ಲಾಕ್ ಡೌನ್ ನಡುವೆಯೂ ವಿಶೇಷ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಕಾಮಿಡಿ ಕಿಲಾಡಿ..

Cinema Entertainment
Advertisements

ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಷೋ ಕಾಮಿಡಿ ಕಿಲಾಡಿಗಳು ಸೀಸನ್ ಒಂದರ ವಿನ್ನರ್ ಶಿವರಾಜ್ ಕೆ ಆರ್ ಪೇಟೆ ಅವರು ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ತಮ್ಮ ಹುಟ್ಟಿದಹಬ್ಬವನ್ನು ಬಹಳ ಸರಳವಾಗಿ, ಅದೂ ದೇಶೀ ಶೈಲಿಯಲ್ಲಿ ಆಚರಣೆ ಮಾಡಿಕೊಂಡಿದ್ದಾರೆ.

Advertisements

ಕೊರೋನಾ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು, ಎಲ್ಲಾ ಅಂಗಡಿಗಳನ್ನ ಮುಚ್ಚಲಾಗಿದೆ. ಇನ್ನು ಇಂದು ಕಾಮಿಡಿ ನಟ ಶಿವರಾಜ್ ಕೆ ಆರ್ ಪೇಟೆ ಅವರ ಹುಟ್ಟಿದ ಹಬ್ಬವಾಗಿದ್ದು, ಮನೆಯಲ್ಲೇ ರಾಗಿ ಮುದ್ದೆಯಿಂದ ಕೇಕ್ ಮಾಡಿ, ಕುಟುಂಬದವರ ಜೊತೆ ಕೇಕ್ ಕಟ್ ಮಾಡುವುದರ ಮೂಲಕ ಸರಳವಾಗಿ ಹುಟ್ಟುಹಬ್ಬವನ್ನ ಆಚರಣೆ ಮಾಡಿ ಕೊಂಡಿದ್ದಾರೆ.

ಇನ್ನು ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಅಕ್ಕ ಬಾವನ ಜೊತೆ ಇರುವ ಶಿವರಾಜ್ ಕೆ ಆರ್ ಪೇಟೆ ತಮ್ಮ ೩೭ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಇನ್ನು ತಾವು ರಾಗಿ ಮುದ್ದೆ ಕೇಕ್ ಕಟ್ ಮಾಡುತ್ತಿರುವ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು,ತನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದವರಿಗೆಲ್ಲಾ ಧನ್ಯವಾದ ತಿಳಿಸಿದ್ದಾರೆ.

ಇನ್ನು ಕಾಮಿಡಿ ಕಿಲಾಡಿಗಳು ಶೋನಿಂದ ಬಂದ ಮೇಲೆ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಕೆ ಆರ್ ಪೇಟೆ ದೊಡ್ಡ ದೊಡ್ಡ ಸ್ಟಾರ್ ನಂತರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇನ್ನು ರಾಬರ್ಟ್ ಸೇರಿದಂತೆ ನಿಖಿಲ್ ಅಭಿನಯಿಸುತ್ತಿರುವ ಮುಂದಿನ ಚಿತ್ರ ಸೇರಿದಂತೆ ಹಲವಾರು ಚಿತ್ರಗಳು ಶಿವರಾಜ್ ಅವರ ಕೈ ನಲ್ಲಿ ಇವೆ. ನಮ್ಮ ಕಡೆಯಿಂದ ಶಿವರಾಜ್ ಕೆ ಆರ್ ಪೇಟೆಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.