ಕರಾಟೆ ಕಿಂಗ್ ಶಂಕರಣ್ಣನ ಮಗಳು ಈಗ ಎಲ್ಲಿದ್ದಾರೆ.? ಮಾಡ್ತಾ ಇರೋದಾದ್ರೂ ಏನು ಗೊತ್ತಾ ?

Advertisements

ಸ್ನೇಹಿತರೇ, ಶಂಕರ್ ನಾಗ್..ಈ ಹೆಸರನ್ನ ಕೇಳಿದ್ರೆ ಸಾಕು ಕನ್ನಡಿಗರಲ್ಲಿ ಮೈ ರೋಮಾಂಚನವಾಗುತ್ತೆ. ಹೌದು, ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ ನಿರ್ದೇಶಕ. ಪಾದರಸದಂತೆ ಕೆಲಸ ಮಾಡುತ್ತಿದ್ದ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಇದ್ದಿದ್ದ್ರೆ ಸ್ಯಾಂಡಲ್ವುಡ್ ಬೇರೊಂದು ಮಟ್ಟದಲ್ಲಿ ಇರುತಿತ್ತು. ಶಂಕರಣ್ಣ ನಮ್ಮನ್ನ ಅಗಲಿ ಹಲವಾರು ವರ್ಷಗಳೇ ಕಳೆದಿದ್ದರೂ ಈಗಲೂ ಸಹ ಅವರು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ರಾಜನಂತೆ ಮೆರೆಯುತ್ತಿದ್ದಾರೆ. ಇನ್ನು ಶಂಕರ್ ನಾಗ್ ಹಾಗೂ ಅರುಂಧತಿ ನಾಗ್ ದಂಪತಿಗೆ ಕಾವ್ಯ ನಾಗ್ ಎಂಬ ಮುದ್ದಾದ ಮಗಳಿದ್ದು ಅವರೀಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದನ್ನ ನೋಡೋಣ ಬನ್ನಿ..

[widget id=”custom_html-4″]

Advertisements

ಸೆಪ್ಟೆಂಬರ್ 30, 1990ರ ರಾತ್ರಿ ಕನ್ನಡ ಚಿತ್ರರಂಗಕ್ಕೆ ದುರ್ದೈವದ ದಿನ. ಹೌದು, ಶಂಕರ್ ನಾಗ್ ಹಾಗೂ ಅವರ ಪತ್ನಿ ಅರುಂಧತಿ ನಾಗ್ ಮತ್ತು ತಮ್ಮ ೫ ವರ್ಷದ ಮಗಳು ಕಾವ್ಯಾ ನಾಗ್ ಜೊತೆ ಸಿನಿಮಾವೊಂದರ ಚಿತ್ರೀಕರಣ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ಎದುರಿಗೆ ಬಂದ ಲಾರಿಯೊಂದು ಕನ್ನಡ ಚಿತ್ರರಂಗದ ಮೇರು ನಟನನ್ನ ಕನ್ನಡಿಗರು ಕಳೆದುಕೊಳ್ಳುವನಂತೆ ಮಾಡಿತು. ಇನ್ನು ಅದೇ ಕಾರಿನಲ್ಲಿದ್ದ ಅರುಂಧತಿ ನಾಗ್ ಅವರಿಗೆ ದೊಡ್ಡ ದೊಡ್ಡ ಗಾ’ಯಗಳಾದ್ರೆ, ಅದೃಷ್ಟವೆಂಬಂತೆ ಮಗಳು ಕಾವ್ಯಾ ಅವರಿಗೆ ಚಿಕ್ಕ ಪುಟ್ಟ ಗಾ’ಯಗಳಾದ್ವು. ಇನ್ನು ಈ ದು’ರಂತದಿಂದ ಅರುಂಧತಿ ನಾಗ್ ಅವರು ಬರೋಬ್ಬರಿ ಒಂದು ವರ್ಷಗಳ ಕಾಲ ವೀಲ್ ಚೇರ್ ನಲ್ಲಿಯೇ ಜೀವನ ಸಾಗಿಸಿದ್ರು.

[widget id=”custom_html-4″]

ಇನ್ನು ಅರುಂಧತಿ ನಾಗ್ ಅವರು ತಮ್ಮ ವೀಲ್ ಚೇರ್ ನಿಂದ ಎದ್ದು ನಡೆಯುವಷ್ಟರಲ್ಲಿಗೆ ಆರ್ಥಿಕವಾಗಿ ಕುಗ್ಗಿ ಹೋಗಿದ್ದರು. ಬಳಿಕ ರಂಗಭೂಮಿ ಪ್ರವೇಶ ಮಾಡಿದ ಅರುಂಧತಿ ನಾಗ್ ಅವರು ಎಲ್ಲಾ ಕಷ್ಟಗಳನ್ನ ಏಕಾಂಗಿಯಾಗಿ ಎದುರಿಸಿ ತಮ್ಮ ಮಗಳಿಗೆ ಉತ್ತಮ ವಿಧ್ಯಾಭ್ಯಾಸವನ್ನ ಕೊಟ್ಟು ಚೆನ್ನಾಗಿ ಬೆಳೆಸಿದ್ರು. ಇನ್ನು ವನ್ಯ ಜೀವಿ ವಿಭಾಗದಲ್ಲಿ MA ಪದವಿ ಮಾಡಿರುವ ಕಾವ್ಯ ನಾಗ್ ಅವರು ಮದುವೆಯಾದ ಬಳಿಕ ವಿಯೆಟ್ನಾಮ್ ನಲ್ಲಿದ್ದರು.

ಬಳಿಕ ಬೆಂಗಳೂರಿಗೆ ಬಂದು ನೆಲೆಸಿರುವ ಕಾವ್ಯಾ ನಾಗ್ ಅವರು ಕರ್ನಾಟಕದ ಗಡಿ ಭಾಗದಲ್ಲಿರುವ ಹೊಸೂರಿನಲ್ಲಿ ತಮ್ಮ ತಂದೆ ಹೊಂದಿದ್ದ ಜಮೀನಿನಲ್ಲಿ ಕಂಪೆನಿಯೊಂದನ್ನ ಸ್ಥಾಪನೆ ಮಾಡಿದ್ದಾರೆ. ಇನ್ನು ಈ ಕಂಪನಿಯಲ್ಲಿ ಕೆಮಿಕಲ್ ಇಲ್ಲದ ಸೋಪ್ ಮತ್ತು ಆಯಿಲ್ ತಯಾರಿಸುವ ಕೋಕಾನಿ ಸಿಂಬಾ ಎಂಬ ಸ್ವಂತ ಕಂಪನಿ ಸ್ಥಾಪನೆ ಮಾಡಿದ್ದಾರೆ. ತಮ್ಮ ತಂದೆಯಂತೆ ಬುದ್ದಿವಂತೆಯಾಗಿರುವ ಕಾವ್ಯಾ ಅವರು ನೊಂದ ಮಹಿಳೆಯರಿಗೆ ಕೆಲಸ ಕೂಡುವುದರ ಮುಖಾಂತರ ಸಾಮಾಜಿಕ ಕಾಳಜಿ ಕೂಡ ಹೊಂದಿದ್ದಾರೆ. ಸ್ನೇಹಿತರೇ, ಶಂಕರಣ್ಣನ ಅಭಿನಯದ ನಿಮ್ಮ ನೆಚ್ಚಿನ ಚಿತ್ರ ಯಾವುದೆಂದು ಕಾ’ಮೆಂಟ್ ಮಾಡಿ ತಿಳಿಸಿ..