ಬರೋಬ್ಬರಿ 4ತಿಂಗಳು ಬಂದ್ ಆಗಲಿವೆ ಶಾಲೆಗಳು.?ಓಪನ್ ಆಗೋದು ಯಾವಾಗ?

News

ಲಾಕ್ ಡೌನ್ ಮಾಡಿದ್ದರೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣದಿಂದಲೇ ಲಾಕ್ ಡೌನ್ ನ್ನ ಇನ್ನು ಎರಡು ವಾರಗಳ ಕಾಲ ಮುಂದುವರಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಇನ್ನು ಇದರ ಪರಿಣಾಮ ಶಾಲೆಗಳ ಮೇಲೆ ನೇರ ಪರಿಣಾಮ ಬೀರಿದ್ದು ತಡವಾಗಿ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇನ್ನು ಮಾಹಿತಿಗಳ ಪ್ರಕಾರ ಶಾಲೆಗಳು ನಾಲ್ಕು ತಿಂಗಳು ಬಂದ್ ಆಗಲಿದ್ದು, ಜುಲೈ ಅಥ್ವಾ ಆಗಸ್ಟ್ ನಲ್ಲಿ ಶಾಲೆಗಳು ಪ್ರಾರಂಭ ಆಗಲಿದೆ ಎಂದು ಹೇಳಲಾಗಿದೆ. ಇನ್ನು ಈ ಕೊರೋನಾ ಸೋಂಕಿನಿಂದಾಗಿ ಹತ್ತನೇ ತರಗತಿ ಮತ್ತು ಸೆಕೆಂಡ್ ಪಿಯುಸಿ ಪರೀಕ್ಷೆಗಳುನಿಂತಿದ್ದು, ಪರೀಕ್ಷೆಗಳು ನಡೆಯಬೇಕಿದೆ. ಬಳಿಕ ಮೌಲ್ಯಮಾಪನ, ಫಲಿತಾಂಶ, ಸಮವಸ್ತ್ರ, ಪಠ್ಯಪುಸ್ತಕ ಎಲ್ಲವನ್ನು ರೆಡಿಮಾಡಿಕೊಳ್ಳಬೇಕು. ಇದಕ್ಕೆಲ್ಲಾ ಸಮಯ ಕೂಡ ಬೇಕು. ಈ ಎಲ್ಲಾ ಕಾರಣಗಳಿಂದ ಜೂನ್ ತಿಂಗಳಿನಲ್ಲಿ ಶಾಲೆಗಳು ಪ್ರಾರಂಭವಾಗುವುದು ಕಷ್ಟ ಸಾಧ್ಯತೆ ಎಂದು ಹೇಳಲಾಗಿದೆ.

ಇನ್ನು ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ತಜ್ನ್ಯರು ಆಗಸ್ಟ್ ತಿಂಗಳವರೆಗೆ ಶಾಲೆಗಳನ್ನ ತೆಗೆಯುವುದು ಬೇಡ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೊರೋನಾ ಪರಿಸ್ಥಿತಿಯನ್ನ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇನ್ನು ಏಪ್ರಿಲ್ ತಿಂಗಳಾಂತ್ಯಕ್ಕೆ ಕೊರೋನಾ ಸೋಂಕು ಕಡಿಮೆಯಾದರೂ, ತತ್ ಕ್ಷಣವೇ ಶಾಳೆಗಳನ್ನ ತೆಗೆಯಲು ಸಾಧ್ಯವಿಲ್ಲ. ಇನ್ನು ಇದನ್ನೆಲ್ಲಾ ನೋಡಿಕೊಂಡು ಜೂನ್ ತಿಂಗಳ ಅಂತ್ಯಕ್ಕೆ ಶಾಲೆಗಳನ್ನ ತೆರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.