ನಮಸ್ತೆ ಸ್ನೇಹಿತರೆ, ಕೆಲದಿನಗಳ ಹಿಂದಷ್ಟೇ ಗಂಡ-ಹೆಂಡತಿ ಖ್ಯಾತಿಯ ನಟಿ ಸಂಜನಾ ಗರ್ಲಾನಿ ಹಿಂದೂ ಸಂಪ್ರದಾಯದ ಪ್ರಕಾರ ಶ್ರೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈಗ ಮತ್ತೊಮ್ಮೆ ಸಂಜನಾ ಗರ್ಲಾನಿ ಸೀಮಂತ ಮಾಡಿಕೊಂಡಿದ್ದಾರೆ.. ಎರಡು ಬಾರಿ ಸೀಮಂತ ಏಕೆ ಮಾಡಿಕೊಂಡಿದ್ದಾರೆ ಎಂಬು ನಿಮ್ಮ ಯೋಚನೆ ನಿಮ್ಮಲ್ಲಿ ಇದೆ ಅಲ್ಲವೇ.. ಹೌದು, ಸ್ನೇಹಿತರೆ ಸಂಜನಾ ಗರ್ಲಾನಿ ಮದುವೆಯಾಗಿ ಎಷ್ಟೋ ದಿನಗಳ ಬಳಿಕ ತಾವು ಮದುವೆ ಆಗಿರುವುದಾಗಿ ತಿಳಿಸಿದ್ದರು. ಅಲ್ಲಿಯವರೆಗೂ ಅವರು ಮದ್ವೆಯಾಗಿರುವುದೇ ಗೊತ್ತಿರಲಿಲ್ಲ. ಅಂದಹಾಗೆ ನಟಿ ಸಂಜನಾ ಅವರು ಮದುವೆಯಾಗಿರುವುದು ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಅಜೀಜ್ ಪಾಷಾ ಎಂಬವರನ್ನು. ಈಗ ನಟಿ ಸಂಜನಾ ಅವರು 9 ತಿಂಗಳ ತುಂಬು ಗರ್ಭಿಣಿಯಾಗಿದ್ದು ಮೊನ್ನೆಯಷ್ಟೇ ಬೇಬಿ ಬಂಪ್ ಫೋಟೋಸ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದರ ಬಳಿಕ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಅವರ ಕುಟುಂಬದ ಆತ್ಮೀಯರು ಮಾತ್ರ ಭಾಗವಹಿಸಿದ್ದರು. ಈಗ ಮತ್ತೆ ಎರಡನೇ ಬಾರಿಗೆ ಗಂಡನ ಮನೆಯವರ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಹೌದು, ಸಂಜನಾ ಅವರು ಮುಸ್ಲಿಂ ಧರ್ಮದ ಅಜೀಜ್ ಪಾಷಾ ಅವರನ್ನು ಮದುವೆಯಾಗಿರುವ ಕಾರಣ ಅವರ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಗೂ ವಿಡಿಯೊಗಳನ್ನ ಶೇರ್ ಮಾಡಿಕೊಂಡಿದ್ದು ವೈರಲ್ ಆಗಿವೆ. ಕೆಳಗೆ ಲಿಂಕ್ ಮಾಡಿರುವ ವಿಡಿಯೋ ನೋಡಿ..
ಇನ್ನು ಸಂಜನಾ ಗರ್ಲಾನಿ ಅವರು ತಮ್ಮ ಸೀಮಂತದ ಸಂಭ್ರಮದಲ್ಲಿ ವೈಟ್ ಡಿಸೈನರ್ ಸ್ಯಾರಿ ಹುಟ್ಟಿದ್ದು, ತಲೆ ಮೇಲೆ ಹೂಗಳಿಂದ ಅಲಂಕಾರ ಮಾಡಿಕೊಂಡಿದ್ದು ಪತಿ ಅಜೀಜ್ ಪಾಶ ಅವರ ಜೊತೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ಇದೇ ವೇಳೆ ಸ್ಯಾಂಡಲ್ವುಡ್ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕಾರುಣ್ಯರಾಮ್ ಅವರು ಕೂಡ ಸಂಜನಾ ಸೀಮಂತದ ಸಂಭ್ರಮದಲ್ಲಿ ಭಾಗವಹಿಸಿ ಶುಭಕೋರಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಂಜನಾ ಗರ್ಲಾನಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗುತ್ತಿದ್ದು ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವಿಷಯಗಳಿಂದ ಜೈ-ಲಿಗೆ ಹೋಗಿ ಬಂದಿದ್ದ ಸಂಜನಾ ಗರ್ಲಾನಿ ಅವರ ಜೀವನದಲ್ಲಿ ಮಗ ಇಲ್ಲವೇ ಮಗಳು ಮಗುವಾಗಿ ಹುಟ್ಟಿಬರಲಿದ್ದು ಆ ಸಂತಸದ ದಿನಗಳಿಗಾಗಿ ಕಾಯುತ್ತಿದ್ದೇನೆ ಎಂದು ಸಂಜನಾ ಅವರು ಹೇಳಿಕೊಂಡಿದ್ದಾರೆ. ತಾಯಿ ಮಗುವಿಗೆ ಶುಭವಾಗಲಿ ನೀವು ಆರೈಸಿ..