ಶ್ರೀರಾಮುಲು ಮಗಳ ಅದ್ದೂರಿ ಮದ್ವೆಗೆ ಭರ್ಜರಿ ಸಿದ್ಧತೆ..ಅಂಬಾನಿ ಮಗನ ಮದ್ವೆಯನ್ನೂ ಮೀರಿಸಲಿದೆ..

Advertisements

ಮರ್ಚ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಜರಗುವ ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅವರ ಮದುವೆಗೆ ಈಗಾಗಲೇ ಭರ್ಜರಿ ತಯಾರಿಗಳು ಆರಂಭವಾಗಿವೆ. ಈಗಾಗಲೇ ಕರ್ನಾಟಕದ ಎಲ್ಲಾ ಜಿಲ್ಲೆಗಳ ಎಲ್ಲಾ ಅಧಿಕಾರಿಗಳಿಗೂ, ತಮ್ಮ ಪಕ್ಷವಾದ ಬಿಜೆಪಿಯ ಪದಾಧಿಕಾರಿಗಳಿಗೂ ಮದುವೆ ಆಮಂತ್ರಣ ಪತ್ರಿಕೆಯನ್ನ ಕಳುಹಿಸಲಾಗಿದೆ.

Advertisements

ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಮಾರ್ಗದರ್ಶನದಲ್ಲಿಯೇ ಮದುವೆಯ ಎಲ್ಲಾ ಸಿದ್ಧತೆಗಳನ್ನ ನಡೆಸಲಾಗಿದ್ದು, ರಾಜ್ಯದ ೫೦೦ಕ್ಕೂ ಹೆಚ್ಚು ಸ್ವಾಮೀಜಿಗಳಿಗೆ ವಿಶೇಷವಾದ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ. ಇನ್ನು ನಟಿ ದೀಪಿಕಾ ಪಡುಕೋಣೆ ಮದುವೆಯಲ್ಲಿ ಮೇಕಪ್ ಮಾಡಿದ್ದವರೆ ವಧು ರಕ್ಷಿತಾರವರಿಂಗೆ ಮೇಕಪ್ ಮಾಡಲಿದ್ದಾರೆ.

ತನ್ನ ಪುತ್ರಿ ರಕ್ಷಿತಾ ಮದುವೆಯನ್ನ ಅದ್ದೂರಿಯಾಗಿ ಮಾಡುತ್ತಿರುವ ಸಚಿವ ಶ್ರೀರಾಮುಲುರವರು ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮಗನ ಮದುವೆಯಲ್ಲಿ ವಿಡಿಯೋ ಮಾಡಿದ್ದ ಜಯರಾಮನ್ ಪಿಳ್ಳೈ ಹಾಗೂ ದೀಲಿಪ್ ಅವರಿಗೆ ವಿಡಿಯೋ ಹಾಗೂ ಫೋಟೋಗಳನ್ನ ತೆಗೆಯುವ ಜವಾಬ್ದಾರಿಯನ್ನ ನೀಡಿದ್ದಾರಂತೆ.

ಇನ್ನು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುವ ತನ್ನ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನ ಆಹ್ವಾನಿಸಿದ್ದು ಲಗ್ನ ಪತ್ರಿಕೆ ನೀಡಲಾಗಿದೆಯಂತೆ. ಜೊತೆಗೆ ಪಕ್ಷದ ಪದಾಧಿಕಾರಿಗಳಿಗೂ ಶ್ರೀಸಾಮಾನ್ಯರಿಗೂ ಆಹ್ವಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ತನ್ನ ಮಗಳ ಮದುವೆಗೆ ಬರುವ ಸಂಬಂದಿಕರು ಮತ್ತು ಸ್ನೇಹಿತರಿಗಾಗಿ ಬೆಂಗಳೂರಿನ ಪಂಚತಾರಾ ಹೋಟೆಲ್ ಗಳಲ್ಲಿ ರೂಮ್ ಗಳನ್ನ ಬುಕ್ ಮಾಡಲಾಗಿದೆಯಂತೆ.

ಶ್ರೀರಾಮುಲು ಅವರಿಗೆ ರಕ್ಷಿತಾ, ದೀಕ್ಷಿತಾ, ಅಂಕಿತ ಮತ್ತು ಧನುಷ್ ಸೇರಿದಂತೆ ಒಟ್ಟು ನಾಲ್ಕು ಜನ ಮಕ್ಕಳು. ಹಿರಿಯ ಪುತ್ರಿ ರಕ್ಷಿತಾ ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇನ್ನು ಹೈದರಬಾದ್ ಮೂಲದ ಉದ್ಯಮಿಯೊಬ್ಬರ ಮಗನಾಗಿರುವ ಲಲಿತ್ ಕೂಡ ಲಂಡನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು ಒಬ್ಬರೊನ್ನೊಬ್ಬರು ಇಷ್ಟಪಟ್ಟಿದ್ದರು. ಈಗ ತನ್ನ ಮಗಳು ಇಷ್ಟಪಟ್ಟ ಹುಡುಗನ ಜೊತೆಯೇ ಶ್ರೀರಾಮುಲು ಅವರು ಅದ್ದೂರಿಯಾಗಿ ಮದುವೆ ಮಾಡುತ್ತಿದ್ದಾರೆ.