ಮಿಥುನ ರಾಶಿ ಧಾರಾವಾಹಿ ನಟಿ ಕೋಳಿ ರಮ್ಯಾ ಅವರ ಗಂಡ ಯಾರು ಗೊತ್ತಾ? ಅವರು ಕೂಡ ಖ್ಯಾತ ನಟರಾಗಿದ್ದಾರೆ..

Cinema
Advertisements

ನಮಸ್ತೆ ಸ್ನೇಹಿತರೆ, ಕೋಳಿ ರಮ್ಯಾ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯಾರಾಗಿದ್ದಾರೆ ನಟಿ ರಮ್ಯಾ ಅವರು ರಿಯಾಲಿಟಿ ಶೋ ಮೂಲಕ ಕಿರುತೆರೆಯ ಲೋಕಕ್ಕೆ ಎಂಟ್ರಿ ಕೊಟ್ರು ಕಿರುತೆರೆಯಲ್ಲಿ ಕನ್ನಡ ಭಾಷೆ ಮಾತ್ರವಲ್ಲದೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಕೂಡ ರಮ್ಯಾ ಅವರು ನಟನೆಯ ಮಾಡಿದ್ದಾರೆ.. ಇನ್ನೂ ರಮ್ಯಾ ಅವರು ಕೋಳಿ ಹಿಡಿಯುವ ಪಂದ್ಯದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ನಾಟಿ ಕೋಳಿಗಳನ್ನ ಹಿಡಿದ ವಿನರ್ ಆದ ಕಾರಣಕ್ಕೆ ಇವರಿಗೆ ಕೋಳಿ ರಮ್ಯಾ ಎಂಬ ಬಿರುದು ಬಂತು. ತುಂಬಾನೇ ಜನರಿಗೆ ಕೋಳಿ ರಮ್ಯಾ ಅವರ ಪತಿಯ ಬಗ್ಗೆ ತಿಳಿದಿರಲಿಲ್ಲ, ಈ ಮಾಹಿತಿಯಲ್ಲಿ ಕೋಳಿ ರಮ್ಯಾ ಅವರ ಗಂಡ ಯಾರು ಎಂಬುದು ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಟ ರಮ್ಯ ತಮ್ಮ ಪತಿಯ ಜೊತೆ ಇಲ್ಲ ಇವರಿಬ್ಬರೂ ಕೂಡ ಬೇರ್ಪಟ್ಟಿದ್ದಾರೆ..

Advertisements

ಇವರ ದಾಂಪತ್ಯ ಜೀವನದಲ್ಲಿ ಇಬ್ಬರ ನಡುವೆ ಮನಸ್ತಾಪ ಬಂದ ಕಾರಣ ಇಬ್ಬರು ಒಟ್ಟಿಗೆ ಸಂಸಾರ ಮಾಡುತ್ತಿಲ್ಲ ಕೆಲವು ವರ್ಷಗಳ ಹಿಂದೆಯಷ್ಟೇ ಕೋಳಿ ರಮ್ಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇವರು ಮೂಲತಃ ಭದ್ರಾವತಿಯಾವರು ಭದ್ರಾವತಿಯಲ್ಲೇ ಇವರು ತಮ್ಮ ಪೂರ್ತಿಯಾಗಿ ವಿದ್ಯಾಭ್ಯಾಸವನ್ನ ಮುಗಿಸಿದರು.. ನಂತರ ಬೆಂಗಳೂರಿಗೆ ಬಂದ ಇವರು ಹಳ್ಳಿ ಹುಡುಗಿ ಪ್ಯಾಟೆಗೆ ಬಂದ ಎನ್ನುವ ರಿಯಾಲಿಟಿ ಶೋ ಮೂಲಕ ಎಲ್ಲರ ಮನೆಮಾತಾದರು. ಚಿಕ್ಕವಯಸ್ಸಿನಲ್ಲೇ ರಮ್ಯಾ ಅವರು ನೃತ್ಯ ಮಾಡುವುದರಲ್ಲಿ ಎತ್ತಿದ ಕೈ ಅಲ್ಲದೆ ಅದ್ಭುತವಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ.. ಸೊಸೆ ತಂದ ಸೌಭಾಗ್ಯ ಎಂಬ ಕಿರುತೆರೆ ಧಾರವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು ಇವರು ಪುಟ್ಟಗೌರಿ ಧಾರಾವಾಹಿಯಲ್ಲಿ ಕೂಡ ಅದ್ಭುತವಾಗಿ ನಟನೆ ಮಾಡಿದ್ದಾರೆ ಜೊತೆಗೆ ಮಿಥುನ ರಾಶಿ ಧಾರಾವಾಹಿಯಲ್ಲಿ ಕೂಡ ಕವಿತಾ ಪಾತ್ರದಲ್ಲಿ ನಟಿಸಿದ್ದಾರೆ..

ಕಿರುತೆರೆಯ ಧಾರವಾಹಿಗಳ ಮೂಲಕ ಕೋಳಿ ರಮ್ಯಾ ಅವರು ಬೇಡಿಕೆಯು ನಟಿಯಾಗಿ ಟ್ರೆಂಡಿಂಗ್ ನಲ್ಲಿ ಇದ್ದಾರೆ ಇನ್ನೂ ಕೋಳಿ ರಮ್ಯಾ ಇವರ ಗಂಡ ಬೇರೆ ಯಾರು ಅಲ್ಲ ಕುಲವಧು ಖ್ಯಾತಿಯ ಶಿಶಿರ್ ಶಾಸ್ತ್ರಿ ಅವರು.. ಇವರಿಬ್ಬರೂ ಪ್ರೀತಿ ಮಾಡಿ ಕುಟುಂಬದವರ ಒಪ್ಪಿಗೆಯನ್ನು ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಆದರೆ ಸಂಸಾರದಲ್ಲಿ ಕೆಲವೊಂದು ಬಿನ್ನಾಭಿಪ್ರಾಯ ಇದ್ದ ಕಾರಣದಿಂದಾಗಿ ಇವರಿಬ್ಬರು ಒಟ್ಟಿಗೆ ಜೀವನ ನಡೆಸುತ್ತಿಲ್ಲ ಸದ್ಯ ದಾಂಪತ್ಯ ಜೀವನದಿಂದ ಇಬ್ಬರು ಬೇರ್ಪಟ್ಟಿದ್ದಾರೆ ಮಿಥುನ ರಾಶಿ ಧಾರವಾಹಿ ನಟಿ ಕೋಳಿ ರಮ್ಯಾ ಅವರು ಬೋಲ್ಡ್ ಅಂಡ್ ಬ್ಯೂಟಿಫುಲ್ ಲೇಡಿ ಅಂತಾನೇ ಹೇಳಬಹುದು.. ದಾರವಾಹಿಯಲ್ಲಿ ಇವರು ಅದ್ಭುತವಾಗಿ ಉಡುಗೆಗಳನ್ನು ತೊಡುತ್ತಾರೆ ಅಭಿಮಾನಿಗಳು ಕೂಡ ಇವರ ಉಡುಗೆ ನೋಡಿ ಫಿದಾ ಆಗಿದ್ದಾರೆ.. ನಿಮಗೂ ಕೂಡ ಕೋಳಿ ರಮ್ಯಾ ಅಂದರೆ ಇಷ್ಟನಾ ಆಗಿದ್ರೆ ರಮ್ಯಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..