್ಷನ್ ಬಂದಾಗ ವೈದ್ಯಯಾಗಿ ಕೆಲಸ ಮಾಡುವುದು ತೃಪ್ತಿ ನೀಡುತ್ತದೆ ಎಂದು ಹೇಳಿದ್ದಾರೆ.