ಸೋಶಿಯಲ್ ಮಿಡಿಯಾದಲ್ಲಿ ಈ ನಟನೆ ನಂಬರ್ ಒನ್ ! ಯಾವ ಹೀರೋಗೆ ಎಷ್ಟು ಫ್ಯಾನ್ಸ್ ಫಾಲೋವಸ್೯ ಇದ್ದಾರೆ ಗೊತ್ತಾ?

Cinema

ಬಿಗ್ ಬಾಸ್ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಸ್ಟೈಲೀಶ್ ನಿಂದಲೇ ಹೆಚ್ಚು ಫ್ಯಾನ್ಸ್ ಗಳಿಸಿದವರು. ಟ್ವಿಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಮದಕರಿ ಕಿಚ್ಚ ಸುದೀಪ್. ಬರೋಬ್ಬರಿ 2.5 ಮಿಲಿಯನ್ ಫಾಲೋವಸ್೯ ಹೊಂದುವ ಮೂಲಕ ಟ್ವಿಟರ್ ನಲ್ಲಿ ಮೊದಲಿಗ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋನಿಂದಲೇ ಅತಿ ಹೆಚ್ಚು ಫ್ಯಾನ್ಸ್ ಫಾಲೋವಸ್೯ ಇದೆ ನಮ್ಮ ಕಿಚ್ಚ ಸುದೀಪ್ ಅವ್ರಿಗೆ. ಟ್ವಿಟರ್ ನಲ್ಲಿ ಎರಡನೇ ಸ್ಥಾನದಲ್ಲಿರೋದು ಅಂದ್ರೆ ಅದು ಡಿ ಬಾಸ್, ಸಾರಥಿ, ಚಾಲೆಂಜಿಂಗ್ ಸ್ಟಾರ್ ದರ್ಶನ್. ನಟ ದರ್ಶನ್ ಅವರು ಟ್ವಿಟರ್ ನಲ್ಲಿ 888k ಫಾಲೋವಸ್೯ ಹೊಂದಿರೋ ಖ್ಯಾತಿ ಇದೆ. ಆದ್ರೆ, ನಟ ದರ್ಶನ್ ಅವರು ಸೋಶಿಯಲ್ ಮಿಡಿಯಾಗಳಿಗಿಂತ ಹೆಚ್ಚು ಆಫ್ ಲೈನ್ ಗಳಲ್ಲೇ ಆ್ಯಕ್ಟಿವ್ ಇದ್ದಾರೆ. ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಖ್ಯಾತಿಯಾಗಿರುವ ನಟ ದರ್ಶನ್, ಸಮಾಜ ಸೇವೆಗಳಿಂದ ಪ್ರಸಿದ್ಧಿಯಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮೇರು ನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರನ್ನ ಬಿಟ್ರೆ, ಅತಿ ಹೆಚ್ಚು ಫ್ಯಾನ್ ಫಾಲೋವಸ್೯ ಹೊಂದಿರುವ ನಟ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ನಟ ದಚ್ಚು ಅವರ ಮಾನವೀಯ ಗುಣಗಳು ಅವರ ಅಭಿಮಾನಿಗಳಲ್ಲಿ ಇಷ್ಟವಾಗುತ್ತದೆ. ನಟ ದರ್ಶನ್ ಅವರದ್ದು ಎಷ್ಟು ಮಾತೃ ಹೃದಯವೋ ಅಷ್ಟೆ ಕೆಟ್ಟವರು ಅಂತ ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ದಚ್ಚು ಅವರು ಒಂಥರ ಕರ್ಣ ಇದ್ದ ಹಾಗೆ. ಕೊಡುಗೈ ದಾನಿ. ಅಭಿಮಾನಿಗಳೇ ದೇವರು ಅನ್ನೋ ಮೂಲಕ ಅವರ ಫ್ಯಾನ್ಸ್ ಗೆ ಮೊದಲ ಆದ್ಯತೆ ಕೊಟ್ಟಿದ್ದಾರೆ. ಪ್ರಾಣಿಪ್ರಿಯರು ಆಗಿರುವ ನಟ ದರ್ಶನ್, ಮೊನ್ನೆ ಮೊನ್ನೆಯಷ್ಟೆ ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳ ಸಂಕಷ್ಟಕ್ಕೆ ನೆರವಾಗಿ ಎಂದು ಕೇಳಿಕೊಂಡಿದ್ದರು. ಅವರು ಮನವಿ ಮಾಡಿದ ಕೆಲವ ಗಂಟೆಗಳಿಗೆ ಹಲವು ಜನರು ಪ್ರಾಣಿಗಳನ್ನ ದತ್ತು ಪಡೆದಿದ್ರು. ಅದಲ್ದೆ, ರಿಯಲ್ ಸ್ಟಾರ್ ಉಪೇಂದ್ರ ಸಹ, ಪ್ರಾಣಿಯನ್ನ ದತ್ತು ಪಡೆದು, ನಟ ದರ್ಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಇದೀಗ ಟ್ವಿಟರ್ ನಲ್ಲಿ ಮೂರನೇ ಸ್ಥಾನದಲ್ಲಿರೋರು ರಾಕಿಂಗ್ ಸ್ಟಾರ್ ಯಶ್. ಟ್ವಿಟರ್ ನಲ್ಲಿ 726k ಫ್ಯಾನ್ ಫಾಲೋವಸ್೯ ಹೊಂದಿರೋ ರಾಕಿಭಾಯ್, ಸಮಾಜ ಸೇವೆಯಲ್ಲೂ ಮುಂದಿದ್ದಾರೆ. ಕಳೆದ ವರ್ಷ ಯಶೋಮಾರ್ಗ ಎಂಬ ಯೋಜನೆಯಡಿ ಕೆರೆಗಳ ಹುಳು ಎತ್ತಿ ರೈತರ ಜಮೀನುಗಳಿಗೆ ನೀರು ಹಾಯ್ಸಿದ್ದಾರೆ. ಅದಲ್ದೇ, ಇತ್ತೀಚೆಗಷ್ಟೆ ರಿಲೀಸ್ ಆಗಿದ್ದ ಕೆಜಿಎಫ್ – 2 ಸಿನಿಮಾ ಟ್ರೇಲರ್ 1.8 ಕೋಟಿ ಜನರು ವೀಕ್ಷಿಸುವ ಮೂಲಕ ದಾಖಲೆ ಬರೆದಿತ್ತು. ಇನ್ನ ಯಶ್ ಅವರ ಮಗಳು ಐರಾಳಿಂದಲೂ ಸೋಶಿಯಲ್ ಮಿಡಿಯಾದಲ್ಲಿ ಫುಲ್ ಆ್ಯಕ್ಟಿವ್ ಇದಾರೆ. ಇನ್ನ ಟ್ವಿಟರ್ ನಲ್ಲಿ ನಾಲ್ಕನೇ ಸ್ಥಾನದಲ್ಲಿರೋದು ಅಂದ್ರೆ ಅದು ದೊಡ್ಮನೆ ಮಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಟ್ವಿಟರ್ ನಲ್ಲಿ 281k ಫಾಲೋವಸ್೯ ಹೊಂದುವ ಮೂಲಕ ಜನಮನ ಗಳಿಸಿದ್ದಾರೆ‌. ಕೊರೋನಾ ಒಂದು ಅಲೆಯ ಸಂದರ್ಭದಲ್ಲಿ ಸರ್ಕಾರಕ್ಕೆ ಲಕ್ಷ ಲಕ್ಷ ದೇಣಿಗೆ ನೀಡಿದ್ದಾರೆ. ಸದ್ದಿಲ್ಲದೇ ಸಾಮಾಜಿಕ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಲ್ಲಾ ವರ್ಗದ ಮೆಚ್ಚಿನ ನಟ ಪುನೀತ್. ಚಿಕ್ಕ ಚಿಕ್ಕ ಮಕ್ಕಳಿಗೆ ಅಪ್ಪು ಅಂದ್ರೆ ತುಂಬಾ ಇಷ್ಟವಾಗುತ್ತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನ ಕನ್ನಡದ ಮೈಕಲ್ ಜಾಕ್ಸನ್ ಅಂದ್ರೆ ತಪ್ಪಾಗಲಾರದು. ಸ್ನೇಹಿತರೇ, ನೆಚ್ಚಿನ ನಟ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ..