ಶುಭಾ ಪೂಂಜಾ ಲೆಕ್ಕಕ್ಕೇ ಇಲ್ಲ..ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರಂತೆ ! ಹೀಗಂದವರು ಯಾರು ಮತ್ತು ಏಕೆ ಗೊತ್ತಾ ?

Entertainment
Advertisements

ನಟಿ ಶುಭಾ ಪೂಂಜಾ. ಮೊದಲಿನಿಂದಲೂ ಬಬ್ಲಿ ಬಬ್ಲಿಯಾಗಿ, ಕ್ಯೂಟ್​ ಕ್ಯೂಟ್​ ಆಗಿ ಮುದ್ದು ಮುದ್ದು ಮಕ್ಕಳಂತೆ ಬಿಗ್​​ ಬಾಸ್ ಪ್ರಿಯರನ್ನ ರಂಜಿಸ್ತಾನೆ ಬರ್ತಿದ್ದಾರೆ. ಅವರ ತುಂಟಾಟ, ಚೆಲ್ಲಾಟ, ನಗು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ..? ಬಿಗ್​​ ಬಾಸ್ ನೋಡದವರೂ ಸಹ ನಟಿ ಶುಭಾ ಪೂಂಜಾ ಚೇಷ್ಟೆಗಾಗಿಯಾದ್ರೂ ನೋಡ್ತಾರೆ. ಬಿಗ್ ಬಾಸ್ ಮನೆಯಲ್ಲಿ ಯಾರ ಜೊತೆಯೂ ವಿವಾದ ಮಾಡಿಕೊಳ್ಳದೆ, ತಾನಾಯ್ತು, ತನ್ನ ಪಾಡಾಯ್ತು ಅಂತ ಎಲ್ಲರೊಂದಿಗೆ ಬೆರೆಯುತ್ತಾ ನಗಿಸ್ತಾ ಇರ್ತಾರೆ. ಮಂಜು ಪಾವಗಡ ಜೊತೆಯಂತೂ ತುಂಬಾ ಕ್ಲೋಸ್ ಆಗಿ ಇರ್ತಾರೆ. ಈ ಹಿಂದೆ ಮಂಜು ಅಡುಗೆ ಮಾಡುವಾಗ, ಮಂಜುವನ್ನ ಅಡುಗೆ ಮಾಡಲು ಬಿಡದೇ ಚೇಷ್ಟೇ ಮಾಡಿ ನಗಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಲ್ದೇ, ನಟಿ ನಿಧಿ ಸುಬ್ಬಯ್ಯ ಮತ್ತು ನಟಿ ಶುಭಪೂಂಜಾ ಸಹ ಒಳ್ಳೆಯ ಫ್ರೆಂಡ್ಸ್. ಏನೇ ವಿಷಯ ಇದ್ರೂ ಹಂಚಿಕೊಳ್ತಾ ಇರ್ತಾರೆ. ಶುಭಾಗೆ ಅಳು ಬಂದ್ರೆ ಮೊದಲು ಹೋಗೋದೇ ನಿಧಿ ಸುಬ್ಬಯ್ಯ ಬಳಿ. ನಿಧಿನೂ ಸಹ ಅವರ ಸಮಸ್ಯೆ ಆಲಿಸಿ ಕೊನೆಗೆ ಸಮಾಧಾನಪಡಿಸಿ, ನಗಿಸಿಸ್ತಾರೆ.

[widget id=”custom_html-4″]

Advertisements

ಶುಭಾ ಪೂಂಜಾ ಅತ್ತರೆ ಸಾಕು ಇಡೀ ಬಿಗ್ ಮಂದಿ ಅವರನ್ನ ಸಮಾಧಾನಪಡಿಸಲು ಮುಂದೆ ಬರುತ್ತೆ. ಅಷ್ಟು ಎಲ್ಲರಿಗೂ ಅಚ್ಚುಮೆಚ್ಚು ಬಬ್ಲಿ ಬಬ್ಲಿ ಶುಭಾ. ಇದೀಗ ‘ಕನ್ನಡ ಬಿಗ್​ ಬಾಸ್​ ಸೀಸನ್ 8’ರ ಎರಡನೇ ಇನ್ನಿಂಗ್ಸ್​ ದಿನ ಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಸ್ಪರ್ಧಿಗಳ ನಡುವೆ ಟಫ್​ ಫೈಟ್​ ಏರ್ಪಡುತ್ತಿದ್ದು, ಎಲ್ಲರೂ ಗೆಲ್ಲಲೇಬೇಕು ಎನ್ನುವ ಛಲಕ್ಕೆ ಬಿದ್ದಿದ್ದಾರೆ. ಆದರೆ, ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ ಮಾತ್ರ ಏನನ್ನೂ ಮಾಡುತ್ತಿಲ್ಲವಂತೆ. ಅವರನ್ನು ಕೇವಲ ಕೌಂಟ್​ಗೆ ಇಡಲಾಗಿದೆ ಎನ್ನುವ ಮಾತು ಬಿಗ್​ ಬಾಸ್​ ಸ್ಪರ್ಧಿಯಿಂದಲೇ ಬಂದಿದೆ. ಶುಭಾ ಪೂಂಜಾ ಬಂದ ದಿನದಿಂದಲೂ ತಮ್ಮದೇ ಸ್ಟೈಲ್​ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಮಕ್ಕಳಂತೆ ವರ್ತಿಸಿದ್ದೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಮನೆಯಲ್ಲಿ ಅವರಿಗೆ ವೈರಿಗಳಿಲ್ಲ. ಎಲ್ಲರ ಜತೆಯೂ ಅವರು ಹೊಂದಿಕೊಂಡು ಹೋಗುತ್ತಿದ್ದಾರೆ. ಇದು ಕೆಲವರ ಕಣ್ಣು ಕುಕ್ಕಿದೆ. ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್​ ಸಂಬರಗಿ ಕುಳಿತು ಮಾತನಾಡುತ್ತಿದ್ದರು. ಸದ್ಯ, ಮನೆಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಚರ್ಚೆ ಮಾಡುತ್ತಿದ್ದರು. ಮನೆಯಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

[widget id=”custom_html-4″]

ಇದರ ಮಧ್ಯೆಯೂ ಶಮಂತ್​ ಬ್ರೋ ಗೌಡ, ರಘು ಗೌಡ ಹಾಗೂ ಶುಭಾ ಪೂಂಜಾ ಎಲ್ಲರ ಜೊತೆಗೂ ಬೆರೆಯುತ್ತಿದ್ದಾರೆ. ಆದರೆ, ಇಲ್ಲಿ ಶುಭಾ ಪೂಂಜಾ ಲೆಕ್ಕಕ್ಕೇ ಇಲ್ಲ! ‘ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ರಘು, ಶಮಂತ್​ ಮಾತ್ರ ಎಲ್ಲರ ಜೊತೆಗೂ ಚೆನ್ನಾಗಿದ್ದಾರೆ’ ಎಂದರು ಚಕ್ರವರ್ತಿ ಚಂದ್ರಚೂಡ. ಅದಕ್ಕೆ ಪ್ರಶಾಂತ್​ ಸಂಬರಗಿ ಸಹ ‘ಶುಭಾ ಕೂಡ ಎಲ್ಲರ ಜೊತೆಗೆ ಬರೆಯುತ್ತಿದ್ದಾರೆ’ ಎಂದರು. ಈ ವೇಳೆ ‘ಬಿಗ್​ ಬಾಸ್​ನಲ್ಲಿ ಶುಭಾ ಲೆಕ್ಕಕ್ಕಿಲ್ಲ, ಸುಮ್ಮನೆ ಕೌಂಟ್​ಗೆ ಇಟ್ಟಿದ್ದಾರೆ’ ಎಂದು ಚಕ್ರವರ್ತಿ ತಮ್ಮ ಅಭಿಪ್ರಾಯ ತಿಳಿಸಿದರು. ‘ಹಾಗನ್ನಬೇಡ’ ಎಂದು ಹೇಳುವ ಮೂಲಕ, ಶುಭಾ ಪೂಂಜಾ ಕೂಡ ಪ್ರಬಲ ಕ್ಯಾಂಡಿಡೇಟ್​ ಎಂಬುದನ್ನು ಪ್ರಶಾಂತ್​ ಹೇಳೋಕೆ ಮುಂದಾದ್ರು. ಆದರೆ, ಇದನ್ನು ಚಕ್ರವರ್ತಿ ಚಂದ್ರಚೂಡ ಒಪ್ಪಲೇ ಇಲ್ಲ. ‘ನೀನೇ ಹೇಳು ಅವಳು (ಶುಭಾ) ಯಾವುದಕ್ಕೆ ಲೆಕ್ಕಕ್ಕೆ ಇದ್ದಾಳೆ? ಆಟಕ್ಕೂ ಇಲ್ಲ, ತರ್ಕಕ್ಕೂ ಇಲ್ಲ’ ಎಂದು ಚಕ್ರವರ್ತಿ ಚಂದ್ರಚೂಡ ತಮ್ಮ ವಾದ ಮಂಡಿಸಿದರು. ಹಾಗಿದ್ರೆ, ನಟಿ ಶುಭಾಪೂಂಜಾ ಬಿಗ್ ಬಾಸ್ ಮನೆಯಲ್ಲಿ ಏನ್ ಮಾಡ್ತಿದ್ದಾರೆ. ಬಿಗ್ ಬಾಸ್ ಕೊಟ್ಟ ಟಾಸ್ಕ್ ಸರಿಯಾಗಿ ಮಾಡುತ್ತಿಲ್ಲವೇ..? ಈ ಪ್ರಶ್ನೆ ಎಂಥವರನ್ನ ಕಾಡದೇ ಇರದು. ಆದ್ರೂ, ನಟಿ ಶುಭಪೂಂಜಾ ತಮ್ಮ ಕೈಲಾದಷ್ಟು, ಆದಷ್ಟು ಶ್ರಮ ಹಾಕಿ ಟಾಸ್ಕ್ ಮಾಡ್ತಿದ್ದಾರೆ. ಆದ್ರೂ, ಚಕ್ರವರ್ತಿ ಚಂದ್ರಚೂಡ ಹೀಗಂದಿದ್ದೇಕೆ..?