ಹೆಲ್ಮೆಟ್ ಇಲ್ಲದೆ ಬಂದ ವ್ಯಕ್ತಿಗೆ ದಂಡ ಹಾಕಿದ SIಗೆ ರಸ್ತೆ ಮಧ್ಯೆಯೇ ಅವಾಜ್ ಹಾಕಿದ ತಹಸೀಲ್ದಾರ್ ಮತ್ತು ಎಸಿ ! ಏಕೆ ಗೊತ್ತಾ ?

Advertisements

ಸ್ನೇಹಿತರೇ, ಸರ್ಕಾರದ ಕಾನೂನುಗಳು ಸಾಮಾನ್ಯ ಪ್ರಜೆಗಳಿಂದ ಹಿಡಿದು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಸಹ ಅನ್ವಯವಾಗುತ್ತದೆ. ಸಾಮಾನ್ಯ ಜನರಿಗೊಂದು ಸರ್ಕಾರಿ ಸಿಬ್ಬಂದಿಗೆಂದು ಬೇರೆ ಬೇರೆ ಕಾನೂನುಗಳೇನು ಇಲ್ಲ. ಇನ್ನು ನಿಯಮಗಳಂತೆ ಪೊಲೀಸರು ಹೆಲ್ಮೆಟ್ ಇಲ್ಲದೆ, ಮಾಸ್ಕ್ ಇಲ್ಲದೆ ಬೈಕ್ ಗಳಲ್ಲಿ ತಿರುಗಾಡುವವರಿಗೆಈ ದಂಡ ಹಾಕುವುದು ಸಾಮಾನ್ಯ. ಅದೇ ರೀತಿ ಮಂಡ್ಯದ ನಾಗಮಂಗಲದ ಠಾಣೆಯ ಎಸ್ಐ ಆಗಿರುವ ರವಿಶಂಕರ್ ಮತ್ತು ಅವರ ತಂಡವು ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.

[widget id=”custom_html-4″]

Advertisements

ಇದೆ ವೇಳೆ ಹೆಲ್ಮೆಟ್ ಇಲ್ಲದೆ ಬಂದ ವ್ಯಕ್ತಿಯೊಬ್ಬರ ಬೈಕ್ ನ್ನ ತಡೆದು ಪೊಲೀಸ್ ಅಧಿಕಾರಿ ದಂಡ ಹಾಕಿದ್ದಾರೆ. ಇನ್ನು ಆ ವ್ಯಕ್ತಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯಾಗಿದ್ದರು. ಇನ್ನು ಈ ವಿಚಾರ ತಿಳಿದು ನೇರವಾಗಿ ಅಲ್ಲಿಗೆ ಬಂದ ತಹಸೀಲ್ದಾರ್ ಮತ್ತು ಎಸಿ ದಂಡ ವಿಧಿಸಿದ ಸಬ್ ಇನ್ಸ್ಪೆಕ್ಟರ್ ಗೆ ನಡು ರಸ್ತೆಯಲ್ಲೇ ತರಾಟೆ ತೆಗೆದುಕೊಂಡಿದ್ದಾರೆ. ನಾನು ಮ್ಯಾಜಿಸ್ಟ್ರೇಟ್ ಹೇಳ್ತ ಇದ್ದೀನಿ, ಇನ್ಮುಂದೆ ಕಂದಾಯ ಇಲಾಖೆಯ ಸಿಬ್ಬಂದಿಗೆ ದಂಡ ಹಾಕಬಾರದು..ಇದೆ ಫಸ್ಟ್ ಅಂಡ್ ಲಾಸ್ಟ್ ಎಂದು ತಹಸೀಲ್ದಾರ್ ಅವರು ಸಬ್ ಇನ್ಸ್ಪೆಕ್ಟರ್ ಗೆ ವಾರ್ನಿಂಗ್ ಮಾಡಿದ್ದಾರೆ.

[widget id=”custom_html-4″]

ಸ್ನೇಹಿತರೇ, ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಅಧಿಕಾರಿಗಳೇ, ಕಾನೂನು ಪಾಲಿಸದವನ ಪರ ಮಾತನಾಡಿ, ಸಬ್ ಇನ್ಸ್ಪೆಕ್ಟರ್ ಗೆ ವಾರ್ನಿಂಗ್ ಮಾಡಿದ್ದಾರೆ ಎಂದರೆ ಇವರಿಗೆ ಹೇಳುವುದೇನು.. ಇವರನ್ನ ಕೇಳುವವರು ಯಾರು ನೀವೇ ಹೇಳಿ..ಇನ್ನು ತನ್ನ ಕರ್ತವ್ಯ ನಿರವಹಿಸಿದ ಸಬ್ ಇನ್ಸ್ಪೆಕ್ಟರ್ ಗೆ ವಾರ್ನಿಂಗ್ ಕೊಟ್ಟಿದ್ದ ಅಧಿಕಾರಿಗಳು ವಿರುದ್ಧ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆ’ಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಸಿಬ್ಬಂದಿಗೊಂದು ಕಾನೂನು ನಮ್ಮಂತಹ ಸಾಮಾನ್ಯ ಜನರಿಗೊಂದು ಕಾನೂನಾ ? ಎಂದು ಕಾ’ಮೆಂಟ್ ಗಳನ್ನ ಮಾಡುತ್ತಿದ್ದಾರೆ. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನಿದು ತಿಳಿಸಿ..