ಈಗ ಸ್ಟಾರ್ ಆಗಿರುವ ನಟರು ಮೊದಲು ನಟಿಸಿದ ಸಿನಿಮಾ, ಮಾಡಿದ ಚಿಕ್ಕ ಪಾತ್ರ ಯಾವುದು ಗೊತ್ತಾ.!?

Advertisements

ಸ್ನೇಹಿತರೇ, ಇಂದು ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿರುವವರು, ತಾವು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ವೇಳೆ ಚಿಕ್ಕ ಚಿಕ್ಕ ಪಾತ್ರಗಳನ್ನ ಮಾಡುವ ಮೂಲಕ ಇಂದು ಇಡೀ ಕನ್ನಡ ಸಿನಿಮಾರಂಗವನ್ನೇ ಆಳುವಷ್ಟರ ಮಟ್ಟಿಗೆ ನಾಯಕನಟರಾಗಿ ಬೆಳೆದಿದ್ದಾರೆ. ಹಾಗಾದ್ರೆ ಈ ನಟರು ಮೊದಲು ಅಭಿನಯಿಸಿದ ಸಿನಿಮಾ, ಹೀರೊ ಆಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಸಿನಿಮಾ ಯಾವುದೆಂದು ನೋಡೋಣ ಬನ್ನಿ..

[widget id=”custom_html-4″]

ದುನಿಯಾ ಸಿನಿಮಾ ಮೂಲಕ ಫೇಮಸ್ ಆದ ಲೂಸ್ ಮಾದ ಖ್ಯಾತಿಯ ಯೋಗಿ. ದುನಿಯಾ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಯೋಗಿ ಬಳಿಕ ನಂದ ನಂದಿತಾ ಸಿನಿಮಾ ಮೂಲಕ ಹೀರೊ ಆದರು. ಇನ್ನು ಕನ್ನಡ ಸಿನಿಮಾರಂಗದ ಕರಿ ಚಿರತೆ ಎಂದೇ ಹೆಸರು ಮಾಡಿರುವ ದುನಿಯಾ ವಿಜಯ್ ಅವರು ಸುದೀಪ್ ಅಭಿನಯದ ರಂಗ SSLC ಸಿನಿಮಾ ಮೂಲಕ ಸಣ್ಣ ವಿಲನ್ಚಂ ಪಾತ್ರದಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಾರೆ.

[widget id=”custom_html-4″]

ಬಳಿಕ ದುನಿಯಾ ವಿಜಯ್ ಸುಮಾರು ಹನ್ನೆರಡು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾರೆ. ಬಳಿಕ ದುನಿಯಾ ಸಿನಿಮಾ ಮೂಲಕ ನಾಯಕ ನಟನಾದ ದುನಿಯಾ ವಿಜಯ್ ತನ್ನ ಹೀರೊ ನಟಿಸಿದ ಮೊದಲ ಸಿನಿಮಾದಲ್ಲೇ ಸಖತ್ ಫೇಮಸ್ ಆಗುತ್ತಾರೆ. ಈಗ ಸ್ಯಾಂಡಲ್ವುಡ್ ನಲ್ಲಿ ದುನಿಯಾ ವಿಜಯ್ ನಿರ್ದೇಶಕ, ನಿರಪಕನಾಗಿಯೂ ಬೆಳೆದಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಸಿಕ್ಕ ಮತ್ತೊಬ್ಬ ಅದ್ಭುತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ಕಾಶಿನಾಥ್ ನಟಿಸಿ ನಿರ್ದೇಶನ ಮಾಡಿದ ಅನಂತನ ಅವಾಂತರ ಸಿನಿಮಾ ಮೂಲಕ ನಟ ಉಪ್ಪಿ ಸ್ಯಾಂಡಲ್ವುಡ್ ಎಂಟ್ರಿ ಕೊಡುತ್ತಾರೆ.

[widget id=”custom_html-4″]

ಈ ಸಿನಿಮಾ ಬಳಿಕ ಒಂದೆರಡು ಸಿನಿಮಾಗಳಲ್ಲಿ ಸಪೋರ್ಟಿನ್ಗ್ ರೋಲ್ ಗಳಲ್ಲಿ ನಟಿಸಿದ ಉಪೇಂದ್ರ ಅವರು ಕನ್ನಡ ಸಿನಿಮಾರಂಗ ಎಂದೆಂದಿಗೂ ಮರೆಯಲಾರದಂತಹ ಶಿವಣ್ಣ ನಟನೆಯ ಓಂ ಸಿನಿಮಾ ನಿರ್ದೇಶನ ಮಾಡಿ ಸೂಪರ್ ಡೈರೆಕ್ಟರ್ ಎನಿಸಿಕೊಂಡರು. ಬಳಿಕ A ಸಿನಿಮಾ ಮೂಲಕ ನಾಯಕ ನಟನಾಗಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಉಪ್ಪಿ, ಇಂದು ನಿರ್ದೇಶಕ, ನಟ ಹಾಗೂ ರಾಜಕಾರಣಿಯಾಗಿಯೂ ಬೆಳೆದಿದ್ದಾರೆ.

[widget id=”custom_html-4″]

[widget id=”custom_html-4″]

ಕನ್ನಡ ಸಿನಿಮಾರಂಗದ ಹಿರಿಯ ಖ್ಯಾತ ನಟ ತೂಗುದೀಪ್ ಶ್ರೀನಿವಾಸ್ ಅವರ ಮಗ ದರ್ಶನ್ ಅವರು ವಿನೋದ್ ರಾಜ್ ಅವರ ಅಭಿನಯದ ಮಹಾಭಾರತ ಸಿನಿಮಾ ಮೂಲಕ ಚಿಕ್ಕ ಪಾತ್ರವೊಂದರ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಬಳಿಕ ಐದಾರು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ ದರ್ಶನ್, ಮೆಜೆಸ್ಟಿಕ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ನಾಯಕ ನಟನಾಗಿ ಎಂಟ್ರಿ ಕೊಡುತ್ತಾರೆ. ಈಗ ಸ್ಯಾಂಡಲ್ವುಡ್ ನಲ್ಲಿ ಡಿಬಾಸ್, ಬಾಕ್ಸ್ ಆಫೀಸ್ ಸುಲ್ತಾನ್, ಎಂದೆಲ್ಲಾ ಖ್ಯಾತರಾಗಿರುವವರ ಜೊತೆಗೆ ಕನ್ನಡ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಎನಿಸಿಕೊಂಡಿದ್ದಾರೆ.

[widget id=”custom_html-4″]

ಸಿನಿಮಾ ಬ್ಯಾಕ್ಗ್ರೌಂಡ್ ಇಲ್ಲದೆ ಇಂದು ಸ್ಯಾಂಡಲ್ವುಡ್ ನಲ್ಲಿ ಗೋಲ್ಡನ್ ಸ್ಟಾರ್ ಎಂದೆನಿಸಿಕೊಂಡಿರುವ ನಟ ಗಣೇಶ್. ಇವರು ಮೊದಲ ಸಿನಿಮಾ ನಟ ನಾಗೇಂದ್ರ ಪ್ರಸಾದ್ ಹಾಗೂ ನಟಿ ರೇಖಾ ಅವರು ಅಭಿನಯಿಸಿದ ಸಿನಿಮಾ ‘ಚಿತ್ರ’. ಬಳಿಕ ಹತ್ತಕಿಂತ ಹೆಚ್ಚು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ಗಣೇಶ್ ಚೆಲ್ಲಾಟ ಸಿನಿಮಾ ಮೂಲಕ ನಾಯಕ ನಟನಾಗುತ್ತಾರೆ. ಮುಂಗಾರು ಮಳೆ ಸಿನಿಮಾ ಇವರ ಸಿನಿಮಾ ಜೀವನವನ್ನೇ ಬದಲಾಯಿಸಿ ಸ್ಟಾರ್ ಪಟ್ಟ ಕೊಟ್ಟ ಸಿನಿಮಾ..

[widget id=”custom_html-4″]

ಕನ್ನಡ ಸಿನಿಮಾ ರಂಗದ ಅಧ್ಯಕ್ಷ ಎಂದೆನಿಸಿಕೊಂಡಿರುವ ನಟ ಶರಣ್. ಪ್ರೇಮ ಪ್ರೇಮ ಪ್ರೇಮ ಎಂಬ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡುವ ಮೂಲಕ ಸ್ಯಾಂಡಲ್ವುಡ್ ಗೆ ಹಾಸ್ಯ ನಟನಾಗಿ ಎಂಟ್ರಿ ಕೊಡುತ್ತಾರೆ. ಬಳಿಕ ಹಾಸ್ಯ ನಟ ಪೋಷಕ ನಟ ಹೀಗೆ ವಿಭಿನ್ನ ಪಾತ್ರಗಳ ಮೂಲಕ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾರೆ. ಬಳಿಕ ರ್ಯಾಂಬೋ ಸಿನಿಮಾ ಮೂಲಕ ನಾಯಕ ನಟನಾಗಿ ಸಕ್ಸಸ್ ಆಗುತ್ತಾರೆ ನಟ ಶರಣ್. ಇನ್ನು ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಖದೀಮ ಕಳ್ಳರು ಎಂಬ ಸಿನಿಮಾದಲ್ಲಿ ಚಿಕ್ಕದಾದ ವಿಲನ್ ಪಾತ್ರ ಮಾಡುವ ಮೂಲಕ ಗಂಧದ ಗುಡಿಗೆ ಎಂಟ್ರಿ ಕೊಡುತ್ತಾರೆ. ಬಳಿಕ ನಟಿಸಿದ ಪ್ರೇಮ ಲೋಕ ದಲ್ಲಿ ಹೀರೊ ಆಗಿ, ಬಾರಿ ಸಕ್ಸಸ್ ಕಾಣುತ್ತಾರೆ.

[widget id=”custom_html-4″]

ಇನ್ನು ಸ್ಯಾಂಡಲ್ವುಡ್ ನ ಸಿಂಪಲ್ ಸ್ಟಾರ್ ಎಂದೇ ಹೆಸರು ಮಾಡಿರುವ ರಕ್ಷಿತ್ ಶೆಟ್ಟಿ ‘ನಮ್ ಏರಿಯಲ್ ಒಂದಿನಾ’ ಎಂಬ ಸಿನಿಮಾದಲ್ಲಿ ಪುಟ್ಟ ಸಹಾಯಕ ಪಾತ್ರ ಮಾಡುವ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಬಳಿಕ ಬಂದ ತುಘಲಕ್ ಸಿನಿಮಾದಲ್ಲಿಯೂ ಕೂಡ ಸಪೋರ್ಟಿನ್ಗ್ ಪಾತ್ರ ಮಾಡುತ್ತಾರೆ. ಬಳಿಕ ಬಂದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಹೀರೊ ಆಗಿ ಎಂಟ್ರಿ ಕೊಟ್ಟು ಇಂದು ಸ್ಟಾರ್ ನಟ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ ಶೆಟ್ರು. ಹೀಗೆ ಚಿಕ್ಕ ಪುಟ್ಟ ಪಾತ್ರಗಳಿಂದ ಇಂದು ಸ್ಟಾರ್ ನಟರಾಗಿರುವ ಹಲವಾರು ನಟರು ನಮ್ಮ ಸ್ಯಾಂಡಲ್ವುಡ್ ನಲ್ಲಿದ್ದಾರೆ. ಇವರಲ್ಲಿ ನಿಮ್ಮ ಮೆಚ್ಚಿನ ನಟ ಯಾರು ಮತ್ತೆ ಏಕೆ ಎಂದು ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-4″]