ಬಿಗ್ ಬಾಸ್ ಖ್ಯಾತಿಯ ಈ ನಟಿ ಜೀವನದಲ್ಲಿ ಅನುಭವಿಸಿದ ಕಷ್ಟಗಳೇನು ಗೊತ್ತಾ ? ಮದುವೆ ಬಗ್ಗೆ ಹೇಳಿರುವುದೇನು ನೋಡಿ..

Cinema

ಸ್ನೇಹಿತರೇ, ಕನ್ನಡ ಕಿರುತೆರೆಯ ಫೇಮಸ್ ರಿಯಾಲಿಟಿ ಶೋ, ಬಿಗ್ ಬಾಸ್ ೮ರ ಕಾರ್ಯಕ್ರಮದಲ್ಲಿ ಸಿನಿಮಾ, ಧಾರಾವಾಹಿಗಳಲ್ಲಿ ಕೆಲಸ ಮಾಡಿದವರು ಸ್ಪೋಟ್ಸ್ ನಲ್ಲಿದ್ದವರು, ಸೋಷಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ. ಇನ್ನು ಅವರಲ್ಲಿ ಒಬ್ಬರು ನಟಿ ಶುಭಾ ಪೂಂಜಾ. ಮೂಲತಃ ಮಂಗಳೂರಿನವರಾದ ಶುಭಾ ತುಳುವ ಕಮ್ಯುನಿಟಿಗೆ ಸೇರಿದವರು. ಬೆಂಗಳೂರಿನ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಓದಿದ ಶುಭಾ ಮಾಡೆಲಿಂಗ್ ಮಾಡುತ್ತಾ ಟಿವಿ ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. ಮೊದಲಿಗೆ ತಮಿಳಿನ ಮಚ್ಚಿ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶುಭಾ ಎರಡು ಮೂರೂ ತಮಿಳು ಚಿತ್ರಗಳ ಮೂಲಕ ೨೦೦೬ರಲ್ಲಿ ಬಿಡುಗಡೆಯಾದ ಜಾಕ್ ಪಾಟ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಾರೆ. ಮೊಗ್ಗಿನ ಮನಸ್ಸು ಸಿನಿಮಾ ಶುಭಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರ.

ಆದರೆ ಕೆಲ ಸಿನಿಮಾಗಳ ಬಳಿಕ ಹಸಿ ಬಿಸಿ ಪಾತ್ರಗಳಲ್ಲಿ ಕಾಣಿಸಿಕೊಂಡು ಅವರ ಮೇಲೆ ಬೇರೆಯದೇ ಅಭಿಪ್ರಾಯ ಮೂಡಿಸಿದ್ದ ಶುಭಾ ಬಿಗ್ ಬಾಸ್ ಮನೆಗೆ ಬಂದ ಮೇಲೆ ಅವರಿಗಿರುವ ಮಗುವಿನಂತಹ ಮನಸ್ಸು ನೋಡಿ ಬಹುತೇಕರಿಗೆ ಅವರ ಮೇಲಿದ ಅಭಿಪ್ರಾಯ ಬದಲಾಗುವಂತೆ ಮಾಡಿದ್ದಾರೆ. ಇನ್ನು ಇದುವರೆಗೂ ಕನ್ನಡ ತಮಿಳು ಸೇರಿದಂತೆ ೪೦ಕ್ಕೂ ಹೆಚ್ಚು ಚಿತ್ರಗಳ್ಲಲಿ ನಟಿಸಿದ್ದಾರೆ ಶುಭಾ ಪೂಂಜಾ. ಇನ್ನು ಹೆಚ್ಚಾಗಿ ನಟ ದುನಿಯಾ ವಿಜಯ್ ಚಿತ್ರಗಳಲ್ಲಿ ನಟಿಸುತ್ತಿದ್ದ ಶುಭಾ ಪೂಂಜಾ ಹಾಗೂ ದುನಿಯಾ ವಿಜಯ್ ಮಧ್ಯೆ ಏನೋ ಇದೆ ಗಾಸಿಪ್ ಸಾಕಷ್ಟು ಸುದ್ದಿಯಾಗಿತ್ತು. ಇವರಿಬ್ಬರು ಮದುವೆಯಾಗಿದ್ದಾರೆ ಎನ್ನುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕಾಪಟ್ಟೆ ವೈರಲ್ ಆಗಿದ್ದವು.

ಇದೆಲ್ಲಾ ಗಾಸಿಪ್ ಗಳು ಬಂದ ಮೇಲೆ ಕೊಂಚ ಕಾಲ ಸಿನಿಮಾ ರಂಗದಿಂದ ದೂರವಿದ್ದ ಶುಭಾ ಅವರು ಪ್ರಚೋದನಕಾರಿಯಾಗುವಂತಹ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡು ಮತ್ತೆ ಸಿನಿಮಾ ರಂಗಕ್ಕೆ ಬ್ಯಾಕ್ ಆದ ಶುಭಾ ಅವರ ಇಮೇಜನ್ನ ಬದಲಿಸುವಂತೆ ಮಾಡಿತ್ತು. ಇನ್ನು ಕಳೆದ ವರ್ಷವಷ್ಟೇ ಬ್ಯುಸಿನೆಸ್ ಮ್ಯಾನ್ ಒಬ್ಬರೊಟ್ಟಿಗೆ ಪ್ರೀತಿಯಲ್ಲಿ ಬಿದ್ದಿದ್ದು, ಡೇಟಿಂಗ್ ನಲ್ಲಿರುವ ಬಗ್ಗೆ ಸ್ವತಃ ಶುಭಾ ಪೂಂಜಾ ಕೆಲ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನಾವು ಕೆಲವೇ ದಿನಗಳಲ್ಲಿ ಮದುವೆಯಾಗುತ್ತೇವೆ ಎಂದು ಹೇಳಿಕೊಂಡಿದ್ದರು. ಇನ್ನು ಈಗ ಬಿಗ್ ಬಾಸ್ ಮನೆಯಲಿ ಚೆನ್ನಾಗಿಯೇ ಆಟ ಆಡುತ್ತಿರುವ ಶುಭಾ ಅವರು ಬಿಗ್ ಬಾಸ್ ಮನೆಯಿಂದ ಹೊರಹೋದ ಮೇಲೆ ತಾನು ಪ್ರೀತಿಸಿದ ಪ್ರೇಮಿಯ ಜೊತೆ ಮದುವೆಯಾಗಲಿದ್ದೇನೆ ಎಂದು ಹೇಳಲಾಗಿದೆ. ಸ್ನೇಹಿತರೆ, ನಟಿ ಶುಭಾ ಪೂಂಜಾ ಫೈನಲ್ ಹೋಗಲಿದ್ದಾರಾ ಇಲ್ಲವಾ ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..