ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚೆಂಗಪ್ಪ ಮಗ ಈಗ ಹೇಗಿದ್ದಾನೆ ಗೊತ್ತಾ ? ತಾಯಿಯಂತೆ ಮಗ ಕೂಡ ಫೇಮಸ್ !

Advertisements

ಕಿರುತೆರೆಯ ಖ್ಯಾತ ಕಾಮಿಡಿ ಶೋ ಕಾರ್ಯಕ್ರಮ ಮಜಾ ಟಾಕೀಸ್ ಮೂಲಕ ತುಂಬಾನೇ ಫೇಮಸ್ ಆದವರು ನಟಿ ಶ್ವೇತಾ ಚೆಂಗಪ್ಪ. ಇವರು ಮಜಾ ಟಾಕೀಸ್ ನ ರಾಣಿ ಎಂದೇ ಹೆಚ್ಚು ಹೆಸರುಗಳಿಸಿದ್ದಾರೆ. ಇನ್ನು ಶ್ವೇತಾ ಚೆಂಗಪ್ಪ ಅವರ ಪತಿಯ ಹೆಸರು ಕಿರಣ್ ಅಪ್ಪಚ್ಚು ಎಂದು. ತಮ್ಮ ಕಾಮಿಡಿಯ ಕಚಗುಳಿಯಿಂದ ಕರುನಾಡ ಮನಸನ್ನ ಗೆದ್ದವರು ಶ್ವೇತಾ. ಇನ್ನು ಇವರ ಮುದ್ದಾದ ಮಗನ ಹೆಸರೇ ಜಿಯಾನ್ ಅಯ್ಯಪ್ಪ ಎಂದು. ಎಲ್ಲಾ ತಾಯಿಯರಂತೆ ಶ್ವೇತಾ ಅವರು ತಮ್ಮ ಮಗನನ್ನ ತುಂಬಾ ಮುದ್ದಿನಿಂದ ಸಾಕುತ್ತಿದ್ದಾರೆ. ಮಗನಿಗಾಗಿಯೇ ತನ್ನ ಎಲ್ಲಾ ಸಮಯವನ್ನ ಮೀಸಲಿಟ್ಟಿದ್ದಾರೆ. ಇನ್ನು ಮಗ ಜಿಯಾನ್ ಕೂಡ ತನ್ನ ಪುಟ್ಟ ವಯಸ್ಸಿಗೆ ಫೇಮಸ್ ಆಗಿದ್ದಾನೆ.

[widget id=”custom_html-4″]

Advertisements

ಹೌದು, ಈ ಪುಟ್ಟ ವಯಸ್ಸಿಗೇನೇ ಜಿಯಾನ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿರುವ ಶ್ವೇತಾ ಚೆಂಗಪ್ಪ ಮಗನ ಜೊತೆ ಫೋಟೋ ಶೂಟ್ ಮಾಡಿಸಿಕೊಂಡ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಚಿಕ್ಕ ವಯಸ್ಸಿಗೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಸಂಪಾದನೆ ಮಾಡಲು ಶುರು ಮಾಡಿರುವ ಜಿಯಾನ್ ಅಯ್ಯಪ್ಪ, ತನ್ನ ತಾಯಿಯ ಜೊತೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಇನ್ನು ಸೆಪ್ಟೆಂಬರ್ ೨೦೧೯ರಲ್ಲಿ ತನ್ನಮಗುವಿಗೆ ಜನ್ಮ ಕೊಟ್ಟ ನಟಿ ಶ್ವೇತಾ ಚೆಂಗಪ್ಪ ಅಂದಿನಿಂದ ತಮ್ಮ ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ.

[widget id=”custom_html-4″]

ತಾನು ಗರ್ಭಿಣಿ ಆದ ಮೇಲೆ ಮಜಾ ಟಾಕೀಸ್ ಶೋ ಕಾರ್ಯಕ್ರಮ ಬಿಟ್ಟಿದ್ದ ಶ್ವೇತಾ ಚೆಂಗಪ್ಪ, ಇತ್ತೀಚೆಗಷ್ಟೇ ಮತ್ತೆ ಮಜಾ ಟಾಕೀಸ್ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಶ್ವೇತಾ ಅವರು ತಮ್ಮ ಮಗುವಿನ ಜೊತೆ ಇರುವ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದು ಅಭಿಮಾನಿಗಳಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಒಟ್ಟಿನಲ್ಲಿ ಸುಂದರವಾದ ಪ್ರೀತಿಯ ಕುಟುಂಬ ನಟಿ ಶ್ವೇತಾ ಚೆಂಗಪ್ಪ ಅವರದ್ದು.