ಬಿಗ್ ಬಾಸ್ ಮನೆಯಿಂದ ಔಟ್ ಆದ ಶಂಕರ್ ಅಶ್ವಥ್ ಅವರಿಗೆ ಸಿಕ್ತು ಹಣದ ಜೊತೆಗೆ 1ವರ್ಷಕ್ಕಾಗೋಷ್ಟು ಉಡುಗೊರೆ ! ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ?

Kannada News - Entertainment

ನಮಸ್ತೇ ಸ್ನೇಹಿತರೇ, ಕನ್ನಡ ಬಿಗ್ ಬಾಸ್ ಸೀಸನ್ ಎಂಟರ ೫ನೇ ವಾರ ಮುಕ್ತಾಯವಾಗಿದ್ದು ಚಾಮಯ್ಯ ಮೇಷ್ಟ್ರು ಮಗ ಹಿರಿಯ ನಟ ಶಂಕರ್ ಅಶ್ವತ್ ಅವರು ಎಲಿಮನೇಟ್ ಆಗಿದ್ದು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಮಾನೆಯಲ್ಲಿದ್ದವರಿಗೆ ವಾರಕ್ಕೆ ಇಂತಿಷ್ಟು ಅಂತ ಸಂಭಾವನೆ ನೀಡಲಾಗುತ್ತದೆ. ಆದರೆ ಎಲ್ಲಾ ಸ್ಪರ್ಧಿಗಳಿಗೂ ಒಂದೇ ರೀತಿಯ ಫಿಕ್ಸ್ ಸಂಭಾವನೆ ಇರುವುದಿಲ್ಲ. ಹೊರಗಡೆ ಅವರು ಎಷ್ಟು ಖ್ಯಾತರು ಅನ್ನೋದ್ರ ಮೇಲೆ ಬಿಗ್ ಬಾಸ್ ಸಂಭಾವನೆಯನ್ನ ಫಿಕ್ಸ್ ಮಾಡಿರುತ್ತಾರೆ. ಇನ್ನು ಶಂಕರ್ ಅಶ್ವಥ್ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿದವರು. ಹಾಗಾಗಿ ಹಿರಿಯ ನಟನಿಗೆ ಸಿಕ್ಕ ಸಂಭಾವನೆ ಎಷ್ಟಂತ ನೋಡೋಣ ಬನ್ನಿ..

ಕನ್ನಡದ ಚಾಮಯ್ಯ ಮೇಷ್ಟ್ರು ನಟ ಅಶ್ವಥ್ ಅವರ ಮಗನಾಗಿರುವ ಶಂಕರ್ ಅಶ್ವಥ್ ಅವರು ಇತ್ತೀಚೆಗೆ ಜೀವನಕ್ಕಾಗಿ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದರು. ಜೊತೆ ಜೊತೆ ಕೆಲ ಸಿನಿಮಾಗಲ್ಲಾಯಿಯು ಕೂಡ ಪೋಷಕ ಪಾತ್ರಗಳನ್ನ ಮಾಡುತ್ತಾ ಬರುತ್ತಿದ್ದಾರೆ. ಇನ್ನು ಬಿಗ್ ಬಾಸ್ ಕೂಡ ಹಿರಿಯ ನಟನಿಗೆ ಉತ್ತಮ ಅವಕಾಶವನ್ನ ನೀಡಿತ್ತು. ಆದರೆ ಬಿಗ್ ಮನೆಯಲ್ಲೂ ಕೂಡ ಅದೃಷ್ಟ ಅವರ ಕೈ ಹಿಡಿಯಲಿಲ್ಲ. ಈಗ ಕೇವಲ ಐದನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರು ಶಂಕರ್ ಅಶ್ವಥ್ ಅವರ ಕಳಪೆ ಆಟ ಆಡಿದ್ದಾರೆ. ಅವರಿಂದ ನಿರಿಕ್ಷಿತ ಆಟ ಮೂಡಿಬಂದಿಲ್ಲ ಎಂದು ನಾಮಿನೇಟ್ ಮಾಡಿದ್ದರು.

ಇನ್ನು ಈಗ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದ ಎಲಿಮನೇಷನ್ ಪ್ರಕ್ರಿಯೆಯಲ್ಲಿ ಕಿಚ್ಚ ಸುದೀಪ್ ಅವರು ವೀಕ್ಷಕರು ಮಾಡಿರುವ ವೋಟ್ ಗಳ ಆಧಾರದ ಮೇಲೆ ಶಂಕರ್ ಅಶ್ವಥ್ ಅವರನ್ನ ಎಲಿಮನೇಟ್ ಮಾಡಿದ್ದಾರೆ. ಇನ್ನು ೫ ವಾರಗಳ ಕಾಲ ಬಿಗ್ ಮನೆಯಲ್ಲಿದ್ದ ಶಂಕರ್ ಅಶ್ವಥ್ ಅವರು ಒಟ್ಟು ಎರಡು ಲಕ್ಷ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ. ಅಂದರೆ ವಾರಕ್ಕೆ ೪೦ ಸಾವಿರದಂತೆ ಸಂಭಾವನೆ ಪಡೆದಿದ್ದಾರೆ. ಇನ್ನು ಇದರ ಜೊತೆಗೆ ಇಂಡಿಯಾ ಗೆಟ್ ಬಾಸುಮತಿ ರೈಸ್ ಅವರ ಕಡೆಯಿಂದ ೧೨ ತಿಂಗಳಿಗಾಗುವಷ್ಟು ಅಕ್ಕಿಯನ್ನ ಗಿಫ್ಟ್ ರೂಪದಲ್ಲಿ ಹಿರಿಯ ನಟ ಪಡೆದುಕೊಂಡಿದ್ದಾರೆ. ಸ್ನೇಹಿತರೇ, ನಿಮ್ಮ ಪ್ರಕಾರ ಶಂಕರ್ ಅಶ್ವಥ್ ಅವರು ಇನ್ನು ಎಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಬೇಕಿತ್ತು ಎಂಬುದನ್ನ ತಿಳಿಸಿ..