ಸಂಚಾರಿ ವಿಜಯ್ ಅವರು ಸಾ’ವನ್ನಪ್ಪಿದ ಬಳಿಕ ಮಂಗಳ ಮುಖಿಯರು ಮಾಡಿದ ಕೆಲಸ ಏನ್ ಗೊತ್ತಾ ?

Cinema
Advertisements

ಸ್ನೇಹಿತರೇ, ತನ್ನ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನ ಕಳೆದುಕೊಂಡು ತುಂಬಾ ಕಷ್ಟಪಟ್ಟು ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲಾಗಿ ಮೇಲೆ ಬಂದ ನಟ ಸಂಚಾರಿ ವಿಜಯ್ ಅವರಂತಹ ಪತಿಭಾನ್ವಿತ ನಟನನ್ನ ಸ್ಯಾಂಡಲ್ವುಡ್ ಕಳೆದುಕೊಂಡಿದೆ. ಸಂಚಾರಿ ವಿಜಯ್ ಅವರು ಅಭಿನಯಿಸಿದ್ದ ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಖ್ಯಾತಿ ತಂದುಕೊಟ್ಟ ನಟ. ನಮಗೆಲ್ಲಾ ಗೊತ್ತಿರುವಂತೆ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಶಿವೈಕ್ಯರಾಗಿದ್ದು, ಅವರ ಹುಟ್ಟೂರಿನಲ್ಲೇ ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನ ನೆರವೇರಿಸಲಾಯಿತು. ನಾನು ಅವನಲ್ಲ ಅವಳು ಚಿತ್ರದಲ್ಲಿ ಮಂಗಳಮುಖಿ ಪಾತ್ರ ಮಾಡುವ ಮೂಲಕ ಮಂಗಳ ಮುಖಿಯರ ಸಮಾಜದಲ್ಲಿ ಏನೆಲ್ಲಾ ನಡೆಯುತ್ತದೆ, ಏನೆಲ್ಲಾ ಕಷ್ಟ, ನೋವು, ಅವಮಾನಗಳನ್ನ ಅನುಭವಿಸುತ್ತಾರೆ ಎಂಬೆಲ್ಲಾ ಮಾಹಿತಿಯನ್ನ ಚಿತ್ರದ ಮೂಲಕ ಜನರಿಗೆ ತೋರಿಸಿಕೊಟ್ಟಿದ್ದರು.

[widget id=”custom_html-4″]

Advertisements

ಮಂಗಳಮುಖಿಯರು ಕೂಡ ಮನುಷ್ಯರೇ ಅವರಿಗೂ ಕೂಡ ಇತರರಂತೆ ಸಮಾಜದಲ್ಲಿ ಬದುಕುವ ಹಕ್ಕಿದೆ ಎಂಬುದು ಚಿತ್ರದ ಮೂಲಕತೆಯಾಗಿತ್ತು. ಇನ್ನು ನಟ ಸಂಚಾರಿ ವಿಜಯ್ ಅವರು ಮಂಗಳ ಮುಖಿ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದು, ಮಂಗಳಮುಖಿಯರ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದರು. ಇನ್ನು ಈ ಸಿನಿಮಾದ ಯಶಸ್ವಿ ಗೆಲುವಿನ ಬಳಿಕ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಾಸಮಾಡುತ್ತಿದ್ದ ಮಂಗಳಮುಖಿಯರಿಗೆ ಸಹಾಯ ಮಾಡಿದ್ದರು. ಅಷ್ಟೇ ಅಲ್ಲದೆ ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಸಂಕಷ್ಟ ಪರಿಸ್ಥಿತಿಯಲ್ಲಿದ್ದ ಮಂಗಳ ಮುಖಿಯರಿಗೆ ಫುಡ್ ಕಿಟ್ ಗಳನ್ನ ನೀಡುವ ಮೂಲಕ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು ನಟ ಸಂಚಾರಿ ವಿಜಯ್.

[widget id=”custom_html-4″]

ಇನ್ನು ಸಂಚಾರಿ ವಿಜಯ್ ಅವರ ಗಳಿಕೆಗೆ ಮಂಗಳ ಮುಖಿಯರು ಕೂಡ ಕಣ್ಣೀರಿಟ್ಟಿದ್ದು, ಅವರ ನೆನಪಿನಲ್ಲಿ ಮಾನವೀಯತೆಯ ಕೆಲಸವೊಂದನ್ನ ಮಾಡಿದ್ದಾರೆ. ಹೌದು, ಸುಮಾರು ೫೦೦ಕ್ಕಿಂತ ಹೆಚ್ಚು ಮಂಗಳಮುಖಿಯರು ಬೆಂಗಳೂರಿನ ಸಾವಿರಕ್ಕಿಂತ ಹೆಚ್ಚು ಬಡಜನರಿಗೆ ಫುಡ್ ಕಿಟ್ ಗಳನ್ನ ನೀಡುವ ಮೂಲಕ ಸಂಚಾರಿ ವಿಜಯ್ ಅವರ ಹೆಸರು ಸದಾ ನೆನಪಿನಲ್ಲಿರುವಂತೆ ಮಾಡಿದ್ದಾರೆ. ೩೮ವರ್ಷದ ಸಂಚಾರಿ ವಿಜಯ್ ಅವರದ್ದು ಸದಾ ಏನಾದರು ಮಾಡಬೇಕು, ಸಾಮಾಜಿಕವಾಗಿ ಸಹಾಯ ಮಾಡಬೇಕು ಎಂದು ಸದಾ ಹಂಬಲಿಸುತ್ತಿದ್ದ ಮನಸ್ಸು. ಆದರೆ ಇಂತಹ ಒಳ್ಳೆ ಮನಸ್ಸು ಭೂಮಿಯ ಮೇಲೆ ಇನ್ನಷ್ಟು ವರ್ಷಗಳ ಕಾಲ ಜೀವಿಸುವುದು ಆ ದೇವರಿಗೆ ಇಷ್ಟವಿರಲಿಲ ಎನ್ನಿಸುತ್ತೆ..ಅದಕ್ಕೆ ಬೇಗ ಕರೆದುಕೊಂಡು ಬಿಟ್ಟ..