ಸಂಚಾರಿ ವಿಜಯ್ ಗೆ ಸಪ್ರೈಸ್ ಕೊಡೋಣ ಅಂತಿದ್ವಿ ಅವನೇ ನಮಗೆ ಸಪ್ರೈಸ್ ಕೊಟ್ ಬಿಟ್ಟ !ನೀನಾಸಂ ಸತೀಶ್ ಹೀಗಂದಿದ್ದೇಕೆ ಗೊತ್ತಾ ?

Advertisements

ನಟ ಸಂಚಾರಿ ವಿಜಯ್ ಅವರ ಕುರಿತಂತೆ ಅವರ ಸ್ನೇಹಿತ ಹಾಗೂ ನಟ ನೀನಾಸಂ ಸತೀಶ್ ಮಾಧ್ಯಮ ಒಂದಕ್ಕೆ ನೀಡಿರೋ ಸಂದರ್ಶನದಲ್ಲಿ ನೋವಿನ ಮಾತುಗಳನ್ನಾಡಿದ್ದಾರೆ. ದಿವಂಗತ ಸಂಚಾರಿ ವಿಜಯ್, ನಾನು ಆಪ್ತಮಿತ್ರರು. ಹಾಗೆ ಜ’ಗಳವಾಡ್ತಿದ್ದೆವು..ನೋವು-ನಲಿವಿನಲ್ಲೂ ಜೊತೆಯಾಗಿರುತ್ತಿದ್ದೇವು. ಅದಲ್ದೇ, ಸಂಚಾರಿ ವಿಜಯ್ ಗೋಸ್ಕರ ಮೈ ನೇಮ್ ಈಸ್ ಸಿದ್ದೇಗೌಡ ಎಂಬ ಸಿನಿಮಾದಲ್ಲಿ ಪಾತ್ರ ಕೂಡ ರೆಡಿ ಮಾಡಿದ್ದೇ ಅಂತ ನಟ ನೀನಾಸಂ ಸತೀಶ್ ಹೇಳಿದ್ದಾರೆ. ನಾನು ಬರೆದಿರೋ ಸ್ಕ್ರಿಪ್ಟ್ ತೋರಿಸಿ, ನಟ ಸಂಚಾರಿ ವಿಜಯ್ ಗೆ ಪಾತ್ರದ ಸೀನ್ ಗಳನ್ನ ಸಹ ತೋರಿಸಿದ್ದೆ. ಶರಣ್ ಉಲ್ಲಾರ್ ಎಂಬುವವರ ಮನೆಯಲ್ಲಿ ಸ್ಕ್ರಿಪ್ಟ್ ನೋಡಿದ ಸಂಚಾರಿ ವಿಜಯ್ ಗೆ ಅದು ತುಂಬಾ ಇಷ್ಟ ಆಗಿತ್ತು.

[widget id=”custom_html-4″]

Advertisements

ನಟ ಸಂಚಾರಿ ವಿಜಯ್ ಗೆ ನೀನಾಸಂ ಸತೀಶ್ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ಸಹ ಇತ್ತಂತೆ. ಮೈ ನೇಮ್ ಈಸ್ ಸಿದ್ದೇಗೌಡ ಸಿನಿಮಾ ನಿರ್ಮಾಣವೂ ಸಹ ರೆಡಿಯಾಗಿತ್ತು. ಆದ್ರೆ, ಈ ಟೈಮ್ ಗೆ ನನ್ನ ಗೆಳೆಯ ಸಂಚಾರಿ ವಿಜಯೇ ಇಲ್ಲ ಅಂತ ನಟ ನೀನಾಸಂ ಸತೀಶ್ ಭಾವುಕರಗಿ ಮಾತನಾಡಿದ್ದಾರೆ. ಅದಲ್ದೆ, ಜೂನ್ 20ರ ನಟ ನೀನಾಸಂ ಸತೀಶ್ ಅವರ ಹುಟ್ಟುಹಬ್ಬವನ್ನೂ ಗೆಳೆಯನ ಅಗಲಿಕೆಯ ನೋವಿನಿಂದ ಆಚರಿಸಿಕೊಂಡಿಲ್ಲ. ನಟ ಸಂಚಾರಿ ವಿಜಯ್ ಈಗ ಇದ್ದಿದ್ರೆ, ನನ್ನ ಹುಟ್ಟು ಹಬ್ಬದ ಹಿಂದಿನ ಇಡೀ ರಾತ್ರಿ ಜಾಗರಣೆ ಮಾಡ್ತಿದ್ವಿ. ಆದ್ರೆ, ಈಗ ಸಂಚಾರಿ ವಿಜಯ್ ಇಲ್ಲ. ಅವನಿಲ್ಲದ ಸಂದರ್ಭದಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಾ? ಸಂಚಾರಿ ವಿಜಯ್ ಇರದಿದ್ದಕ್ಕೆ ಈ ಬಾರಿ ಯಾವ ಕೇಕ್ ಸಹ ಕಟ್ ಮಾಡಿಲ್ಲ. ಯಾವ ಫ್ಯಾನ್ಸ್ ಕೂಡ ಮೀಟ್ ಮಾಡಿಲ್ಲ. ಎಲ್ಲಾ ನನ್ನ ಅಭಿಮಾನಿಗಳಿಗೂ ಸ್ವಾರಿ ಕೇಳ್ತೇನೆ ಅಂತ ನಟ ನೀನಾಸಂ ಸತೀಶ್ ಮನವಿ ಮಾಡಿಕೊಂಡಿದ್ದಾರೆ.

[widget id=”custom_html-4″]

ಇಂಥ ಹುಟ್ಟುಹಬ್ಬಗಳು ಪ್ರತಿ ಬಾರಿ ಬರ್ತವೆ. ಆದ್ರೆ, ಇಂಥ ಒಳ್ಳೆಯ ಗೆಳೆಯ ಸಿಗಲ್ಲ ಅಂತ ಸಂಚಾರಿ ವಿಜಯ್ ಗೆಳೆತನವನ್ನ ನಟ ನೀನಾಸಂ ವಿಜಯ್ ನೆನಪು ಮಾಡಿಕೊಂಡಿದ್ದಾರೆ. ಜುಲೈ 17ಕ್ಕೆ ನಟ ಸಂಚಾರಿ ವಿಜಯ್ ಹುಟ್ಟು ಹಬ್ಬವನ್ನೂ ಸಹ ಆಚರಿಸೋಣ ಅಂತ ಹೇಳಿದ್ದಾರೆ. ನನ್ನ ಗೆಳೆಯ ಸಂಚಾರಿ ವಿಜಯ್ ಬದುಕಿನಲ್ಲಿ ಬರೀ ದುಃಖ, ದುಮ್ಮಾನ, ಸವಾಲುಗಳೇ ಇದ್ದವು. ಅವನ ಲೈಫ್ ಒಂಥರ ಚಾಲೆಂಜಿಂಗ್ ಆಗಿತ್ತು. ಸಂಚಾರಿ ವಿಜಯ್ ಎಷ್ಟೋ ನೋವು, ಅವಮಾನಗಳನ್ನ ಎದುರಿಸಿದ್ದಾನೆ. ನಟ ಸಂಚಾರಿ ವಿಜಯ್ ಸಾ’ವಿಗೂ ಮುಂಚೆ ಆತನ ಮುಖದಲ್ಲಿ ಕಳೆ ಬಂದಿತ್ತು. ನಾನೇ ಹೇಳಿದ್ದೆ, ಮತ್ತೊಂದು ಸಿನಿಮಾ ಮಾಡು ಅಂತ. ಸಂಚಾರಿ ವಿಜಯ್ ಕೂದಲು ಸಹ ಸೊಂಪಾಗಿ ಬೆಳೆದಿದ್ದವು. ಒಳ್ಳೆ ಹೀರೋ ಥರ ಕಾಣ್ತಿದೀಯಾ ಅಂದಿದ್ದೆ ಅಂತ ನೀನಾಸಂ ಸತೀಶ್ ಹೇಳಿದ್ದಾರೆ. ನಟ ಸಂಚಾರಿ ವಿಜಯ್ ಮೆಂಟಲಿ, ಫಿಸಿಕಲಿ ಸ್ಟ್ರಾಂಗ್ ಇದ್ದ. ವಿಜಯ್ ನನ್ನ ಕುಟುಂಬದ ಒಬ್ಬ ಸದಸ್ಯನಂತಿದ್ದ ಅಂತ ನೀನಾಸಂ ಸತೀಶ್ ಹೇಳಿದ್ದು, ನನಗೆ ಸಂಚಾರಿ ವಿಜಯ್ ನೇ ಧೈರ್ಯ ತುಂಬ್ತಿದ್ದ ಅಂದಿದ್ದಾರೆ.

[widget id=”custom_html-4″]

ನಟ ಸಂಚಾರಿ ವಿಜಯ್ ಸಿನಿಮಾಗಳಲ್ಲಿ ನಟ ನೀನಾಸಂ ವಿಜಯ್ ಗೆ ಅತಿ ಹೆಚ್ಚು ಇಷ್ಟವಾದ ಫಿಲ್ಮ್ ನಾತಿಚರಾಮಿ. ಅವನ ಚಾಲೆಂಜಿಂಗ್ ಸಿನಿಮಾ ಅಂದ್ರೆ, ಅದು ನಾನವನಲ್ಲ ಅವಳು ಎಂಬ ಸಿನಿಮಾ ಅಂತೂ ನೀನಾಸಂ ಸತೀಶ್ ಹೇಳಿದ್ದಾರೆ. ಇತ್ತೀಚೆಗೆ ನಟ ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ಟ್ರೇಲರ್ ಸಕತ್ ವೈರಲ್ ಆಗಿ ಹಿಟ್ ಆಗಿದ್ದು, ಜನರ ಮನಸು ಗೆದ್ದಿದೆ. ತಲೆದಂಡ ಸಿನಿಮಾ ನೋಡಿದಾಗಲಂತೂ ನಟ ಸಂಚಾರಿ ವಿಜಯ್ ಆ್ಯಕ್ಟಿಂಗ್ ನೋಡಿ ವಾವ್ ಅಂದಿದ್ದೆ ಅಂತ ನಟ ನೀನಾಸಂ ಸತೀಶ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನಾನು, ಸಂಚಾರಿ ವಿಜಯ್ ಸಾಕಷ್ಟು ಸಿನಿಮಾಗಳಲ್ಲಿ ಜೊತೆಗಿದ್ದೆವು, ಆದ್ರೆ ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡಲು ಆಗಲಿಲ್ಲ ಅನ್ನೋ ಕೊರಗಿದೆ ಅಂತ ನಟ ನೀನಾಸಂ ಸತೀಶ್ ದುಃಖದ ಮಾತುಗಳನ್ನಾಡಿದ್ದಾರೆ.