ಸಿಹಿ ಸುದ್ದಿಯೊಂದಿಗೆ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಟಿ ಶುಭಾ ! ಸಿಕ್ಕ ದುಬಾರಿ ಸಂಭಾವನೆ ಎಷ್ಟು ಗೊತ್ತಾ ?

Entertainment

ಸ್ನೇಹಿತರೇ, ಈಗಾಗಲೇ ಬಿಗ್ ಬಾಸ್ ಸಿಡಲ್ 8 ಕೊ’ರೋನಾ ಕಾರಣದಿಂದಾಗಿ ಅರ್ಧಕ್ಕೆ ನಿಂತಿದ್ದು, ಉಳಿದಿದ್ದ ಹನ್ನೊಂದು ಸ್ಪರ್ಧಿಗಳಾದ ಶುಭ ಪೂಂಜಾ, ವೈಷ್ಣವಿ, ನಿಧಿ, ದಿವ್ಯ ಸುರೇಶ್, ಮಂಜು ಪಾವಗಡ, ಅರವಿಂದ್, ಪ್ರಶಾಂತ್ ಸಂಬರ್ಗಿ, ಶಮಂತ್, ರಘು, ಪ್ರಿಯಾಂಕಾ, ಚಂದ್ರ ಚೂಡ್ ಎಲ್ಲಾರು ಈಗಾಗಲೇ ಅವರವರ ಮನೆಗಳಿಗೆ ಹೋಗಿ ಆಗಿದೆ. ಇನ್ನು ಮಂಜು ಪಾವಗಡ, ಅರವಿಂದ್ ಮತ್ತು ಸಂಬರ್ಗಿ ಈ ಮೂವರು ಫೈನಲ್ ರೇಸ್ ನಲ್ಲಿದ್ದವರು. ಮಂಜು ಪಾವಗಡ ಅವರಂತೂ ಶೋ ಅರ್ಧಕ್ಕೆ ನಿಂತಿದ್ದರಿಂದ ತುಂಬಾ ಬೇಜಾರಾಗಿದ್ದಂತೂ ಸತ್ಯ.

ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಒಂದು ವಿಶೇಷ ಏನೆಂದರೆ, ಕಿರುತೆರೆ, ಸಿನಿಮಾ ಹಾಗೂ ಸೋಷಿಯಲ್ ಫೇಮಸ್ ಆದವರನ್ನ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಒಬ್ಬರು ಮೊಗ್ಗಿನ ಮನಸ್ಸು ಖ್ಯಾತಿಯ ನಟಿ ಶುಭಾ ಪೂಂಜಾ. ಇನ್ನು ಇವರ ಬಗ್ಗೆ ಹೊರ ಜಗತ್ತಿನಲಿ ಬೇರೆಯದೇ ಅಭಿಪ್ರಾಯವೇ ಇತ್ತು. ಆದರೆ ಬಿಗ್ ಬಾಸ್ ಮನೆಯಲ್ಲಿ ಶುಭಾ ಪೂಂಜಾ ಅವರ ಮಗುವಿನಂತಹ ಮನಸ್ಸು ಹಾಗೂ ಅವರ ನಡುವಳಿಕೆ ನೋಡಿ, ಮೊದಲಿಗೆ ಅವರ ಬಗ್ಗೆ ಇದ್ದ ಅಭಿಪ್ರಾಯವನ್ನೇ ಬದಲಿಸುವಂತೆ ಮಾಡಿದೆ. ಇನ್ನು ಸಂಭಾವನೆ ವಿಚಾರಕ್ಕೆ ಬಂದರೆ, ಒಂದು ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ತುಂಬಾ ಆಕ್ಟಿವ್ ಆಗಿದ್ದ ಶುಭಾ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ದುಬಾರಿಯಾದ ಸಂಭಾವನೆಯೇ ದೊರೆತಿದೆ ಎಂದು ಹೇಳಲಾಗಿದೆ.

ಹೌದು, ಮೊದಲೇ ನಿಗದಿ ಆಗಿರುವಂತೆ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರದ ಸಂಭಾವನೆ ಕೊಡಲಾಗುತ್ತದೆ. ಅದರಂತೆ ಶುಭಾ ಪೂಂಜಾ ಅವರು ಒಟ್ಟು ೧೧ ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಇನ್ನು ಒಂದು ವೇಳೆ ಬಿಗ್ ಬಾಸ್ ಮುಂದುವರಿದಿದ್ದಾರೆ ಮತ್ತೆರಡು ವಾರಗಳ ಕಾಲ ಶುಭಾ ಅವರು ಬಿಗ್ ಮನೆಯಲ್ಲಿ ಇರುತ್ತಿದ್ದರು ಎಂಬ ಲೆಕ್ಕಾಚಾರ ಕೂಡ ಇದೆ. ಇನ್ನು ಸಂಭಾವನೆ ವಿಚಾರದಲ್ಲಿ ಶುಭಾ ಅವರಿಗೆ ವಾರಕ್ಕೆ 40 ಸಾವಿರದಂತೆ ಸಂಭಾವನೆ ಫಿಕ್ಸ್ ಮಾಡಲಾಗಿತ್ತು. ಅದರಂತೆ ೧೧ ವಾರಗಳ ಕಾಲ ಇದ್ದ ಶುಭಾ ಅವರಿಗೆ ಒಟ್ಟಾಗಿ 4 ಲಕ್ಷದ 40 ಸಾವಿರ ಹಣ ಸಂಭಾವನೆಯಾಗಿ ದೊರೆತಿದೆ.

ಇನ್ನು ಶುಭಾ ಪೂಂಜಾ ಅವರು ಬಿಗ್ ಬಾಸ್ ಮನೆಯಲ್ಲಿನ ಕಡೆ ದಿನ ಸುದ್ದಿಯೊಂದನ್ನ ಹಂಚಿಕೊಂಡಿದ್ದು, ತನ್ನ ಮದುವೆ ವಿಚಾರವಾಗಿ ಪ್ರಸ್ತಾಪ ಮಾಡಿದ್ದಾರೆ. ನನಗೆ ಬಿಗ್ ಬಾಸ್ ಅವಕಾಶ ಸಿಕ್ಕ ಕಾರಣ, ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಮದುವೆ ಆಗೋಣವೆಂದು, ಫಿಕ್ಸ್ ಆಗಿದ್ದ ಮದುವೆಯನ್ನ ಮುಂದಕ್ಕೆ ಹಾಕಿ ಬಂದಿದ್ದೆ ಎಂದು ಶುಭಾ ಹೇಳಿದ್ದಾರೆ. ಮಂಗಳೂರು ಮೂಲದ ಉದ್ಯಮಿಯೊಬ್ಬರನ್ನ ಶುಭಾ ಪ್ರೀತಿಸುತ್ತಿದ್ದು ಈಗಾಗಲೇ ಅವರ ಜೊತೆ ಎಂಗೇಜ್ಮೆಂಟ್ ಕೂಡ ಆಗಿದೆ. ಇನ್ನು ಈಗಾಗಲೇ ಶುಭಾ ಬಿಗ್ ಬಸ್ ನಿಂದ ಹೊರಗೆ ಬಂದಿದ್ದು ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.