ಕನ್ನಡದ ಚಾಮಯ್ಯ ಮೇಷ್ಟ್ರು ಅಂದರೆ ಮೊದಲಿಗೆ ನೆನಪಿಗೆ ಬರೋದು ಕನ್ನಡ ಚಿತ್ರರಂಗ ಕಂಡ ಹಿರಿಯ ನಟ KS ಅಶ್ವಥ್ ಅವರು. ಅಣ್ಣಾವ್ರು ಸೇರಿದಂತೆ ಸ್ಯಾಂಡಲ್ವುಡ್ ನ ಆಗಿನ ಕಾಲದ ಬಹುತೇಕ ಸ್ಟಾರ್ ನಟರ ಜೊತೆ ಪೋಷಕ ಪಾತ್ರದಲ್ಲಿ ಮಿಂಚಿದ ಅದ್ಭುತ ನಟ. ಇಂದಿಗೂ ಅವರ ಒಂದೊಂದು ಪಾತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.

ಇನ್ನು ಅಶ್ವತ್ ಅವರ ಪುತ್ರ ಶಂಕರ್ ಅಶ್ವತ್ಥ್ ಅವರು ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ತನ್ನ ತಂದೆ ನಟಿಸಿದ್ದ ಕರ್ಣ ಚಿತ್ರವನ್ನ ನೋಡಿ ಅತ್ಯಂತ ಭಾವುಕರಾಗಿ ತಮ್ಮ ಜೀವನದ ಚಕ್ರದಲ್ಲಿ ಎದುರಾದ ಕಷ್ಟ ನೋವುಗಳ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಟ ಶಂಕರ್ ಅಶ್ವತ್ಥ್ ಅವರೇ ಬರೆದುಕೊಂಡಿರುವ ಹಾಗೆ ಟಿವಿಯಲ್ಲಿ ನನ್ನ ತಂದೆ ಹಾಗೂ ವಿಷ್ಣುವರ್ಧನ್ ಅಭಿನಯಿಸಿರುವ ಕರ್ಣ ಸಿನಿಮಾ ನೋಡಿದಾಗ ನನ್ನ ಜೀವನದ ಕೆಲವೊಂದು ಘಟನೆಗಳು ನೆನಪಿಗೆ ಬಂದಿದ್ದು ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಕೆಳಗಿರುವ ಫೇಸ್ಬುಕ್ ಲಿಂಕ್ ನ್ನ ಕ್ಲಿಕ್ ಮಾಡಿ..
ಈ ವಿಷಯ ನಾನು ತಿಳಿಸಲು ಕಾರಣ ಯಾರಿಂದಲೂ ಲೈಕ್ಸ್ ಗಿಟ್ಟಿಸಕ್ಕಾಗಲಿ ಪ್ರಚಾರಕ್ಕಾಗಲಿ ಅಲ್ಲ.ಮನುಷ್ಯನಲ್ಲಿ ಏನೇ ಯೋಗ್ಯತೆ ಇದ್ದರೂ ಅವನೆಷ್ಟೇ ಬುದ್ಧಿವಂತನಾದರೂ ವಿಧಿ ಲಿಖಿತ ಏನಾಗಿರುತ್ತೋ ಅದೇ ನಿಶ್ಚಿತ. ಇದನ್ನು ಕೆಲವರು ಒಪ್ಪದೇ ಅತೀ ಬುದ್ಧಿವಂತಿಕೆಯಿಂದ ಯಾವುದರಲ್ಲಿ ಬೇಕಾದರೂ ತಪ್ಪನ್ನು ಹುಡುಕುತ್ತಾರೆ.ಅದೇ ಬುದ್ದಿವಂತರನ್ನು ಇಂದು ಕೊರೊನಾ ಬಗ್ಗೆ ಪ್ರಶ್ನಿಸಿದರೆ? ನೇರವಾದ ಉತ್ತರ ಸಿಕ್ಕಲ್ಲ. ಎಲ್ಲಾ ಭಗವಂತನ ಇಚ್ಛೆ. ನಟ ಶಂಕರ್ ಅಶ್ವಥ್ ಅವರು ಅವರ ಜೀವನದಲ್ಲಿ ಎದುರಾದ ಕಷ್ಟ ನೋವುಗಳ ಬಗ್ಗೆ ಮೇಲೆ ಲಿಂಕ್ ಮಾಡಿರುವ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ನೋಡಿ..