ಲಾಕ್ ಡೌನ್ ಇದ್ದರೂ ಜಾಲಿ ರೈಡ್ ಹೋದ ಸ್ಯಾಂಡಲ್ವುಡ್ ನಟಿಗೆ ಎಂತ ಗತಿಯಾಯ್ತು.?ಆಸ್ಪತ್ರೆಯಿಂದಲೂ ಪರಾರಿಯಾದ ನಟಿ..

Cinema
Advertisements

ಕೊರೋನಾ ವೈರಸ್ ಹಿನ್ನಲೆಯಲ್ಲಿ ಇಡೀ ದೇಶದಾದ್ಯಂತ ಲಾಕ್ ಡೌನ್ ಆಗಿದ್ದು, ತಮ್ಮ ದಿನ ನಿತ್ಯದವಸ್ತುಗಳು ಹಾಗೂ ತುರ್ತು ಪರಿಸ್ಥಿತಿ ಬಿಟ್ಟರೆ ಬೇರೆ ಯಾವುದಕ್ಕೂ ಮನೆಯಿಂದ ಆಚೆ ಬರುವ ಆಗಿಲ್ಲ ಎಂದು ಕೇಂದ್ರ ಸರ್ಕಾರದಿಂದ ಆದೇಶ ಆಗಿದೆ. ಆದರೆ ಕೆಲವೊಬ್ಬರು ಸೆಲೆಬ್ರೆಟಿಗಳಿಗೆ ಮಾತ್ರ ಇದು ಅನ್ವಯ ಆದಂತಿಲ್ಲ.

Advertisements

ಇನ್ನು ನಮ್ಮ ಆರೋಗ್ಯಕ್ಕಾಗಿ ಮಾಡಿರುವ ಈ ಆದೇಶ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಮನೆಯಲ್ಲಿದ್ದುಕೊಂಡೇ ಜನರಲ್ಲಿ ಜಾಗೃತಿ ಮೂಡಿಸಬೇಕಾದದ್ದು ಸೆಲೆಬ್ರೆಟಿಯಾದವರ ಕರ್ತವ್ಯ. ಆದರೆ ತೆಪ್ಪಗೆ ಮನೆಯಲ್ಲಿದ್ದುಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕಾದ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಸ್ನೇಹಿತರ ಜೊತೆಗೂಡಿ ಕಾರಿನಲ್ಲಿ ಜಾಲಿರೈಡ್ ಹೋಗಿದ್ದಾರೆ.

ಇನ್ನು ಐಷಾರಾಮಿ ಜಾಗ್ವಾರ್ ಕಾರಿನಲ್ಲಿ ತಮ್ಮ ಸ್ನೇಹಿತ ಲೋಕೇಶ್ ಅವರ ಜೊತೆ ಜಾಲಿ ರೈಡ್ ಗೆ ಹೋಗಿದ್ದು, ವೇಗವಾಗಿ ಕಾರು ಚಲಾಯಿಸುತ್ತಿದ್ದ ಕಾರಣ ಬೆಂಗಳೂರಿನ ವಸಂತ್ ನಗರದ ಬ್ರಿಡ್ಜ್ ಕೆಳಗಡೆ ಇರುವ ಫಿಲ್ಲರ್ ಗೆ ತಾವು ಚಲಾಯಿಸುತ್ತಿದ್ದ ಜಾಗ್ವಾರ್ ಕಾರ್ ನ್ನ ಗುದ್ದಿದ್ದಾರೆ.

ಇನ್ನು ಜಾಲಿ ಮೂಡ್ ನಲ್ಲಿದ್ದ ನಟಿ ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತ ವಸಂತ್ ಕಾರಿನಲ್ಲಿ ಸೀಟ್ ಬೆಲ್ಟ್ ಕೂಡ ಹಾಕಿರಲಿಲ್ಲ. ಈ ಕಾರಣದಿಂದಾಗಿಯೇ ಏರ್ ಬ್ಯಾಗ್ ಓಪನ್ ಆಗಲಿಲ್ಲ. ಇನ್ನು ನಟಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಪೆಟ್ಟಾಗಿದ್ದು, ಸ್ನೇಹಿತ ವಸಂತ್ ಅವರ ಬಲಗೈಗೆ ಪೆಟ್ಟಾಗಿದೆ ಎಂದು ಹೇಳಲಾಗಿದೆ. ಇನ್ನು ಕಾರು ಅಪಘಾತವಾದ ಬಳಿಕ ಇಬ್ಬರು ಚಿಕಿತ್ಸೆಗಾಗಿ ಪೋರ್ಟಿಸ್ ಆಸ್ಪತ್ರೆಗೆ ಹೋಗಿದ್ದು, ಪ್ರಥಮ ಚಿಕಿತ್ಸೆ ತೆಗೆದುಕೊಂಡ ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆದೇಶ ಇದ್ದರೂ ಕಾನೂನನ್ನ ಉಲಂಘನೆ ಮಾಡಿ ಇವರು ಹೊರಗೆ ಬಂದಿದ್ದಾರೆ. ಜೊತೆಗೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಹಾಗಾಗಿ ಪ್ರಕರಣ ದಾಖಲು ಮಾಡಿಕೊಂಡಿರುವ ಸ್ಥಳೀಯ ಪೊಲೀಸರು ನಟಿ ಶರ್ಮಿಳಾ ಮಾಂಡ್ರೆ ಮತ್ತು ವಸಂತ್ ಅವರನ್ನ ಹುಡುಕುತ್ತಿದ್ದಾರೆ.