ಹಸಿದುಬರೋ ಭಕ್ತರಿಗೆ ಉಚಿತ ಊಟ ಕೊಡೊ 10 ದೇವಸ್ಥಾನಗಳು!ನೀವು ಹೆಚ್ಚು ಬಾರಿ ಪ್ರಸಾದ ತಿಂದ ದೇವಾಲಯ ಯಾವುದು?ದಿನಕ್ಕೆ ಎಷ್ಟೆಲ್ಲಾ ಖರ್ಚಾಗುತ್ತೆ ?

Adhyatma
Advertisements

ಸ್ನೇಹಿತರೇ, ‘ಅನ್ನಂ ಪರಬ್ರಹ್ಮ ಸ್ವರೂಪಮ್’ ಎಂದು ಹೇಳಲಾಗುತ್ತದೆ. ಇನ್ನು ನಮ್ಮ ಇಡೀ ದೇಶದಾದ್ಯಂತಾ ಹಸಿದ ಹೊಟ್ಟೆಗಳಿಗೆ ಅನ್ನ ತುಂಬಿಸುವ ದೇವಸ್ಥಾನಗಳು ಸಾಕಷ್ಟಿವೆ. ಆ ಪೈಕಿ ಕೆಲವು ದೇವಸ್ಥಾನಗಳ ಬಗ್ಗೆ ನಾವಿವತ್ತು ನಿಮಗೆ ಹೇಳ್ತೀವಿ. ಅಷ್ಟಕ್ಕೂ ಆ ದೇವಸ್ಥಾನಗಳು ಯಾವುದು ಗೊತ್ತಾ? ಹೇಳ್ತೀವಿ ಕೇಳಿ. ಅತೀ ದೊಡ್ಡ ಸೌರ ಅಡುಗೆ ಮನೆಗಳನ್ನು ಹೊಂದಿರುವ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಶಿರಡಿ ದೇವಸ್ಥಾನ ಮಹಾರಾಷ್ಟದಲ್ಲಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ನಿತ್ಯ 40ಸಾವಿರಕ್ಕೂ ಅಧಿಕ ಜನರಿಗೆ ಉಣಬಡಿಸ್ತಾರೆ. ಜೊತೆಗೆ ಬೆಳಗಿನ ಫಲಹಾರವನ್ನು ಸಹ ಪ್ಯಾಕೇಟ್ ರೂಪದಲ್ಲಿ ಕೊಡುತ್ತಾರೆ.

Advertisements

ಇನ್ನು ಪಂಜಾಬ್‌ನ ಅಮೃತಸರ ದೇವಸ್ಥಾನ ಸಹ ಅನ್ನದಾಸೋಹ ವಿಚಾರದಲ್ಲಿ ಸಖತ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ, ನಿತ್ಯ 2 ಲಕ್ಷಕ್ಕು ಅಧಿಕ ಜನರಿಗೆ ಈದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದೇವಸ್ಥಾನದ ಅಡುಗೆ ಮನೆಯಲ್ಲಿ 1000 ಎಲ್‌ಪಿಜಿ ಗ್ಯಾಸ್‌ಗಳನ್ನು ಬಳಸುತ್ತಿದ್ದು 5000ಕೆಜಿ ಸೌದೆ ಒಲೆಯನ್ನ ಬಳಸ್ತಾರೆ ಅಂದ್ರೆ ನೀವು ನಂಬಲೇಬೇಕು. ಇನ್ನು ಇಸ್ಕಾನ್ ಫೌಂಡೇಶ್‌ನ ಅಕ್ಷಯಪಾತ್ರ ಯೋಜನೆಯಡಿ ಹುಬ್ಬಳ್ಳಿಯ ಇಸ್ಕಾನ್ ದೇವಸ್ಥಾನದಲ್ಲಿ ಲಕ್ಷಾಂತರ ಜನರಿಗೆ ನಿತ್ಯವು ಊಟ ನೀಡ್ತಾರೆ. ಹಾಗೆಯೇ ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಆಗಮಿಸ್ತಾರೆ. ಈ ಹಿನ್ನಲೆ ದೇವಾಲಯದ ಅನ್ನಪೂರ್ಣ ಭೋಜನಾಲಯದಲ್ಲಿ ನಿತ್ಯ 70 ಕ್ವಿಂಟಾಲ್ ಅಕ್ಕಿಯಲ್ಲಿ ಅನ್ನ ಮಾಡುತ್ತಾರೆ. ಹಾಗೆಯೇ 15 ಕ್ವಿಂಟಾಲ್ ತರಕಾರಿ, 2ಸಾವಿರ ತೆಂಗಿನಕಾಯಿಯ ಬಳಕೆ ಮಾಡ್ತಾರೆ. ಒಮ್ಮೆಗೆ ಸಾವಿರದ ಐನೂರು ಜನಕ್ಕೆ ಊಟದ ವ್ಯವಸ್ಥೆ ಮಾಡ್ತಾರೆ.

ಇನ್ನು ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ನಿತ್ಯವೂ 25ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡ್ತಾರೆ. ಹಬ್ಬ ಹರಿದಿನಗಳಿದ್ರೆ ಒಂದು ಲಕ್ಷ ಜನರಿಗೆ ಊಟ ಹಂಚುತ್ತಾರೆ. ಇನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ನಿತ್ಯ 1 ಲಕ್ಷ ಜನರಿಗೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಐದರಿಂದ ಆರು ಸಾವಿರ ಜನರಿಗೆ, ಹಾಗೂ ಜಮ್ಮು ಕಾಶ್ಮೀರದ ಪ್ರಸಿದ್ಧ ವೈಷ್ಣೋದೇವಿ ದೇವಸ್ಥಾನದಲ್ಲಿ ಲಕಾಂತರ ಜನರಿಗೆ ಊಟದ ರೀತಿಯಲ್ಲಿ ದೇವರ ಪ್ರಸಾದ ನೀಡ್ತಾರೆ. ಹೀಗೆ ಅನೇಕ ದೇವಸ್ಥಾನದಲ್ಲಿ ದೇವಸ್ಥಾನಕ್ಕೆ ದಾನಿಗಳು ಕೊಟ್ಟ ನೆರವಿನಿಂದ ದೇವಸ್ಥಾನದಲ್ಲಿ ಭಕ್ತಾದಿಗಳು ಹಾಕುವ ಹರಕೆಯ ಕಾಣಿಕೆಯಿಂದ ಅನೇಕ ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡ್ತಾರೆ. ಹಸಿದ ಹೊಟ್ಟೆಗಳನ್ನು ತುಂಬಿಸುವ ಕೆಲಸ ಮಾಡ್ತಾಯಿರುವ ದೇವಸ್ಥಾನಗಳ ಬಗ್ಗೆ ನಿವೇನು ಹೇಳ್ತೀರಾ? ನೀವು ಅತೀ ಹೆಚ್ಚು ಬಾರೀ ಊಟ ಮಾಡಿರುವ ದೇವಸ್ಥಾನ ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ..