ಅತೀ ಶೀಘ್ರದಲ್ಲೇ ಕಡಿಮೆ ಬೆಲೆಯಲ್ಲಿ ಸಿಗಲಿದೆ Samsung Galaxy Fold ಫೋನ್ – ಬೆಲೆ ಎಷ್ಟು?ಏನೆಲ್ಲಾ ಫಿಚರ್ಸ್ ಇರಲಿದೆ ಗೊತ್ತಾ?

Kannada News
Advertisements

ಕೊರಿಯಾ ಮೂಲದ ಸ್ಮಾರ್ಟ್ ಫೋನ್ ಕಂಪನಿ ಸ್ಯಾಮ್‌ಸಂಗ್ ಕಡಿಮೆ ಬೆಲೆಯಲ್ಲಿ ಗ್ಯಾಲಕ್ಸಿ ಫೋಲ್ಡ್‌ನ ವೆರೈಟಿಸ್ ಮೊಬೈಲ್ ಗಳನ್ನ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಇನ್ನು ವರದಿಯೊಂದರ ಪ್ರಕಾರ ಕಂಪನಿಯು ಅಗ್ಗದ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ ವೆರೈಟಿಗಳನ್ನ ಗ್ಯಾಲಕ್ಸಿ ಫೋಲ್ಡ್ ಲೈಟ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಕಂಪನಿಯು ಇನ್ನು ಯಾವುದೇ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಇನ್ನು ಕಳೆದ ವರ್ಷವೇ Samsung Galaxy Fold smartphone ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತ್ತು.

Advertisements

ಇನ್ನು XDA Developers ಅವರ ಮಾಹಿತಿಯ ಪ್ರಕಾರ ಅಗ್ಗದ ಬೆಲೆಯಲ್ಲಿ ಸಿಗಲಿರುವ ಗ್ಯಾಲಕ್ಸಿ ಫೋಲ್ಡ್ ವೆರೈಟಿಸ್ ನ ಕೋಡ್ ನೇಮ್ ವಿನ್ನರ್ 2 ಎಂದು ಹೇಳಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ 256gb ಸ್ಟೋರೇಜ್ ಹೊಂದಿದ್ದು, ಸ್ನ್ಯಾಪ್ ಡ್ರಾಗನ್ 865 ಪ್ರೊಸೆಸರ್ ನ ಸಪೋರ್ಟ್ ಇದೆ. ಇನ್ನು ಇದರ ಜೊತೆಗೆ 8gb RAM ಮತ್ತು 12B ರ್ಯಾಮ್ ಈ ಸ್ಮಾರ್ಟ್ ಫೋನ್ ನಲ್ಲಿ ಇರಲಿದೆ ಎಂದು ಹೇಳಲಾಗಿದೆ.

ಸಿಗಲಿದೆ ಪ್ಲಾಸ್ಟಿಕ್ ಕವರ್ಡ್ ಸ್ಕ್ರೀನ್ : ಇನ್ನು ಮಾಹಿತಿಗಳ ಪ್ರಕಾರ ಅಲ್ಟ್ರಾ ಥಿನ್ ಗ್ಲಾಸ್ ಫ್ಲೆಕ್ಸಿಬಲ್ ಸ್ಕ್ರೀನ್ ಈ ಸ್ಮಾರ್ಟ್ ಫೋನ್ ನಲ್ಲಿ ಇರುವುದಿಲ್ಲ. ಆದರೆ ಪ್ಲಾಸ್ಟಿಕ್ ಕವರ್ಡ್ ಸ್ಕ್ರೀನ್ ಈ ಫೋನ್ ನಲ್ಲಿ ಇರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಫೋನ್ ಔಟರ್ ಭಾಗದಲ್ಲಿ ಚಿಕ್ಕದಾದ ಸ್ಕ್ರೀನ್ ಇರಲಿದೆ ಎನ್ನಲಾಗಿದೆ.

ಗ್ಯಾಲಕ್ಸಿ ಫೋಲ್ಡ್ ಸ್ಮಾರ್ಟ್‌ಫೋನ್ ಬೆಲೆ : ಇನ್ನು ಮಾಹಿತಿಗಳ ಪ್ರಕಾರ ಗ್ಯಾಲಕ್ಸಿ ಫೋಲ್ಡ್ ಲೈಟ್ ಸ್ಮಾರ್ಟ್‌ಫೋನ್‌ನ ಬೆಲೆ ಸುಮಾರು 82,500 ರೂಇರಲಿದೆ. ಇನ್ನು ಇದಕ್ಕೂ ಮೊದಲು ಭಾರತದಲ್ಲಿ ಬಿಡುಗಡೆಯಾದ ಗ್ಯಾಲಕ್ಸಿ ಫೋಲ್ಡ್ ಸ್ಮಾರ್ಟ್ ಫೋನ್ ಬೆಲೆ 173999 ರೂಗಳಾಗಿತ್ತು.

ಗ್ಯಾಲಕ್ಸಿ ಫೋಲ್ಡ್ ಸ್ಮಾರ್ಟ್‌ಫೋನ್ ಸ್ಪೆಸಿಫಿಕೇಷನ್ಸ್ : 7.3ಇಂಚ್ ಅಮೋಲೆಡ್ (amoled) ಡಿಸ್ಪ್ಲೇ ಹೊಂದಿದ್ದು, 1536×2152 ಫಿಕ್ಸಲ್ ರೆಸುಲ್ಯೂಷನ್ ಈ ಫೋನ್ ನಲ್ಲಿದೆ. ಇನ್ನು ಫೋಲ್ಡ್ ಮಾಡಿದಾಗ ಇದರ ಸ್ಕ್ರೀನ್ ಸೈಜ್ 4.6 ಇಂಚ್ ಇರುತ್ತದೆ.ಇನ್ನು ಇದರ ರೆಸುಲ್ಯೂಷನ್ 840×1960 ಫಿಕ್ಸಲ್ ಇರಲಿದೆ. ಇನ್ನು 12gb ರ್ಯಾಮ್ ಜೊತೆಗೆ 512gb ಇಂಟರ್ನಲ್ ಸ್ಟೋರೇಜ್ ಇದರಲ್ಲಿದೆ. ಇನ್ನು ಈ ಫೋನ್ ನಲ್ಲಿ Android 9 Pie ಆಪರೇಟಿಂಗ್ ಸಿಸ್ಟಮ್ ಮತ್ತು Octacore SoC ತಂತ್ರಜ್ನ್ಯಾನ ಹೊಂದಿದೆ.